en
Feedback

Don't get caught by a cheater! Telemetrio finds and tags such channels 👉 If you want to see the tag, subscribe

TARGET KAS GROUP PAVAN RAJPUT

TARGET KAS GROUP PAVAN RAJPUT

Open in Telegram

ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.

Show more

📈 Analytical overview of Telegram channel TARGET KAS GROUP PAVAN RAJPUT

Channel TARGET KAS GROUP PAVAN RAJPUT (@targetkas20) in the Kannada language segment is an active participant. Currently, the community unites 36 280 subscribers, ranking 5 241 in the Education category and 10 557 in the India region.

📊 Audience metrics and dynamics

Since its creation on невідомо, the project has demonstrated rapid growth, gathering an audience of 36 280 subscribers.

According to the latest data from 31 October, 2026, the channel demonstrates stable activity. Although there has been a change in the number of participants by 964 over the last 30 days and by 100 over the last 24 hours, overall reach remains high.

  • Verification status: Not verified
  • Engagement rate (ER): The average audience engagement rate is 39.04%. Within the first 24 hours after publication, content typically collects 26.23% reactions from the total number of subscribers.
  • Post reach: On average, each post receives 14 153 views. Within the first day, a publication typically gains 9 511 views.
  • Reactions and interaction: The audience actively supports content: the average number of reactions per post is 0.

📝 Description and content policy

The author describes the resource as a platform for expressing subjective opinions:
“ನಾವು ಬೆಳೆಯೋಣ ಜೊತೆಗೆ ಬೇರೆಯವರನ್ನು ಬೆಳೆಸೋಣ,ಒಟ್ಟಿನಲ್ಲಿ ಎಲ್ಲರಿಗೂ ಒಳ್ಳೆದಾಗಲಿ ಎನ್ನೋಣ,ಕನ್ನಡದಲ್ಲಿ ಪರೀಕ್ಷೆ ತಯಾರಿ ಮಾಡುವವರಿಗೆ ವಿಶೇಷ ಆದ್ಯತೆ ಮತ್ತು ಕನ್ನಡ ಸರ್ಕಾರಿ ಶಾಲೆಯಲ್ಲಿ ಕನ್ನಡ ಮೀಡಿಯಂ ಅಲ್ಲಿ ಓದಿದವರು ಒಳ್ಳೆ ಹುದ್ದೆಗೆ ಹೆಚ್ಚು ಜನ ಆಯ್ಕೆ ಆಗಬೇಕು ಅದು ನಮ್ಮಉದ್ದೇಶ.”

Thanks to the high frequency of updates (latest data received on 01 November, 2026), the channel maintains relevance and a high level of publication reach. Analytics show that the audience actively interacts with content, making it an important point of influence in the Education category.

36 280
Subscribers
+10024 hours
+1 0787 days
+96430 days
Posts Archive
ಸ್ಪರ್ಧಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ಸ್ಪರ್ಧಾರ್ಥಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.

✅ ನಾಡಿನ ಸಮಸ್ತ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. 🎯 ಕನ್ನಡ ನಾಡಿನ ಲಕ್ಷಾಂತರ ಯುವಜನತೆಯ ಕನಸುಗಳು ಇಂದಿಗೂ ಅತ್ಯಂತ ಕ್ಲಿಷ್ಟಕರವಾದ ಹಾದಿಯಲ್ಲೇ ಸಾಗುತ್ತಿವೆ. ಪರೀಕ್ಷೆಗಳಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ತಡೆಯಲು ಪ್ರಾಧಿಕಾರಗಳು ಕೇವಲ ಪರೀಕ್ಷೆ ನಡೆಸುವುದು ಮಾತ್ರವಲ್ಲದೆ, ನೈಜ ಪ್ರತಿಭೆಗಳನ್ನು ರಕ್ಷಿಸುವ ನಿಟ್ಟಿನಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಇಂದಿನ ತುರ್ತು ಅಗತ್ಯ. 🎯ಒಂದೆಡೆ ಕೆಪಿಎಸ್‌ಸಿ ಹಗರಣದ ತನಿಖೆ ಹೈಕೋರ್ಟ್ ಆದೇಶದಂತೆ ವಿಶೇಷ ತನಿಖಾ ದಳದ ಹೆಗಲೇರಿದ್ದರೆ, ಇನ್ನೊಂದೆಡೆ ಪಾರದರ್ಶಕತೆಗೆ ಹೆಸರಾಗಿದ್ದ ಕೆಇಎ ಮೇಲೆಯೂ ವಿದ್ಯಾರ್ಥಿಗಳಲ್ಲಿ ಅನುಮಾನದ ಕಾರ್ಮೋಡ ಕವಿಯುತ್ತಿರುವುದು ತೀವ್ರ ನೋವಿನ ಸಂಗತಿ. 📌 ಈ ಹಿಂದೆ ಕೆಎಸ್‌ಆರ್‌ಪಿ ಪರೀಕ್ಷೆಯಲ್ಲಿ ಕನಿಷ್ಠ ಅಂಕ ಪಡೆದ ಕೆಲವರು, ಇಲ್ಲಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ ಎಂಬ ಅಂಕಿಅಂಶಗಳ ಮಾಹಿತಿಯನ್ನು ವಿದ್ಯಾರ್ಥಿಗಳು ಸಂಗ್ರಹಿಸುತ್ತಿದ್ದಾರೆ. ದಿನರಾತ್ರಿ ಬೆವರು ಸುರಿಸಿ ನಿದ್ದೆಗೆಟ್ಟು ಓದಿದ ನೈಜ ಪ್ರತಿಭೆಗಳಿಗೆ ಅನ್ಯಾಯವಾಗಬಾರದು. ಪ್ರಾಧಿಕಾರವು ತಕ್ಷಣವೇ ಸಮಗ್ರ ತನಿಖೆ ನಡೆಸಿ, ಶಂಕಿತ ಪಟ್ಟಿಗಳ ಸತ್ಯಾಸತ್ಯತೆಯನ್ನು ನಾಡಿನ ಮುಂದೆ ಬಹಿರಂಗಪಡಿಸಿ ನ್ಯಾಯ ಒದಗಿಸಬೇಕು. 📌 SSC ತನ್ನ ಆನ್‌ಲೈನ್ ಪರೀಕ್ಷೆಗಳಲ್ಲಿ ಅನುಸರಿಸುವ ಕಟ್ಟುನಿಟ್ಟಿನ ನಿಯಮಗಳನ್ನು ಕೆಇಎ ಕೂಡ ಅಳವಡಿಸಿಕೊಳ್ಳಬೇಕಿದೆ. SSC ಪರೀಕ್ಷೆಗಳಲ್ಲಿ ಅಭ್ಯರ್ಥಿಯು ಗಣಕಯಂತ್ರ ಬಿಟ್ಟು ಬೇರೆಡೆ ನೋಡುವುದು ಅಥವಾ ಕೇವಲ ಒಂದೆರಡು ಸೆಕೆಂಡುಗಳಲ್ಲಿ ಹತ್ತಾರು ಪ್ರಶ್ನೆಗಳಿಗೆ ಉತ್ತರಿಸುವಂತಹ ಅಸಹಜ ನಡವಳಿಕೆಗಳನ್ನು ಕ್ಯಾಮೆರಾ ಮತ್ತು ಸಿಸ್ಟಮ್ ನಿಖರವಾಗಿ ದಾಖಲಿಸುತ್ತದೆ. 📌 ಇಂತಹ ಅನುಮಾನಾಸ್ಪದ ನಡವಳಿಕೆ ಕಂಡುಬಂದಾಗ ಅಥವಾ ಸಹಿ ಹೊಂದಾಣಿಕೆಯಾಗದಿದ್ದಾಗ SSC ಆ ಅಭ್ಯರ್ಥಿಗಳ ಫಲಿತಾಂಶವನ್ನು ತಡೆಹಿಡಿದು ವಿತ್‌ಹೆಲ್ಡ್ ಲಿಸ್ಟ್ (Withheld List) ಬಿಡುಗಡೆ ಮಾಡುತ್ತದೆ. ಆ ಅಭ್ಯರ್ಥಿಗಳಿಗೆ ಕರೆಯಿಸಿ, ಅತಿ ಕಡಿಮೆ ಸಮಯದಲ್ಲಿ ಇಷ್ಟು ಪ್ರಶ್ನೆಗಳಿಗೆ ಹೇಗೆ ಉತ್ತರಿಸಿದಿರಿ ಮತ್ತು ಪರೀಕ್ಷೆ ಬರೆಯುವಾಗ ಪಕ್ಕದಲ್ಲಿ ಏಕೆ ನೋಡುತ್ತಿದ್ದಿರಿ ಎಂದು ಸ್ಪಷ್ಟನೆ ಕೇಳಿ ತನಿಖೆ ನಡೆಸಲಾಗುತ್ತದೆ. 📌 ಕೆಇಎ ಸಹ ಇದೇ ಮಾದರಿಯನ್ನು ಕಡ್ಡಾಯವಾಗಿ ಅನುಸರಿಸಬೇಕು. ಫಲಿತಾಂಶ ಅಥವಾ ಅಂಕಪಟ್ಟಿ ಬಿಡುಗಡೆ ಮಾಡುವ ಮುನ್ನವೇ, ಸ್ವತಃ ಎಲ್ಲಾ ಅಭ್ಯರ್ಥಿಗಳ ಹಿಂದಿನ ಅಂಕಗಳನ್ನು ತುಲನೆ ಮಾಡಬೇಕು. ಹಿಂದಿನ ಪರೀಕ್ಷೆಗಳಲ್ಲಿ ತೀರಾ ಕಡಿಮೆ ಅಂಕ ಪಡೆದು ದಿಢೀರನೆ ಇದೀಗ ಅತಿ ಹೆಚ್ಚು ಅಂಕ ಗಳಿಸಿದ ಅಭ್ಯರ್ಥಿಗಳನ್ನು ಗುರುತಿಸಿ, ಸಂಶಯಾಸ್ಪದ ಅಭ್ಯರ್ಥಿಗಳ ಪಟ್ಟಿಯನ್ನು ಮಾಡಬೇಕು. 📌 ಈ ತುಲನಾ ವಿಧಾನದಲ್ಲಿ ಒಂದು ನ್ಯೂನತೆಯೂ ಇದೆ. ಅಕ್ರಮ ಮಾಡುವ ಉದ್ದೇಶದಿಂದಲೇ ಹಿಂದಿನ ಯಾವ ಪರೀಕ್ಷೆಯನ್ನೂ ಬರೆಯದೆ ನೇರವಾಗಿ ಬಂದು ಪರೀಕ್ಷೆ ಬರೆದವರನ್ನು ಈ ರೀತಿಯ ಅಂಕಗಳ ತುಲನೆಯಿಂದ ಹಿಡಿಯುವುದು ಕಷ್ಟವಾಗುತ್ತದೆ. 📌 ಆದರೂ, ಪ್ರಸ್ತುತ ವಿಎಒ (VAO) ಪರೀಕ್ಷೆಯಲ್ಲಿ ಅಕ್ರಮಗಳು ಹೊರಬಂದಿರುವ ಹಿನ್ನೆಲೆಯಲ್ಲಿ, ಕೆಇಎ ತನ್ನ ಬಳಿ ಇರುವ ಸಂಪೂರ್ಣ ಡೇಟಾವನ್ನು ಬಳಸಿಕೊಂಡು ಸಂಶಯಾಸ್ಪದ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿ ತಾನಾಗಿಯೇ ಆಂತರಿಕ ತನಿಖೆ ನಡೆಸಿ ಸತ್ಯಾಸತ್ಯತೆಯನ್ನು ಪರಿಶೀಲಿಸಬೇಕು. 🎯 ಪ್ರಾಧಿಕಾರವು ತಕ್ಷಣವೇ ಸಮಗ್ರ ತನಿಖೆ ನಡೆಸಬೇಕು ಎಂಬುದು ಲಕ್ಷಾಂತರ ಪ್ರಾಮಾಣಿಕ ವಿದ್ಯಾರ್ಥಿಗಳ ಪರವಾದ ನಮ್ಮ ಕಳಕಳಿಯ ವಿನಂತಿ . ದಿನರಾತ್ರಿ ಬೆವರು ಸುರಿಸಿ ನಿದ್ದೆಗೆಟ್ಟು ಓದುತ್ತಿರುವ ಕಡುಬಡವನ ಮಕ್ಕಳ ಭವಿಷ್ಯದ ಜೊತೆ ಯಾವುದೇ ಮೋಸವಾಗದಂತೆ ನ್ಯಾಯಯುತವಾಗಿ ನೇಮಕಾತಿಗಳು ನಡೆಯಲಿ. ಜೈ ಹಿಂದ್‌ ಜೈ ಕರ್ನಾಟಕ... ಆತ್ಮೀಯರು ಲಕ್ಷ್ಮೀಕಾಂತ.

ಸ್ಪರ್ಧಾರ್ಥಿಗಳು ಸಮಯ ಕೇಳಿದ್ರೆ ಪರೀಕ್ಷೆಗೆ ಅವರು ಸೀರಿಯಸ್ ಆಗಿ ಅಧ್ಯಯನ ಮಾಡುವರು ಅಲ್ಲ ಅಂತೇ,ಈಗ ನೀವು ಎಷ್ಟು ಸೀರಿಯಸ್ ಆಗಿ ಕ್ರಮಗಳನ್ನು ಕೈಗೊಳ್ಳುತ್ತೀರಿ ನಾವು ನೋಡ್ತೀವಿ, ಮಾನ್ಯ ಪ್ರಸನ್ನ ಸರ್ ಅವರೇ ಪಾರದರ್ಶಕತೆ ಇಂದ ಪರೀಕ್ಷೆ ಮಾಡೋಕೆ ಈಗ ನೀವು ಎಷ್ಟು ಸೀರಿಯಸ್ ಆಗಿ ಇದ್ದೀರಿ ಅಂತ ಇಡೀ ಕರ್ನಾಟಕ ನೋಡಿ ಆಯ್ತು,ಪರೀಕ್ಷಾ ಕೇಂದ್ರದಲ್ಲಿ ಮೊಬೈಲ್ ತಗೊಂಡು ಹೋಗುವದು ಗೊತ್ತಿಲ್ದೆ ಇರೋ ಅಷ್ಟು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳುವಲ್ಲಿ ನೀವು ತುಂಬಾ ಸೀರಿಯಸ್ ಆಗಿ ಇದ್ದೀರಿ ಎಂದು,ನೋಡೋಣ ಇದಕ್ಕೆ ಏನು ಉತ್ತರ ಕೊಡುತ್ತೀರಿ ಅಂತ.

Voice message01:55

ಪ್ರಸನ್ನ ಸರ್ ಅವಸರ ಅವಸರದಲ್ಲಿ ಪರೀಕ್ಷೆ ಮಾಡೋದು,ನಾವು ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ತುಂಬಾ ಪಾರದರ್ಶಕವಾಗಿ ಪರೀಕ್ಷೆ ಮಾಡಿದ್ದ
ಪ್ರಸನ್ನ ಸರ್ ಅವಸರ ಅವಸರದಲ್ಲಿ ಪರೀಕ್ಷೆ ಮಾಡೋದು,ನಾವು ಎಲ್ಲಾ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ತುಂಬಾ ಪಾರದರ್ಶಕವಾಗಿ ಪರೀಕ್ಷೆ ಮಾಡಿದ್ದೇವೆ ಇಲ್ಲಿ ಏನು ಅಕ್ರಮ ಕಂಡುಬಂದಿಲ್ಲ ಅಂತ ಪತ್ರಿಕಾ ಹೇಳಿಕೆ ದೊಡ್ಡದಾಗಿ ಕೊಡೋದು, ಇಲ್ಲಿ ನೋಡಿದ್ರೆ ಪರೀಕ್ಷೆ ಕೊಠಡಿಯಲ್ಲಿಯೇ ಮೊಬೈಲ್ ತಗೊಂಡು ಹೋಗುತ್ತಾರೆ,ಅಂದ್ರೆ ಏನ್ರೀ ಇದು ಇದು ಕಠಿಣ ಕ್ರಮವೇ? ಇದು ಒಂದೇ ಆಗಿದೆಯಾ ಅಥವಾ ಇಂತ ಇನ್ನೂ ಎಷ್ಟು ಅಕ್ರಮಗಳು ಆಗಿದ್ದಾವೆ,ಪ್ರಾಮಾಣಿಕವಾಗಿ ಹಗಲು ರಾತ್ರಿ ಓದಿ ಪರೀಕ್ಷೆ ಬರೆದವರ ಕಥೆ ಏನು,kea ಕೂಡ KPSC ದಾರಿಯಲ್ಲಿ ಸಾಗ್ತಾ ಇದಿಯಾ ಹೇಗೆ, ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ ಅಂತೇ ಪರೀಕ್ಷೆಯಲ್ಲಿ ಮೊಬೈಲ್ ತಗೊಂಡು ಹೋಗೋದು ನಿಮ್ಮ ಗಮನಕ್ಕೆ ಇರಲ್ಲ ಅಂದ್ರೆ ಅದು ಹೆಗ್ರಿ ಪರೀಕ್ಷೆ ಮಾಡ್ತೀರಿ,ಇದರಲ್ಲಿ ಯಾರ ಕೈವಾಡ ಇದೆ,ಮೊಬೈಲ್ ತಗೊಂಡು ಹೋಗಲು ಯಾರು ಅವಕಾಶ ನೀಡಿದ್ರು,ಇಂತ ಇನ್ನೂ ಎಷ್ಟು ಅಕ್ರಮಗಳು ಆಗಿದ್ದಾವೆ ಉತ್ತರಿಸಬೇಕು, ಇದು ಅಷ್ಟೇ ಅಲ್ಲಾ ಈಗ omr ತಿದ್ದಿದರೆ ಸಿಗ್ತೀವಿ ಅಂತ ಹೇಳಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡುವ ಹಂತಕ್ಕೆ ಇದ್ದಾರೆ ಎಂಬ ಸುದ್ದಿ ಇದೆ ಅದೆಷ್ಟು ನಿಜಾ ಎಲ್ಲವೂ ಪಾರದರ್ಶಕ ತನಿಖೆ ಮಾಡಿ ಪ್ರತಿಯೊಂದು ಒಂದು ಹುದ್ದೆಗೆ ಪ್ರಾಮಾಣಿಕರು ಆಯ್ಕೆ ಆಗಲಿ ಎಂಬುದು ನಮ್ಮ ಆಶಯ,kea ಒಂದರ ಮೇಲೆ ಎಲ್ಲರ ನಂಬಿಕೆ ಇದೆ ಈಗ ನೀವು ಅದೇ ರೀತಿ ಅಂದ್ರೆ ಸ್ಪರ್ಧಾರ್ಥಿಗಳ ಭವಿಷ್ಯ ಏನಾಗಬೇಕು,ಇನ್ನೂ ಹೆಚ್ಚಿನ ಕಠಿಣ ಕ್ರಮ ಕೈಗೊಳ್ಳಿ.

photo content

photo content

+1
ಜೆಇ_ಸಿವಿಲ್_JE_Civil_ಮತ್ತು_ಸಮಾನ_ಹುದ್ದೆಗಳು_ಕೆಕೆ_2026.pdf1.99 MB

KEA ಇಂದ ಈ ಎಲ್ಲಾ ಹುದ್ದೆಗಳ ನೇಮಕಾತಿ ಅಧಿಸೂಚನೆ ಇದೀಗ ಅಧಿಕೃತವಾಗಿ ಪ್ರಕಟವಾಗಲಿದೆ.
KEA ಇಂದ ಈ ಎಲ್ಲಾ ಹುದ್ದೆಗಳ ನೇಮಕಾತಿ ಅಧಿಸೂಚನೆ ಇದೀಗ ಅಧಿಕೃತವಾಗಿ ಪ್ರಕಟವಾಗಲಿದೆ.

KEA ಮೂಲಕ ನೇಮಕಾತಿ ಅಧಿಸೂಚನೆ.

ಈ ಮೇಲಿನ ಹುದ್ದೆಗಳಿಗೆ ಪಠ್ಯಕ್ರಮ ಕುರಿತು ಮಾಹಿತಿ.
ಈ ಮೇಲಿನ ಹುದ್ದೆಗಳಿಗೆ ಪಠ್ಯಕ್ರಮ ಕುರಿತು ಮಾಹಿತಿ.

ಹುದ್ದೆಗಳ ಮಾಹಿತಿ ಮತ್ತು ವಿದ್ಯಾರ್ಹತೆ ಕುರಿತು.
ಹುದ್ದೆಗಳ ಮಾಹಿತಿ ಮತ್ತು ವಿದ್ಯಾರ್ಹತೆ ಕುರಿತು.

12813_261031_180319.pdf1.23 MB

+3
SDA_RPC_COP_31102026_1kannada.pdf

Share DOC-20261031-WA0012.pdf

Share DOC-20261031-WA0010.pdf

photo content

ನಾನು ಮೊದಲು ಇದೇ ಮಾತು ಹೇಳಿದ ಈಗಲೂ ಅದೇ ಹೇಳ್ತಾ ಇದ್ದೇನೆ,ನಮ್ಮದು ಕೇವಲ ಯಾರು ಜಾಬ್ ಅಲ್ಲಿ ಇದ್ದು ಕನ್ನಡ ಮಾಧ್ಯಮ ಅಲ್ಲಿ kas ತಯಾರಿ ಮಾಡ್ತಾ ಇದ್ದಾ
+1
ನಾನು ಮೊದಲು ಇದೇ ಮಾತು ಹೇಳಿದ ಈಗಲೂ ಅದೇ ಹೇಳ್ತಾ ಇದ್ದೇನೆ,ನಮ್ಮದು ಕೇವಲ ಯಾರು ಜಾಬ್ ಅಲ್ಲಿ ಇದ್ದು ಕನ್ನಡ ಮಾಧ್ಯಮ ಅಲ್ಲಿ kas ತಯಾರಿ ಮಾಡ್ತಾ ಇದ್ದಾರೆ ಅವರಿಗೆ ಮಾತ್ರ ನಮ್ಮ ಕೋರ್ಸ್ ಅಲ್ಲಿ ಅವಕಾಶ ಇರುತ್ತೆ, ನಿಮಗೆ PC,PSI,FDA,SDA, ಗ್ರೂಪ್ C ಹುದ್ದೆಗಳಿಗೆ ಪರೀಕ್ಷೆಗೆ ಉತ್ತಮ ಗುಣಮಟ್ಟದ ರಿಸೋರ್ಸ್ ಮತ್ತು ಮಾರ್ಗದರ್ಶನ ಬೇಕು ಅಂದ್ರೆ VKINGDOM ವಿಶ್ವ ಸರ್ ದು ಮಾರ್ಗದರ್ಶನ ಪಡೆದುಕೊಳ್ಳಿ,ನೀವು ಚೆನ್ನಾಗಿ ಅವರ ಮಾರ್ಗದರ್ಶನದಲ್ಲಿ ನಿರಂತರ ಪ್ರಯತ್ನ ಮಾಡಿದ್ದೆ ಆದಲ್ಲಿ ನಿಮಗೆ ಕಂಡಿತಾ ಒಳ್ಳೆ ಅಂಕಗಳು ಬಂದೇ ಬರುತ್ತವೆ ನನಗೆ ಅವರ ಗುಣಮಟ್ಟದ ಮಾರ್ಗದರ್ಶನದ ಮೇಲೆ ನಂಬಿಕೆ ಇದೆ. ಒಳ್ಳೇದು ಆಗಲಿ ಎಲ್ಲರಿಗೂ ತುಂಬಾ ಒಳ್ಳೆ ಅವಕಾಶಗಳು ನಿಮ್ಮ ಮುಂದೆ ಇದ್ದಾವೆ ಈ ಬಾರಿ ಇಂತ ಉತ್ತಮ ಅವಕಾಶ ಕಳೆದುಕೊಳ್ಳಬೇಡಿ,ಯಶಸ್ಸು ನಿಮ್ಮದಾಗಲಿ.

TARGET KAS GROUP PAVAN RAJPUT - Statistics & analytics of Telegram channel @targetkas20