ಆಧ್ಯಾತ್ಮಿಕ ಪ್ರಪಂಚ
Open in Telegram
2 091
Subscribers
+224 hours
+57 days
+430 days
Data loading in progress...
Similar Channels
Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
September '26
September '26
+16
in 0 channels
August '26
+61
in 0 channels
Get PRO
July '26
+60
in 0 channels
Get PRO
June '26
+50
in 0 channels
Get PRO
May '26
+54
in 12 channels
Get PRO
April '26
+39
in 0 channels
Get PRO
March '26
+21
in 0 channels
Get PRO
February '26
+28
in 10 channels
Get PRO
January '26
+57
in 0 channels
Get PRO
December '25
+33
in 1 channels
Get PRO
November '25
+26
in 11 channels
Get PRO
October '25
+33
in 0 channels
Get PRO
September '25
+50
in 1 channels
Get PRO
August '25
+52
in 15 channels
Get PRO
July '25
+36
in 0 channels
Get PRO
June '25
+40
in 12 channels
Get PRO
May '25
+37
in 0 channels
Get PRO
April '25
+38
in 0 channels
Get PRO
March '25
+53
in 11 channels
Get PRO
February '25
+50
in 0 channels
Get PRO
January '25
+84
in 0 channels
Get PRO
December '24
+129
in 0 channels
Get PRO
November '24
+129
in 0 channels
Get PRO
October '24
+143
in 1 channels
Get PRO
September '24
+139
in 0 channels
Get PRO
August '24
+126
in 0 channels
Get PRO
July '24
+148
in 0 channels
Get PRO
June '24
+144
in 0 channels
Get PRO
May '24
+154
in 0 channels
Get PRO
April '24
+140
in 8 channels
Get PRO
March '24
+134
in 0 channels
Get PRO
February '24
+178
in 0 channels
Get PRO
January '24
+286
in 0 channels
Get PRO
December '23
+231
in 0 channels
Get PRO
November '23
+15
in 2 channels
Get PRO
October '23
+18
in 0 channels
Get PRO
September '23
+14
in 0 channels
Get PRO
August '23
+13
in 0 channels
Get PRO
July '23
+14
in 0 channels
Get PRO
June '23
+15
in 0 channels
Get PRO
May '23
+4
in 0 channels
Get PRO
April '23
+14
in 0 channels
Get PRO
March '23
+11
in 0 channels
Get PRO
February '23
+13
in 0 channels
Get PRO
January '23
+12
in 0 channels
Get PRO
December '22
+7
in 0 channels
Get PRO
November '22
+9
in 0 channels
Get PRO
October '22
+9
in 0 channels
Get PRO
September '22
+17
in 0 channels
Get PRO
August '22
+13
in 0 channels
Get PRO
July '22
+9
in 0 channels
Get PRO
June '22
+13
in 0 channels
Get PRO
May '22
+12
in 0 channels
Get PRO
April '22
+19
in 0 channels
Get PRO
March '22
+8
in 0 channels
Get PRO
February '22
+8
in 0 channels
Get PRO
January '22
+17
in 0 channels
Get PRO
December '21
+16
in 0 channels
Get PRO
November '21
+12
in 0 channels
Get PRO
October '21
+12
in 0 channels
Get PRO
September '21
+29
in 0 channels
Get PRO
August '21
+34
in 0 channels
Get PRO
July '21
+21
in 0 channels
Get PRO
June '21
+27
in 0 channels
Get PRO
May '21
+17
in 0 channels
Get PRO
April '21
+15
in 0 channels
Get PRO
March '21
+24
in 0 channels
Get PRO
February '21
+8
in 0 channels
Get PRO
January '21
+329
in 0 channels
| Date | Subscriber Growth | Mentions | Channels | |
| 10 September | +3 | |||
| 09 September | +3 | |||
| 08 September | +3 | |||
| 07 September | +1 | |||
| 06 September | +2 | |||
| 05 September | +1 | |||
| 04 September | +1 | |||
| 03 September | 0 | |||
| 02 September | +1 | |||
| 01 September | +1 |
Channel Posts
| 2 | 🚩🌺🌅🌺🚩
*ಮುಂಜಾನೆಯ ಸೂಳ್ನುಡಿ*
ಬ್ರಹ್ಮಕ್ಕೆ ಉಪಾಸ್ಯತ್ವವನ್ನು ನಿಷೇಧಿಸಿದಂತೆ ವೇದ್ಯತ್ವವನ್ನು ನಿಷೇಧಿಸಿದೆಯೆಂದು ಹೇಳುತ್ತಾರೆ :
*ವಿದಿತಾದನ್ಯದೇವೇತಿ ಶ್ರುತೇರ್ವೇದ್ಯತ್ವಮಸ್ಯ ನ |*
*ಯಥಾ ಶ್ರುತ್ಯೈವ ವೇದ್ಯಂ ಚೇತ್ತಥಾ ಶ್ರುತ್ಯಾಪ್ಯುಪಾಸ್ಯತಾಂ ||*
'ಅದು ತಿಳಿದಿದ್ದಕ್ಕಿಂತಲೂ ಬೇರೆ' ಎಂದು ಶ್ರುತಿಯು1 ಹೇಳುವುದರಿಂದ ಬ್ರಹ್ಮವು ಅರಿಯತಕ್ಕದ್ದೂ ಅಲ್ಲ. ಹಾಗಾದರೆ ಶ್ರುತಿಯು ನಿರೂಪಿಸಿದಂತೆ2 ಅರಿಯತಕ್ಕದ್ದು - ಎನ್ನುವೆಯಾದರೆ ಶ್ರುತಿಯು ಹೇಳಿರುವಂತೆಯೇ ಉಪಾಸನೆಯೂ ನಡೆಯಲಿ.
{1, ಅದು ತಿಳಿದದ್ದಕ್ಕಿಂತಲೂ ಬೇರೆ ತಿಳಿಯದ್ದಕ್ಕಿಂತಲೂ ಬೇರೆ ' *ಅನ್ಯದೇವ ತದ್ವಿದಿತಾದಥೋ ಅವಿದಿತಾದಧಿ*(ಕೇ. ಉ.೧.೪.)
2, 'ಆತ್ಮನು ಏಕಾಗ್ರವಾದ ಬುದ್ಧಿಯಿಂದ ನೋಡಲ್ಪಡುತ್ತಾನೆ' *ದೃಶ್ಯತೇ ತ್ವಗ್ರ್ಯಯಾ ಬುದ್ಧ್ಯಾ.*(ಕ. ಉ.೧.೩.೧೨).}
*(ಧ್ಯಾನದೀಪ ಪ್ರಕರಣ)*
ಮುಂದುವರಿಯುತ್ತದೆ..
*ಸರಳವಾದ ಅರ್ಥ:*
_ಬ್ರಹ್ಮವು ತಿಳಿಯದು, ಉಪಾಸನೆ ಮಾಡಲಾಗದು ಎಂದು ಕೆಲವರು ಹೇಳುತ್ತಾರೆ. ಆದರೆ ಗುರುಗಳು ಹೇಳುತ್ತಾರೆ - ಅದು ನಿಜವಲ್ಲ._
ಶ್ರುತಿಯು ಹೇಳುತ್ತದೆ -
_ಅದು ತಿಳಿದದ್ದಕ್ಕಿಂತ ಬೇರೆ, ತಿಳಿಯದ್ದಕ್ಕಿಂತ ಬೇರೆ._
ಎಂದರೆ ದೇವರನ್ನು ಒಂದು ವಸ್ತುವಿನಂತೆ, ಕುರ್ಚಿ ಮೇಜಿನಂತೆ ತಿಳಿಯಲು ಆಗುವುದಿಲ್ಲ. ಏಕೆಂದರೆ ದೇವರು ನೋಡುವ ವಸ್ತುವಲ್ಲ, ನೋಡುವವನು.
ಕಣ್ಣಿನಿಂದ ಎಲ್ಲವನ್ನೂ ನೋಡಬಹುದು, ಆದರೆ ಕಣ್ಣನ್ನೇ ಕಣ್ಣಿನಿಂದ ನೋಡಲು ಆಗುವುದಿಲ್ಲವಲ್ಲ, ಹಾಗೆ.
ಹಾಗಾದರೆ ದೇವರನ್ನು ತಿಳಿಯುವುದಾದರೂ ಹೇಗೆ?
ಇದಕ್ಕೆ ಇನ್ನೊಂದು ಶ್ರುತಿಯೇ ಉತ್ತರ ಕೊಡುತ್ತದೆ -
_ಏಕಾಗ್ರವಾದ, ನಿರ್ಮಲವಾದ ಬುದ್ಧಿಯಲ್ಲಿ ಆತ್ಮನು ತಾನಾಗಿಯೇ ಕಾಣಿಸಿಕೊಳ್ಳುತ್ತಾನೆ._
*ಇದರ ಅರ್ಥವೇನು?*
ನಮ್ಮ ಮನಸ್ಸು ಗಾಳಿಗೆ ಅಲುಗಾಡುವ ದೀಪದಂತೆ. ದೀಪ ಅಲುಗಾಡಿದರೆ ಬೆಳಕು ಸರಿಯಾಗಿ ಬೀಳುವುದಿಲ್ಲ.
ಧ್ಯಾನ, ಜಪ, ಪೂಜೆ ಇವೆಲ್ಲವೂ ಆ ದೀಪವನ್ನು ನಿಶ್ಚಲವಾಗಿ ಇಡುವ ಸಾಧನಗಳು. ದೀಪ ನಿಶ್ಚಲವಾದಾಗ ದೇವರು ಹೊರಗಿನಿಂದ ಬರುವುದಿಲ್ಲ, ನಿಮ್ಮೊಳಗೇ ಬೆಳಗುತ್ತಿದ್ದಾನೆ ಎಂದು ಗೊತ್ತಾಗುತ್ತದೆ.
*ಆದ್ದರಿಂದ ಇಂದಿನ ಸಾಧನೆ:*
ದೇವರನ್ನು ಹೊರಗೆ ಹುಡುಕಬೇಡಿ. ಬೆಳಿಗ್ಗೆ ೫ ನಿಮಿಷ ಸುಮ್ಮನೆ ಕುಳಿತು, "ನಾನು ಈ ದೇಹ, ಮನಸ್ಸನ್ನು ನೋಡುತ್ತಿರುವ ಬೆಳಕು" ಎಂದು ಭಾವಿಸಿ ಸುಮ್ಮನಿರಿ.
ಆ ಸುಮ್ಮನಿರುವಿಕೆಯೇ ನಿಜವಾದ ಪೂಜೆ, ಅದೇ ನಿಜವಾದ ಧ್ಯಾನ.
*🙏🌺ಶುಭದಿನವಾಗಲಿ🌺🙏* | 13 |
| 3 | 🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
*ಸತ್ತ್ವೇ ಪ್ರಲೀನಾಃ ಸ್ವರ್ಯಾಂತಿ*
*ನರಲೋಕಂ ತು ರಾಜಸಾಃ ।*
*ತಮೋಲಯಾಸ್ತು ನಿರಯಂ*
*ಯಾಂತಿ ಮಾಮೇವ ನಿರ್ಗುಣಾಃ ॥*
(ಭಾಗವತ)
_“ಸತ್ತ್ವಗುಣದಲ್ಲಿ ಲೀನರಾದವರು ಸ್ವರ್ಗವನ್ನು ಸೇರುತ್ತಾರೆ. ರಾಜಸಗುಣವುಳ್ಳವರು ಮನುಷ್ಯಲೋಕವನ್ನು ಹೊಂದುತ್ತಾರೆ. ತಮೋಗುಣದಲ್ಲಿ ಲೀನರಾದವರು ನರಕವನ್ನು ಸೇರುತ್ತಾರೆ. ಆದರೆ ನಿರ್ಗುಣರಾದವರು ನನ್ನನ್ನೇ ಹೊಂದುತ್ತಾರೆ.”_
ಮನುಷ್ಯನ ಅಂತಃಕರಣದಲ್ಲಿ ಯಾವ ಗುಣವು ಪ್ರಧಾನವಾಗಿರುತ್ತದೆಯೋ, ಅದರ ಅನುಸಾರವಾಗಿ ಅವನಿಗೆ ಗತಿ ದೊರೆಯುತ್ತದೆ. ಸತ್ತ್ವಗುಣ ಪ್ರಧಾನರಾದವರು ಉನ್ನತ ಲೋಕಗಳನ್ನು ಸೇರುತ್ತಾರೆ; ರಜೋಗುಣ ಪ್ರಧಾನರಾದವರು ಮಾನವಲೋಕವನ್ನು ಹೊಂದುತ್ತಾರೆ; ತಮೋಗುಣ ಪ್ರಧಾನರಾದವರು ಅಧೋಗತಿಯನ್ನು ಪಡೆಯುತ್ತಾರೆ.
ಆದರೆ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳನ್ನೂ ಮೀರಿ ನಿರ್ಗುಣ ಸ್ಥಿತಿಯನ್ನು ಹೊಂದಿದವರು ಪರಮಾತ್ಮನನ್ನೇ ಸೇರುತ್ತಾರೆ ಎಂಬುದು ಈ ಶ್ಲೋಕದ ಮುಖ್ಯ ಸಂದೇಶ.
“ಮಾಮೇವ” ಎಂಬ ಪದವು "ಮಾಂ ಏವ" ವಿಶೇಷವಾಗಿ - “ನನ್ನನ್ನೇ, ಪರಮಾತ್ಮನನ್ನೇ” ಎಂಬ ಅರ್ಥವನ್ನು ಸೂಚಿಸುತ್ತದೆ.
*🌷🌺🙏 ☆ ಶುಭದಿನವಾಗಲಿ! ☆ 🙏🌺🌷* | 14 |
| 4 | Photo from Srikanth Matrubai | 74 |
| 5 | 🌺 ಶುಭ ಗುರುವಾರ 🌺
🕉️ ಓಂ ಗುರುವೇ ನಮಃ 🕉️
ಇಂದು ಗುರು ಗ್ರಹದ ಮಹತ್ವವನ್ನು ಸ್ಮರಿಸೋಣ.
🟡 ಗುರು ಗ್ರಹ (ಬೃಹಸ್ಪತಿ) ಜ್ಯೋತಿಷ್ಯದಲ್ಲಿ ಜ್ಞಾನ, ವಿದ್ಯೆ, ಧರ್ಮ, ಆಧ್ಯಾತ್ಮಿಕತೆ, ಸತ್ಯ, ಸದ್ಗುಣ, ಸಂತಾನ, ಸಂಪತ್ತು ಹಾಗೂ ಶುಭಕಾರ್ಯಗಳ ಕಾರಕ ಎಂದು ಪರಿಗಣಿಸಲಾಗುತ್ತದೆ.
📚 ಗುರುವು ಜ್ಞಾನ ಮತ್ತು ವಿವೇಕದ ಸಂಕೇತ. ಜೀವನದಲ್ಲಿ ಸರಿಯಾದ ಮಾರ್ಗದರ್ಶನ, ಉತ್ತಮ ಚಿಂತನೆ, ನಂಬಿಕೆ ಮತ್ತು ಸತ್ಕಾರ್ಯಗಳತ್ತ ನಮ್ಮನ್ನು ಪ್ರೇರೇಪಿಸುವ ಶಕ್ತಿಯನ್ನು ಗುರು ಪ್ರತಿನಿಧಿಸುತ್ತಾನೆ.
🙏 ಗುರುವಿನ ಅನುಗ್ರಹಕ್ಕಾಗಿ:
🔸 ಗುರುವಾರ ಶ್ರೀ ಮಹಾವಿಷ್ಣು ಅಥವಾ ದತ್ತಾತ್ರೇಯ ಸ್ವಾಮಿಯ ಆರಾಧನೆ ಮಾಡುವುದು
🔸 “ಓಂ ಗ್ರಾಂ ಗ್ರೀಂ ಗ್ರೌಂ ಸಃ ಗುರುವೇ ನಮಃ” ಜಪಿಸುವುದು
🔸 ಗುರುಗಳು ಹಾಗೂ ಹಿರಿಯರನ್ನು ಗೌರವಿಸುವುದು
🔸 ಧಾರ್ಮಿಕ ಮತ್ತು ಆಧ್ಯಾತ್ಮಿಕ ಗ್ರಂಥಗಳನ್ನು ಓದುವುದು
🔸 ಬಡವರು ಹಾಗೂ ಅಗತ್ಯವಿರುವವರಿಗೆ ದಾನ ಮಾಡುವುದು
🔸 ಸತ್ಯ, ಧರ್ಮ ಮತ್ತು ಸದಾಚಾರವನ್ನು ಪಾಲಿಸುವುದು
🟡 ಗುರು ದೇವರ ಪ್ರಾರ್ಥನೆ:
“ದೇವಾನಾಂ ಚ ಋಷೀಣಾಂ ಚ ಗುರುಂ ಕಾಂಚನಸನ್ನಿಭಮ್ ।
ಬುದ್ಧಿಭೂತಂ ತ್ರಿಲೋಕೇಶಂ ತಂ ನಮಾಮಿ ಬೃಹಸ್ಪತಿಮ್ ॥”
✨ ಇಂದಿನ ಸಂದೇಶ:
“ಗುರುವಿನ ಕೃಪೆಯಿಂದ ನಮ್ಮ ಜೀವನದಲ್ಲಿ ಜ್ಞಾನ, ವಿವೇಕ ಮತ್ತು ಸದ್ಬುದ್ಧಿ ಬೆಳೆಯಲಿ. ಹಿರಿಯರ ಆಶೀರ್ವಾದ ಹಾಗೂ ಭಗವಂತನ ಅನುಗ್ರಹದಿಂದ ನಮ್ಮ ಪ್ರತಿಯೊಂದು ಕಾರ್ಯವೂ ಶುಭಕರವಾಗಿ ನೆರವೇರಲಿ.”
🌺 ನಿಮಗೂ ನಿಮ್ಮ ಕುಟುಂಬಕ್ಕೂ ಶುಭ ಗುರುವಾರ.
🕉️ ಗುರು ಬ್ರಹ್ಮಾ, ಗುರು ವಿಷ್ಣು, ಗುರು ದೇವೋ ಮಹೇಶ್ವರಃ! 🙏
🌼 ಓಂ ಗುರುವೇ ನಮಃ! 🌼 | 82 |
| 6 | ಜ್ಯೋತಿಷ್ಯದಲ್ಲಿ ನೈಸರ್ಗಿಕ ಆಶುಭ ಗ್ರಹ ಎಂದೆನಿಸಿರುವ *ಕೇತು* ಕುರಿತು ಧೇನಿಸೋಣ.
ಕೇತು ಎಂದರೆ ಬೀಜ.
ಬೀಜ ಬಿತ್ತಿದಾಗ ಅದು ಸೀಳಿ ಎರಡಾಗಿ ಸಸಿ ರೂಪದಲ್ಲಿ ಹೊರಗೆ ಬರುತ್ತದೆ.
ಅದೇ ರೀತಿ ನಾವು ಹುಟ್ಟಿದಾಗ ನಮ್ಮ ಅಂಗಗಳು ಕೇತುವಿನಿಂದ ಎರಡೆರಡಾಗಿ ಹೊಮ್ಮುತ್ತವೆ.
ಅಂದರೆ ಎಡ ಪಪ್ಪುಸ ಬಲ ಪುಪ್ಪುಸ , ಎಡಕಣ್ಣು ಬಲಕಣ್ಣು, ಎಡ ಕಿಡ್ನಿ, ಬಲ ಕಿಡ್ನಿ.
ನಿಸರ್ಗಾನುಸಾರ ಒಂದು ಎರಡಾಗುವುದು ಅಂದರೆ ಅದು ಸ್ತ್ರೀ ಸೂಚಕ.
ಹೀಗಾಗಿಯೇ 5ರಲ್ಲಿ ಕೇತು ಇದ್ದಾಗ ಸ್ತ್ರೀ ಸಂತಾನದ ಸಾಧ್ಯತೆ ಬಹಳ.
ಜಾತಕದಲ್ಲಿ ಯಾವ ಮನೆಯಲ್ಲಿ ಕೇತು ಇರುತ್ತಾನೋ ಅದನ್ನು ಒಂದು ಹಂತ & ಒಂದು ಸಮಯದವರೆಗೆ ಒಡೆಯುತ್ತಾನೆ.
ಅಂದರೆ ಆಸ್ತಿ ಪಾಲು, ವಿವಾದಗಳು, ಆರೋಗ್ಯ ಸಮಸ್ಯೆಗಳು, ಬೇರೆ ಬೇರೆ ಪ್ರಿಮೈಸಿಸ್ ನಿರ್ಮಾಣ ಮಾಡುವುದು , ಸ್ತ್ರೀ ಸಂತಾನ, ಸ್ತ್ರೀ ಸಂತಾನಕ್ಕೆ ತೊಂದರೆಗಳು, ಅವಳಿ ಜವಳಿ ಸಂತಾನ.
ಯಾವುದೇ ತರಹದ separation ಅಥವಾ splitting ಕೇತುವಿನ ಕೆಲಸವಾಗಿದೆ.
ಕೇತು- ಗ್ರಹಗಳಲ್ಲಿ ಅತ್ಯಂತ ಕೆಳಗೆ, ರವಿ ಅತ್ಯಂತ ಮೇಲೆ ಇವೆ.
ಇದರ ಅರ್ಥ ಅಂತರಾಳದ ಸತ್ಯ ತಿಳಿಯಲು ಆಂತರಿಕವಾಗಿ ಆಳಕ್ಕೆ ಹೋಗಬೇಕಾಗುತ್ತದೆ.
ಪ್ರತಿ 12 ವರ್ಷಕ್ಕೊಮ್ಮೆ ಶರೀರದಲ್ಲಿ ದೊಡ್ಡ ದೊಡ್ಡ ಬದಲಾವಣೆ ಆಗುತ್ತವೆ.
ಹಾಗೆನೇ ಜೀವನ ಹೊಸ ದಿಕ್ಕು ದೆಶೆ ಪಡೆಯುತ್ತದೆ.
ಕೇತುವಿಗೆ ನಾಯಿಯನ್ನು ಹೋಲಿಸುತ್ತಾರೆ.
ಯಾಕೆಂದರೆ ನಾಯಿಯ ಜೀವನಾವಧಿ 12 ವರ್ಷ ಆಗಿದೆ.
ಇನ್ನು ಗುರುವಿನ ಒಂದು ಸುತ್ತು ಸಹ 12ವರ್ಷ ಆಗಿದೆ.
ನಾವುಗಳು ಪ್ರತಿ 12 ವರ್ಷಕ್ಕೊಮ್ಮೆ ಮರು ಹುಟ್ಟು ಪಡೆಯುತ್ತೇವೆ.
ಇದು ಶರೀರದಲ್ಲಿ ಬದಲಾವಣೆ ಸಹಿಸದ ಹಂತದ ವರೆಗೂ ನಡೆಯುತ್ತದೆ.
ಅಂದರೆ ಆತ್ಮ ಶರೀರ ಬಿಟ್ಟು ಹೋಗಿ ಹೊಸ ಶರೀರ ಪ್ರವೇಶ ಮಾಡುವ ತನಕ.
ಕೇತುವಿನ ಭುಕ್ತಿ & ಅಂತರ ದಶಗಳ ಫಲವನ್ನು ಮೊದಲಿನ 12 ವರ್ಷ ಹೇಳುವುದು ತುಂಬಾ ಕಷ್ಟ ಯಾಕೆಂದರೆ ಆಗ ಹೋದ ಜನ್ಮದ ಕರ್ಮಗಳು discharge ಆಗುತ್ತಿರುತ್ತವೆ.
ಆ ಕರ್ಮ ಶರೀರದ ಬೆಳವಣಿಗೆಗೆ ಸಹಾಯ ಮಾಡುತ್ತಿರುತ್ತದೆ.
ಕೇತು ಅಂದರೆ ಬ್ರಹ್ಮ ಸೃಷ್ಟಿಕರ್ತ.
ಆದರೆ ಈ ಸೃಷ್ಟಿಗೆ ಆದಿ ಇಲ್ಲ ಯಾಕೆಂದರೆ ಇದು ಹಿಂದಿನ ಜನ್ಮದ ಮುಂದುವರಿಕೆ ಹೊಸ ಶರೀರದಲ್ಲಿ ಆಗಿದೆ ಅಷ್ಟೇ.
ಯಾವುದೇ ತರಹದ ಶಕ್ತಿ ಸಂಗ್ರಹಣೆಯನ್ನು ಕೇತುವಿನ ಮೂಲಕ ತಿಳಿಯಬಹುದು.
ಉದಾ .....ಸ್ತ್ರೀ ಜಾತಕದಲ್ಲಿ ಸಂಗ್ರಹಿತ ಶಕ್ತಿಯು ಗಂಡ ಅಥವಾ ಮಕ್ಕಳಿಗೆ pass ಆಗುತ್ತದೆ.
ಕೇತುವಿನ ಆಜು ಬಾಜು ಮನೆಗಳು ಅಂದರೆ ಕೇತುವಿನಿಂದ 2ನೇ ಮನೆ & 12 ನೇ ಮನೆಗಳು ಸಂತಾನದ ಫಲವತ್ತತೆಗೆ ಶಕ್ತಿ ಕೊಡುತ್ತವೆ.
ಸ್ತ್ರೀ ಜಾತಕದಲ್ಲಿ ಶುಕ್ರ ರಾಹುವಿನ ಸಮೀಪ ಇದ್ದಾಗ ಸಂತಾನದ ಫಲವತ್ತತೆ ಕಡಿಮೆ ಆದರೆ ಕೇತುವಿನ ಸಮೀಪ ಶುಕ್ರ ಇದ್ದರೆ ಸಂತಾನದ ಫಲವತ್ತತೆ ಹೆಚ್ಚಾಗುತ್ತದೆ.
ಕೇತು ಒಂದು ರೀತಿ ಕಂಪ್ಯೂಟರ್ ನ Reset ಬಟನ್ ಇದ್ದ ಹಾಗೆ.
ಮೊದಲು ದೊಡ್ಡ ನಷ್ಟ ನಿಧಾನಕ್ಕೆ ಪ್ರಗತಿಯ ಪಥ. ರಾಹು & ಕೇತುಗಳು ಜಾತಕದ ಮನೆಗಳನ್ನು 2 ಭಾಗಗಳಾಗಿ ವಿಂಗಡಿಸುತ್ತವೆ.
ಯಾವ ಭಾಗದಲ್ಲಿ ಗುರು ಇರುತ್ತಾನೋ ಅದು ಈಗಾಗಲೇ ಏನಿದೆ ಎಂದು ಹೇಳಿದರೆ ಇನ್ನೊಂದು ಭಾಗ ಮುಂದೆ ಪಡೆಯುವುದು ಏನು? ಹೇಳುತ್ತದೆ.
ಕೇತು ಅಂದರೆ ಸಣ್ಣ tunnel ಆಗಿದ್ದು ಅಲ್ಲಿ ಇನ್ನೊಂದು ಗ್ರಹ ಪ್ರವೇಶಿಸಿದಾಗ ತೆವಳಿ ಬವಳಿ ಹೊರಬರಬೇಕು.
ಅಂದರೆ ಗ್ರಹ strong ಆಗಿ ಜೀವನಕ್ಕೆ ಪಥ ತೋರಿಸುತ್ತದೆ.
ಜಾತಕದಲ್ಲಿ ಕೇತುವಿನಿಂದ ಮೊದಲ 6 ಮನೆಗಳು ಶಕ್ತಿಯ ಒಳಹರಿವು ಹೇಳಿದರೆ 8 ರಿಂದ 12ನೇ ಮನೆಗಳು ಶಕ್ತಿಯ ಹೊರ ಹರಿವು ಹೇಳುತ್ತವೆ.
ಕೇತುವಿನ ಸಮೀಪ ಗ್ರಹ ಇದ್ದಾಗ ನೀವು ಪರಿಚಯಸ್ಥರ ನಡುವೆಯೇ ಇರುತ್ತೀರಿ.
ಸ್ತ್ರೀ ಜಾತಕದಲ್ಲಿ ರಾಹುವಿನ ಸಮೀಪ ಶುಕ್ರ ಇದ್ದಾಗ haircut ಮಾಡಿಸಿದರೆ ತೊಂದರೆ ಹೆಚ್ಚು.
ಬುಧನ ಸಮೀಪ ಅಥವಾ ಬುಧನ ಕೂಡ ಕೇತು ಇದ್ದಾಗ concentration ಬಹಳ, ವಾದ ಮಾಡುವ ಚಟ.
ಲಗ್ನದಲ್ಲಿ ಕೇತು ಇದ್ದಾಗ ಜನರು ಅವರ ಇಳಿ ವಯಸ್ಸಿನಲ್ಲಿ ಅವರನ್ನು ಅರ್ಥ ಮಾಡಿಕೊಳ್ಳುತ್ತಾರೆ. | 113 |
| 7 | 🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
*ಆತ್ಮಾನಮನುಶೋಚ ತ್ವಂ*
*ಕಿಮನ್ಯಮನುಶೋಚಸಿ |*
*ಆಯುಸ್ತೇ ಕ್ಷೀಯತೇ ಯಸ್ಯ*
*ಸ್ಥಿತಸ್ಯ ಚ ಗತಸ್ಯ ಚ ||*
(ರಾಮಾಯಣ)
_"ನಿನಗಾಗಿ ನೀನು ಪಶ್ಚಾತ್ತಾಪಪಡು. ಇತರರಿಗಾಗಿ ನೀನು ಶೋಕಿಸುವುದೇಕೆ? ನೀನು ಸುಮ್ಮನೆ ಕುಳಿತಿದ್ದರೂ ಕೆಲಸ ಮಾಡುತ್ತಿದ್ದರೂ ನಿನ್ನ ಆಯುಸ್ಸು ಕ್ಷಯಿಸುತ್ತಲೇ ಇದೆಯಲ್ಲ!"_
ಮನುಷ್ಯನು ಇತರರಿಗಾಗಿ ಅತಿಯಾಗಿ ಶೋಕಿಸುವುದಕ್ಕಿಂತ, ತನ್ನ ಜೀವನವೂ ಕ್ಷಣಕ್ಷಣಕ್ಕೂ ಕ್ಷೀಣಿಸುತ್ತಿದೆ ಎಂಬುದನ್ನು ಅರಿತುಕೊಳ್ಳಬೇಕು. ಜೀವಿತವು ಯಾರಿಗೂ ಶಾಶ್ವತವಲ್ಲ; ಜೀವಂತವಾಗಿರುವವರ ಆಯುಷ್ಯವೂ ಕಡಿಮೆಯಾಗುತ್ತಲೇ ಇರುತ್ತದೆ, ಮೃತರಾದವರ ವಿಷಯದಲ್ಲಿಯೂ ಶೋಕದಿಂದ ಏನನ್ನೂ ಬದಲಾಯಿಸಲಾಗುವುದಿಲ್ಲ.
_“ಸ್ಥಿತಸ್ಯ ಚ ಗತಸ್ಯ ಚ”_ — ಇಲ್ಲಿರುವವನದ್ದಾಗಲಿ, ಹೋಗಿಹೋದವನದ್ದಾಗಲಿ ಎಂಬುದು ಇಲ್ಲಿ ಜೀವನದ ಅನಿತ್ಯತೆಯನ್ನು ಸೂಚಿಸುತ್ತದೆ.
*🌷🌺🙏 ☆ ಶುಭದಿನವಾಗಲಿ! ☆ 🙏🌺🌷* | 116 |
| 8 | 🚩🌺🌅🌺🚩
*ಮುಂಜಾನೆಯ ಸೂಳ್ನುಡಿ*
ಬ್ರಹ್ಮೋಪಾಸನೆಯನ್ನು ಶ್ರುತಿಯು ನಿಷೇಧಿಸುತ್ತದೆ - ಎಂದು ಪೂರ್ವಪಕ್ಷಿಯು ಹೇಳುತ್ತಾನೆ :
*ಬ್ರಹ್ಮ ವಿದ್ಧಿ ತದೇವ ತ್ವಂ ನ ತ್ವಿದಂ ಯದುಪಾಸತೇ |*
*ಇತಿ ಶ್ರುತೇರುಪಾಸ್ಯತ್ವಂ ನಿಷಿದ್ಧಂ ಬ್ರಹ್ಮಣೋ ಯದಿ ||*
'ಅದನ್ನೇ ನೀನು ಬ್ರಹ್ಮವೆಂದು ತಿಳಿ ; ಯಾವುದನ್ನು "ಇದು" ಎಂದು ಜನರು ಉಪಾಸನೆಮಾಡುತ್ತಾರೆಯೊ ಅದಲ್ಲ' ಎಂದು ಶ್ರುತಿಯು1 ಬ್ರಹ್ಮಕ್ಕೆ ಉಪಾಸ್ಯತ್ವವನ್ನು ನಿಷೇಧಿಸಿದೆ ಎನ್ನುವೆಯಾದರೆ--
{1, ಯಾವುದನ್ನು ಮನಸ್ಸಿನಿಂದ ಮನನಮಾಡಲು ಆಗುವುದಿಲ್ಲವೊ, ಯಾವುದರಿಂದ ಮನಸ್ಸು ಮನನಮಾಡಲ್ಪಟ್ಟಿದೆಯೆಂದು ಹೇಳುವರೊ ಅದನ್ನೇ ನೀನು ಬ್ರಹ್ಮವೆಂದು ತಿಳಿ ; ಯಾವುದನ್ನು "ಇದು" ಎಂದು ಜನರು ಉಪಾಸಿಸುವರೊ ಅದಲ್ಲ' *ಯನ್ಮನಸಾ ನ ಮನುತೇ, ಯೇನಾಹುಃ ಮನೋ ಮತಂ|* *ತದೇವ ಬ್ರಹ್ಮ ತ್ವಂ ವಿದ್ಧಿ ನೇವಂ ಯದಿದಮುಪಾಸತೇ ||* [ಕೇ.ಉ. ೧.೬].}
*(ಧ್ಯಾನದೀಪ ಪ್ರಕರಣ)*
ಮುಂದುವರಿಯುತ್ತದೆ..
*೧. ಪೂರ್ವಪಕ್ಷಿಯ ತರ್ಕ ಏನು?*
ಪೂರ್ವಪಕ್ಷಿಗೆ ಧ್ಯಾನ ಮಾಡುವುದು ಇಷ್ಟವಿಲ್ಲ. ಅವನು ಒಂದು ಶ್ರುತಿ ವಾಕ್ಯವನ್ನು ಹಿಡಿದುಕೊಳ್ಳುತ್ತಾನೆ.
ಕೇನೋಪನಿಷತ್ತು ೧.೬ ರಲ್ಲಿ ಹೇಳುತ್ತದೆ:
> *ಯನ್ಮನಸಾ ನ ಮನುತೇ ಯೇನಾಹುರ್ಮನೋ ಮತಮ್ |*
> *ತದೇವ ಬ್ರಹ್ಮ ತ್ವಂ ವಿದ್ಧಿ ನೇದಂ ಯದಿದಮುಪಾಸತೇ ||*
"ಮನಸ್ಸಿನಿಂದ ಯಾವುದನ್ನು ಯೋಚಿಸಲು ಆಗುವುದಿಲ್ಲವೋ, ಮನಸ್ಸಿಗೆ ಯಾವುದರಿಂದ ಯೋಚಿಸುವ ಶಕ್ತಿಯೇ ಬರುತ್ತದೆಯೋ ಅದನ್ನೇ ನೀನು ಬ್ರಹ್ಮ ಎಂದು ತಿಳಿ. ಯಾವುದನ್ನು 'ಇದು' ಎಂದು ಜನರು ಉಪಾಸನೆ ಮಾಡುತ್ತಾರೋ ಅದು ಬ್ರಹ್ಮವಲ್ಲ."
ಇದನ್ನು ನೋಡಿ ಪೂರ್ವಪಕ್ಷಿ ಹೇಳುತ್ತಾನೆ -
"ನೋಡಿ, ಶ್ರುತಿಯೇ 'ನೇದಂ ಯದಿದಮುಪಾಸತೇ' - ಉಪಾಸನೆ ಮಾಡಬೇಡ ಎಂದು ನಿಷೇಧ ಮಾಡಿದೆ. ಹಾಗಿದ್ದ ಮೇಲೆ ನೀವು ಧ್ಯಾನದೀಪ ಎಂಬ ಪ್ರಕರಣವನ್ನೇ ಯಾಕೆ ಮಾಡುತ್ತಿದ್ದೀರಿ? ಬ್ರಹ್ಮ ಉಪಾಸನೆಗೆ ಯೋಗ್ಯವೇ ಅಲ್ಲ."
*೨. ಇದರಲ್ಲಿ ಪೂರ್ವಪಕ್ಷಿ ಮಾಡಿದ ತಪ್ಪು ಏನು?*
ಅವನು _ಉಪಾಸ್ಯತ್ವ_ ದ ನಿಷೇಧವನ್ನು _ಬ್ರಹ್ಮಕ್ಕೆ_ ಅನ್ವಯಿಸಿದ. ಆದರೆ ಶ್ರುತಿಯು ನಿಷೇಧಿಸಿದ್ದು _'ಇದಂ' ಶಬ್ದಕ್ಕೆ_.
ವಿದ್ಯಾರಣ್ಯ ಸ್ವಾಮಿಗಳು ಹೇಳುತ್ತಾರೆ - ಎರಡು ರೀತಿಯ 'ಇದು' ಇದೆ.
*ಅ) ಇದಂ ರೂಪವಾದ ಅನಾತ್ಮ:* ಕಣ್ಣಿಗೆ ಕಾಣುವ ಮೂರ್ತಿ, ಮನಸ್ಸಿನಲ್ಲಿ ಕಲ್ಪಿಸಿಕೊಂಡ ರೂಪ, ಯಾವುದೋ ಒಂದು ಲೋಕದಲ್ಲಿರುವ ದೇವತೆ - ಇವೆಲ್ಲವೂ 'ಇದಂ' - ಅಂದರೆ ನನಗಿಂತ ಬೇರೆಯಾದ, ದೃಶ್ಯವಾದ ವಸ್ತು. ಇವು ಬ್ರಹ್ಮವಲ್ಲ.
*ಆ) ಅಹಂ ರೂಪವಾದ ಆತ್ಮ:* ಬ್ರಹ್ಮವು 'ಇದಂ' ಅಲ್ಲ, ಅದು 'ಅಹಂ' - ಅಂದರೆ ನನ್ನ ಸ್ವರೂಪವೇ ಆಗಿರುವ ಸಾಕ್ಷಿ ಚೈತನ್ಯ. ಕಣ್ಣು ತನ್ನನ್ನೇ ಹೇಗೆ ನೋಡಿಕೊಳ್ಳುವುದಿಲ್ಲವೋ, ಮನಸ್ಸು ತನ್ನ ಆಧಾರವಾದ ಆತ್ಮನನ್ನು 'ಇದು' ಎಂದು ವಿಷಯ ಮಾಡಲು ಆಗುವುದಿಲ್ಲ.
ಉದಾಹರಣೆಗೆ - ಕಣ್ಣಿನಿಂದ ಎಲ್ಲವನ್ನೂ ನೋಡಬಹುದು, ಆದರೆ ಕಣ್ಣನ್ನು ಕಣ್ಣೇ ನೋಡಲು ಆಗುವುದಿಲ್ಲ. ಹಾಗೆಯೇ ಮನಸ್ಸು ಎಲ್ಲವನ್ನೂ ಯೋಚಿಸಬಹುದು, ಆದರೆ ಯಾವ ಚೈತನ್ಯದಿಂದ ಮನಸ್ಸೇ ಯೋಚಿಸುತ್ತಿದೆಯೋ ಆ ಚೈತನ್ಯವನ್ನು ಮನಸ್ಸು 'ಇದು' ಎಂದು ಯೋಚಿಸಲು ಆಗುವುದಿಲ್ಲ - *ಯನ್ಮನಸಾ ನ ಮನುತೇ*.
*೩. ಸಿದ್ಧಾಂತದ ತೀರ್ಮಾನ:*
ಆದ್ದರಿಂದ ಶ್ರುತಿಯ ನಿಜವಾದ ಅರ್ಥ ಹೀಗೆ:
> "ಮಗೂ, ಜಡವಾದ, ನಿನಗಿಂತ ಬೇರೆಯಾದ ಯಾವುದನ್ನೋ 'ಇದು ಬ್ರಹ್ಮ' ಎಂದು ತಿಳಿದು ಉಪಾಸನೆ ಮಾಡಬೇಡ. ನಿನ್ನ ಮನಸ್ಸು, ಬುದ್ಧಿ, ಎಲ್ಲವುದಕ್ಕೂ ಹಿಂದಿದ್ದು ಅವುಗಳನ್ನು ಬೆಳಗುತ್ತಿರುವ, ನೀನೇ ಆಗಿರುವ ಚೈತನ್ಯವೇ ಬ್ರಹ್ಮ ಎಂದು ತಿಳಿ."
ಶ್ರುತಿಯು ಬ್ರಹ್ಮೋಪಾಸನೆಯನ್ನು ನಿಷೇಧಿಸಲಿಲ್ಲ. ಬ್ರಹ್ಮವನ್ನು ಅನಾತ್ಮವಾಗಿ, ದೃಶ್ಯವಾಗಿ ಉಪಾಸನೆ ಮಾಡುವುದನ್ನು ನಿಷೇಧಿಸಿತು.
ಅದಕ್ಕಾಗಿಯೇ ಧ್ಯಾನ ಬೇಕು. ಧ್ಯಾನದಲ್ಲಿ ನಾವು ಬ್ರಹ್ಮವನ್ನು 'ಅದು' ಎಂದು ಹುಡುಕುವುದಿಲ್ಲ, 'ನಾನೇ ಬ್ರಹ್ಮ' - *ಅಹಂ ಬ್ರಹ್ಮಾಸ್ಮಿ* ಎಂದು ನಮ್ಮ ಬುದ್ಧಿಯನ್ನು ಆತ್ಮಾಕಾರವಾಗಿ ಮಾಡುತ್ತೇವೆ.
*🙏🌺ಶುಭದಿನವಾಗಲಿ🌺🙏* | 118 |
| 9 | ಗಯಾಸುರನ ಭಕ್ತಿ, ವಿಷ್ಣುಪಾದನ ರಹಸ್ಯ ಮತ್ತು ಫಾಲ್ಗು ನದಿಯ ಶಾಪದ ಅದ್ಭುತ ಕಥೆ:
ಗಯಾಸುರನೆಂಬ ರಾಕ್ಷಸನಿದ್ದನು. ಅವನು ವಿಷ್ಣುವಿನ ಪರಮ ಭಕ್ತನಾಗಿದ್ದು, ವರ್ಷಗಳ ಕಾಲ ಕಠೋರ ತಪಸ್ಸು ಮಾಡಿದನು. ಅವನ ತಪಸ್ಸು ಮತ್ತು ಭಕ್ತಿಯಿಂದ ಸಂತಸಗೊಂಡ ಬ್ರಹ್ಮ ದೇವರು ಪ್ರತ್ಯಕ್ಷನಾಗಿ ವರವನ್ನು ಕೇಳಲು ಹೇಳಿದರು. ಗಯಾಸುರನು, "ದೇವರೇ! ನನ್ನನ್ನು ನೋಡುವ ಅಥವಾ ನನ್ನ ದೇಹವನ್ನು ಮುಟ್ಟುವವನು ಜನನ-ಮರಣದ ಚಕ್ರದಿಂದ ಮುಕ್ತನಾಗಬೇಕು. ನನಗೆ ಇದೊಂದೇ ಆಸೆ" ಎಂದು ಹೇಳಿದನು.
ಅವನ ಪ್ರಾಮಾಣಿಕ ಭಾವನೆಗಳನ್ನು ಕಂಡ ಬ್ರಹ್ಮ ದೇವರು ಈ ಅದ್ಭುತ ವರವನ್ನು ನೀಡಿದರು. ಆದರೆ ಇದರಿಂದ ಪ್ರಪಂಚದ ಕ್ರಮವೇ ಬದಲಾಗತೊಡಗಿತು. ಜನರು ಗಯಾಸುರನನ್ನು ನೋಡಿ ಪಾಪಗಳನ್ನು ಮಾಡಿ ಮೋಕ್ಷ ಪಡೆಯುತ್ತಿದ್ದರು. ತಪಸ್ಸು, ಯಜ್ಞ, ದಾನ ಅಥವಾ ಪ್ರಾಯಶ್ಚಿತ್ತದ ಅಗತ್ಯವೇ ಇರಲಿಲ್ಲ. ಯಮರಾಜನ ಬಳಿಗೆ ಬರುವ ಜೀವಿಗಳ ಸಂಖ್ಯೆ ಬಹುತೇಕ ಕಡಿಮೆಯಾಯಿತು. ಬ್ರಹ್ಮಾಂಡದ ಸಮತೋಲನಕ್ಕೆ ಅಪಾಯ ಎದುರಾಯಿತು.
ಎಲ್ಲಾ ದೇವರುಗಳು ಒಟ್ಟಾಗಿ ವಿಷ್ಣುವಿನ ಬಳಿಗೆ ಹೋಗಿ ಪರಿಸ್ಥಿತಿಯನ್ನು ವಿವರಿಸಿದರು. ಗಯಾಸುರನ ಹೃದಯ ಇನ್ನೂ ಶುದ್ಧವಾಗಿದೆ. ಆದ್ದರಿಂದ ಅವನನ್ನು ಶಿಕ್ಷಿಸುವುದು ಸೂಕ್ತವಲ್ಲ ಎಂದು ವಿಷ್ಣು ಹೇಳಿದರು.
ಒಂದು ದಿನ ಬ್ರಹ್ಮನು ಸ್ವತಃ ಗಯಾಸುರನ ಬಳಿಗೆ ಹೋಗಿ, "ನಾವು ಒಂದು ದೊಡ್ಡ ಯಜ್ಞವನ್ನು ಮಾಡಲು ಬಯಸುತ್ತೇವೆ. ನಿಮ್ಮ ಪವಿತ್ರ ದೇಹವನ್ನು ಯಜ್ಞಪೀಠವನ್ನಾಗಿ ಮಾಡಿದರೆ ಈ ಯಜ್ಞ ಯಶಸ್ವಿಯಾಗುತ್ತದೆ" ಎಂದು ಹೇಳಿದರು.
ಗಯಾಸುರನು ತಕ್ಷಣ ತನ್ನ ದೇಹವನ್ನು ನೆಲದ ಮೇಲೆ ಹರಡಿದನು. ಯಜ್ಞ ಪ್ರಾರಂಭವಾಯಿತು. ಆದರೆ ಗಯಾಸುರನ ಉಸಿರಾಟದಿಂದ ಅವನ ದೇಹ ಸ್ವಲ್ಪಮಟ್ಟಿಗೆ ಚಲಿಸುತ್ತಲೇ ಇದ್ದು, ಯಜ್ಞಕ್ಕೆ ಅಡಚಣೆಯಾಗತೊಡಗಿತು.
ಬ್ರಹ್ಮನ ಆದೇಶದ ಮೇರೆಗೆ ಯಮರಾಜನು ತನ್ನ ವಾಸಸ್ಥಾನದಿಂದ ಒಂದು ದೊಡ್ಡ ಧರ್ಮಶಿಲೆಯನ್ನು ತಂದು ಗಯಾಸುರನ ಎದೆಯ ಮೇಲೆ ಇಟ್ಟನು. ಆದರೆ ಅಷ್ಟು ದೊಡ್ಡ ಬಂಡೆಯನ್ನು ಇಟ್ಟರೂ ಗಯಾಸುರನ ದೇಹ ಸ್ಥಿರವಾಗಲಿಲ್ಲ.
ಆಗ ವಿಷ್ಣು ಸ್ವತಃ ಅಲ್ಲಿ ಪ್ರತ್ಯಕ್ಷನಾಗಿ ತನ್ನ ಬಲಗಾಲನ್ನು ಧರ್ಮಶಿಲೆಯ ಮೇಲೆ ಇಟ್ಟನು. ಭಗವಂತನ ಪಾದಗಳು ಗಯಾಸುರನ ದೇಹವನ್ನು ಸ್ಪರ್ಶಿಸಿದ ತಕ್ಷಣ ಅವನ ಇಡೀ ದೇಹ ಸಂಪೂರ್ಣ ನಿಶ್ಚಲವಾಯಿತು. ಆ ಕ್ಷಣದಲ್ಲಿ ಭಗವಂತನ ಹೆಜ್ಜೆಗುರುತುಗಳು ಆ ಬಂಡೆಯ ಮೇಲೆ ಶಾಶ್ವತವಾಗಿ ಅಚ್ಚೊತ್ತಿದವು.
ಭಗವಂತನ ಪಾದಗಳ ಸ್ಪರ್ಶವನ್ನು ತನ್ನ ಹೃದಯದ ಮೇಲೆ ಅನುಭವಿಸಿದ ಗಯಾಸುರನು, "ಇಂದು ನನ್ನ ಜೀವನ ಧನ್ಯವಾಗಿದೆ. ಈಗ ನನಗೆ ಒಂದೇ ಒಂದು ಪ್ರಾರ್ಥನೆ ಇದೆ: ನನ್ನ ಈ ದೇಹವು ಜಗತ್ತಿನ ಅತ್ಯಂತ ಪವಿತ್ರ ತೀರ್ಥಯಾತ್ರೆಯಾಗಲಿ. ಇಲ್ಲಿ ತಮ್ಮ ಪೂರ್ವಜರಿಗಾಗಿ ಶ್ರಾದ್ಧ ಮತ್ತು ಪಿಂಡ ದಾನ ಮಾಡುವವರ ಪೂರ್ವಜರು ಮೋಕ್ಷವನ್ನು ಪಡೆಯಲಿ" ಎಂದು ಪ್ರಾರ್ಥಿಸಿದನು.
ಸಂತೋಷಗೊಂಡ ಭಗವಾನ್ ವಿಷ್ಣು, "ಹಾಗೇ ಆಗಲಿ" ಎಂದು ಆಶೀರ್ವದಿಸಿದನು. ಅಂದಿನಿಂದ ಈ ಸ್ಥಳವು ಯುಗಯುಗಾಂತರಗಳಿಗೂ ಮೋಕ್ಷಭೂಮಿ ಎಂದು ಕರೆಯಲ್ಪಡುತ್ತದೆ. ಇಲ್ಲಿ ಪಿಂಡ ದಾನ ಮಾಡುವುದರಿಂದ ಅನಂತ ಪೀಳಿಗೆಯ ಪೂರ್ವಜರಿಗೆ ಕಲ್ಯಾಣವಾಗುತ್ತದೆ ಎಂಬ ನಂಬಿಕೆಯಿದೆ.
ಗಯಾಸುರನ ಅದೇ ದೈವಿಕ ದೇಹ ಇಂದಿನ ಪವಿತ್ರ ಗಯಾ ಪ್ರದೇಶವಾಯಿತು ಎಂದು ಹೇಳಲಾಗುತ್ತದೆ. ಧರ್ಮಶಿಲೆಯಲ್ಲಿ ವಿಷ್ಣುವಿನ ಪಾದದ ಗುರುತುಗಳು ಅಚ್ಚೊತ್ತಿದ ಸ್ಥಳದಲ್ಲೇ ಇಂದಿಗೂ ಪ್ರಸಿದ್ಧ ವಿಷ್ಣುಪಾದ ದೇವಾಲಯವಿದೆ. ಲಕ್ಷಾಂತರ ಭಕ್ತರು ಭಗವಂತನ ಪಾದಗಳನ್ನು ನೋಡಲು ಮತ್ತು ತಮ್ಮ ಪೂರ್ವಜರಿಗೆ ಪಿಂಡ ದಾನ ಅರ್ಪಿಸಲು ಇಲ್ಲಿಗೆ ಭೇಟಿ ನೀಡುತ್ತಾರೆ.
ಆದರೆ ಈ ಪವಿತ್ರ ಭೂಮಿ ಶತಮಾನಗಳಿಂದ ಜನರನ್ನು ನಿಗೂಢಗೊಳಿಸಿರುವ ಮತ್ತೊಂದು ರಹಸ್ಯವನ್ನು ಹೊಂದಿದೆ.
ವಿಷ್ಣುಪಾದ ದೇವಾಲಯದ ಬಳಿ ಹರಿಯುವ ಫಾಲ್ಗು ನದಿ ಹೆಚ್ಚಿನ ಸಮಯ ಮೇಲ್ಮೈಯಿಂದ ಒಣಗಿಯೇ ಕಾಣುತ್ತದೆ. ತ್ರೇತಾಯುಗದಲ್ಲಿ ಭಗವಾನ್ ಶ್ರೀರಾಮನು ತನ್ನ ತಂದೆ ಮಹಾರಾಜ ದಶರಥನ ಶ್ರಾದ್ಧಕ್ಕಾಗಿ ಗಯಾಕ್ಕೆ ಬಂದಾಗ, ಅವನು ಮತ್ತು ಲಕ್ಷ್ಮಣನು ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಲು ಹೋದರು. ತಾಯಿ ಸೀತೆ ನದಿಯ ದಡದಲ್ಲಿ ಒಬ್ಬಂಟಿಯಾಗಿ ಕಾಯುತ್ತಿದ್ದಳು.
ಆಗ ಮಹಾರಾಜ ದಶರಥನ ದೈವಿಕ ಆತ್ಮವು ಅಲ್ಲಿ ಕಾಣಿಸಿಕೊಂಡು, "ಸಮಯ ಮೀರುತ್ತಿದೆ. ನನಗೆ ಈಗ ಪಿಂಡದಾನ ಮಾಡಿ" ಎಂದು ಹೇಳಿತು.
ತಾಯಿ ಸೀತೆಯ ಬಳಿ ಯಾವುದೇ ಸಾಮಗ್ರಿಗಳಿರಲಿಲ್ಲ. ಭಕ್ತಿ ಮತ್ತು ನಂಬಿಕೆಯಿಂದ ಅವಳು ಫಾಲ್ಗು ನದಿಯಿಂದ ಮರಳನ್ನು ತೆಗೆದುಕೊಂಡು ಅದರಿಂದ ಪಿಂಡವನ್ನು ಮಾಡಿ ಅರ್ಪಿಸಿದಳು.
ತೃಪ್ತನಾದ ದಶರಥನ ಆತ್ಮವು ಅವಳನ್ನು ಆಶೀರ್ವದಿಸಿ ಹೊರಟುಹೋಯಿತು.
ಸ್ವಲ್ಪ ಸಮಯದ ನಂತರ ಶ್ರೀರಾಮನು ಹಿಂತಿರುಗಿದಾಗ, ಅಗತ್ಯ ಸಾಮಗ್ರಿಗಳಿಲ್ಲದೆ ಪಿಂಡದಾನ ಹೇಗೆ ಸಾಧ್ಯ ಎಂದು ಕೇಳಿದನು. ಸೀತೆ ಮರಳಿನಿಂದ ಪಿಂಡ ಮಾಡಿ ಶ್ರಾದ್ಧ ಮಾಡಿರುವುದಾಗಿ ತಿಳಿಸಿದಳು. ಅವಳು ಫಾಲ್ಗು ನದಿ, ಹಸು ಮತ್ತು ಬ್ರಾಹ್ಮಣನನ್ನು ಸಾಕ್ಷಿಗಳಾಗಿ ಉಲ್ಲೇಖಿಸಿದಳು.
ಆದರೆ ಶ್ರೀರಾಮನು ಅವರನ್ನು ಪ್ರಶ್ನಿಸಿದಾಗ, ಮೂವರೂ ಭಯದಿಂದ ಅದನ್ನು ನಿರಾಕರಿಸಿದರು. ಅಂತಹದ್ದೇನೂ ನಡೆದಿಲ್ಲ ಎಂದು ಹೇಳಿದರು. ಅಕ್ಷಯ ವಟ ಮಾತ್ರ ಸತ್ಯವನ್ನು ಬೆಂಬಲಿಸಿತು.
ಸೀತೆ ತೀವ್ರವಾಗಿ ದುಃಖಿತಳಾದಳು. ಕೋಪಗೊಂಡು ಫಾಲ್ಗು ನದಿಯನ್ನು ಶಪಿಸುತ್ತಾ, "ಇಂದಿನಿಂದ ನಿಮ್ಮ ನೀರು ಭೂಮಿಯ ಮೇಲ್ಮೈಯಲ್ಲಿ ಹರಿಯುವುದಿಲ್ಲ. ನಿಮ್ಮ ಹರಿವು ಶಾಶ್ವತವಾಗಿ ಮರಳಿನ ಕೆಳಗೆ ಅಡಗಿರುತ್ತದೆ" ಎಂದು ಹೇಳಿದಳು.
ಗೋವು ಮತ್ತು ಬ್ರಾಹ್ಮಣರು ತಮ್ಮ ಸುಳ್ಳಿಗಾಗಿ ಶಾಪಗ್ರಸ್ತರಾದರು. ಆದರೆ ಸತ್ಯವಂತ ಅಕ್ಷಯ ವಟನಿಗೆ ಯುಗಯುಗಾಂತರಗಳಿಗೂ ಅಮರತ್ವ ದೊರೆಯಿತು. ಗಯಾಕ್ಕೆ ಭೇಟಿ ನೀಡುವ ಪ್ರತಿಯೊಬ್ಬ ಭಕ್ತನು ಇಂದಿಗೂ ಆ ಪವಿತ್ರ ವಟವೃಕ್ಷವನ್ನು ನೋಡುತ್ತಾನೆ.
ಇಂದಿಗೂ ಗಯಾದ ಫಾಲ್ಗು ನದಿ ಈ ಶಾಪದಿಂದಾಗಿ ಮೇಲ್ಮೈಯಿಂದ ಒಣಗಿದಂತೆ ಕಾಣುತ್ತದೆ, ಆದರೆ ಒಳಗಿನಿಂದ ಹರಿಯುತ್ತಲೇ ಇದೆ.
ವಿಷ್ಣುಪಾದ ದೇವಾಲಯದಲ್ಲಿ ಕೆತ್ತಲಾದ ವಿಷ್ಣುವಿನ ಹೆಜ್ಜೆಗುರುತುಗಳು, ಭಕ್ತನ ಪ್ರೀತಿ ಮತ್ತು ನಂಬಿಕೆ ನಿಜವಾಗಿದ್ದಾಗ, ದೇವರು ಅವನನ್ನು ಶಿಕ್ಷಿಸುವುದಿಲ್ಲ; ಬದಲಾಗಿ ಅವನ ಭಕ್ತಿಗೆ ಅಮರತ್ವ ನೀಡುತ್ತಾನೆ ಎಂಬುದಕ್ಕೆ ಪುರಾವೆಯಾಗಿ ಉಳಿದಿವೆ.
ಜೈ ಶ್ರೀ ಹರಿ 🙏🚩 | 134 |
| 10 | ಜಾತಕ ವಿಶ್ಲೇಷಣೆ ಮಾಡುವಾಗ ಗ್ರಹಗಳು ಇರುವ ಮನೆಯ ಅನುಸಾರ ಸಜೀವ ಕಾರಕತ್ವಗಳನ್ನು & ನಿರ್ಜೀವ ಕಾರಕತ್ವಗಳನ್ನು ಹೇಗೆ apply ಮಾಡಬೇಕು ಅಂತ ನಮಗೆ ಗೊತ್ತಿರಬೇಕು.
ಉದಾಹರಣೆಗೆ ಒಂದು ಜಾತಕದಲ್ಲಿ 5 ರ ಅಧಿಪತಿ ರವಿ 8 ನೇ ಮನೆಯಲ್ಲಿ ಇದ್ದಾನೆ.
5 ನೇ ಮನೆ ಅಂದರೆ ಬುದ್ಧಿವಂತಿಕೆ hobbies enjoyable things creativity love affairs & ಸಮಸ್ಯೆಗೆ ಪರಿಹಾರ ಉಪಾಯ ಹುಡುಕುವ ಜಾಣತನ ಆಗಿದೆ.
ಈ 5 ರ ಅಧಿಪತಿ 8 ರಲ್ಲಿ ತನ್ನ ಕಾರಕತ್ವ ಹೇಗೆ ಹೊರ ಹಾಕುತ್ತಾನೆ?
8ನೇ ಮನೆ ಅಂದರೆ ಗುಪ್ತ, ಪೀಡೆ, ದುಃಖ, occult , Shared resources, ಇನ್ನೊಬ್ಬರ ಹಣ, Longevity ಆಗಿದೆ.
ಅಂದರೆ ಜಾತಕರು ತಮ್ಮ ಬುದ್ಧಿವಂತಿಕೆಯನ್ನು occult ನಲ್ಲಿ ಹಾಕಿ enjoyment ಪಡೆದರೆ ತೀವ್ರ ಪೀಡೆ ಚಿತ್ತದಲ್ಲಿ ಕಾಡುತ್ತದೆ.
ಬುದ್ಧಿವಂತಿಕೆಯು depression ಕಾರಣ ಸಂಕಟ.
ಇನ್ನು ಇವರು ಇನ್ನೊಬ್ಬರ ಹಣದ management ಅಂದರೆ CA ರೀತಿ ಮಾಡುತ್ತಾರೆ ಹಾಗೆನೇ ಗುಪ್ತ ಪ್ರೇಮ ಸಂಬಂಧ ಇರುತ್ತವೆ.
*ಇನ್ನು 5 ನೇ ಮನೆಗೆ ಸಜೀವ ಕಾರಕತ್ವ ಅಂದಾಗ ಸಂತಾನ ಆಗಿದೆ*
ಇದರ ಅರ್ಥ 5 ನೇ ಮನೆಯಿಂದ 4 ನೇ ಆದ 8ನೇ ಮನೆಗೆ 5 ರ ಅಧಿಪತಿ ಹೋಗಿದ್ದಾನೆ ಅರ್ಥಾತ್ 4ನೇ ಮನೆ ಸುಖ ಹೇಳುತ್ತದೆ ಹೀಗಾಗಿ ಈ ಜಾತಕರ ಸಂತಾನ ಸುಖ ಪಡೆಯುತ್ತವೆ.
ಇನ್ನೊಂದು ಉದಾಹರಣೆ 4 ರ ಅಧಿಪತಿ 5 ರಲ್ಲಿ ಇದ್ದಾಗ ಜಾತಕರಿಗೆ 4ನೇ ಮನೆ ಹೇಳುವ ಭಾವನೆ ಹೃದಯ ಎಲ್ಲವೂ 5 ನೇ ಮನೆ ಸಂಬಂಧಿತ ಕಾರಕತ್ವಗಳಲ್ಲಿ ಅನುಭವ ಪಡೆಯುತ್ತದೆ.
ಇನ್ನು 4ನೇ ಮನೆ ಅಂದರೆ ತಾಯಿ ಈ 4 ರ ಅಧಿಪತಿ 5 ರಲ್ಲಿ ಅಂದಾಗ 2 ನೇ ಮನೆ ( 4 ರಿಂದ 2ನೇ ಮನೆ) ಕುಟುಂಬ ಭಾವಕ್ಕೆ ಹೋಗಿದೆ ಅಂದರೆ ತಾಯಿ ತುಂಬಾ ಕುಟುಂಬಕ್ಕೆ ಅಂಟಿಕೊಂಡಿದ್ದು ಆರ್ಥಿಕವಾಗಿ ತುಂಬಾ resourceful ಆಗಿರುತ್ತಾಳೆ. | 121 |
| 11 | 🚩🌺🌅🌺🚩
*ಮುಂಜಾನೆಯ ಸೂಳ್ನುಡಿ*
*ಸಗುಣತ್ವಮುಪಾಸ್ಯತ್ವಾದ್ಯದಿ ವೇದ್ಯತ್ವತೋsಪಿ ತತ್ |*
*ವೇದ್ಯಂ ಚೇಲ್ಲಕ್ಷಣಾವೃತ್ತ್ಯಾ ಲಕ್ಷಿತಂ ಸಮುಪಾಸ್ಯತಾಂ ||*
ನಿರ್ಗುಣ ಬ್ರಹ್ಮವು ಉಪಾಸನೆಗೆ ಒಳಗಾದರೆ ಸಗುಣಭಾವವು ಸಂಭವಿಸುವುದು - ಎನ್ನುವೆಯಾದರೆ, ಅದು ಜ್ಞಾನಕ್ಕೆ ಒಳಗಾದರೂ ಸಗುಣಭಾವವು ಸಂಭವಿಸುವುದು. ಆದರೆ ನಿರ್ಗುಣ ಬ್ರಹ್ಮವು ಲಕ್ಷಣಾ - ವೃತ್ತಿಯಿಂದ ಅರಿಯಲ್ಪಡತಕ್ಕದ್ದು 1 ಎನ್ನುವೆಯಾದರೆ, ಆ ಲಕ್ಷಣಾ -ವೃತ್ತಿಯಿಂದ ಲಕ್ಷಿತವಾದ ಬ್ರಹ್ಮದ ಉಪಾಸನೆಯೇ ಆಗಲಿ.
{1, ಆದುದರಿಂದ ಸುಗುಣ ಭಾವವು ಸಂಭವಿಸಲಾರದು.}
*(ಧ್ಯಾನದೀಪ ಪ್ರಕರಣ)*
ಮುಂದುವರಿಯುತ್ತದೆ..
ಈ ಶ್ಲೋಕದಲ್ಲಿ ಎರಡು ಪಕ್ಷಗಳಿವೆ.
*1. ಪೂರ್ವಪಕ್ಷಿಯ ಆಕ್ಷೇಪ:*
ನಿರ್ಗುಣ ಬ್ರಹ್ಮವನ್ನು ಉಪಾಸನೆ ಮಾಡಲು ಆಗುವುದಿಲ್ಲ. ಯಾಕೆಂದರೆ ಉಪಾಸನೆ ಎಂದರೆ ಮನಸ್ಸಿನಿಂದ ಒಂದು ಆಕಾರವನ್ನು ಮಾಡಿಕೊಳ್ಳುವುದು. ಮನಸ್ಸು ನಿರ್ಗುಣವನ್ನು ಹಿಡಿಯಲಾರದು. ಹಿಡಿದರೆ ಅದು ಸಗುಣವೇ ಆಗಿಬಿಡುತ್ತದೆ. ಹಾಗಾಗಿ ನಿರ್ಗುಣೋಪಾಸನೆ ಅಸಂಭವ.
*2. ಸಿದ್ಧಾಂತಿಯ ಉತ್ತರ :*
> _ಸಗುಣತ್ವಮ್ ಉಪಾಸ್ಯತ್ವಾತ್ ಯದಿ ವೇದ್ಯತ್ವತಃ ಅಪಿ ತತ್_
ಒಪ್ಪಿಕೊಳ್ಳೋಣ, ಉಪಾಸ್ಯವಾದರೆ ಸಗುಣವಾಗುತ್ತದೆ ಎಂದು. ಹಾಗಾದರೆ ಅದೇ ನ್ಯಾಯದಿಂದ "ವೇದ್ಯವಾದರೆ" ಅಂದರೆ ತಿಳಿಯಲ್ಪಟ್ಟರೆ ಸಹ ಸಗುಣವಾಗಬೇಕು. ಆಗ ನಿರ್ಗುಣ ಬ್ರಹ್ಮವನ್ನು ತಿಳಿಯುವುದೂ ಅಸಾಧ್ಯವಾಗುತ್ತದೆ. ಶಾಸ್ತ್ರವೇ ವ್ಯರ್ಥವಾಗುತ್ತದೆ. ನಿಮಗೆ ಇದು ಇಷ್ಟವಿಲ್ಲ.
ಹಾಗಾದರೆ ನೀವು ಜ್ಞಾನದಲ್ಲಿ ಏನು ಸಮಾಧಾನ ಹೇಳುತ್ತೀರಿ?
ನಾವು ಬ್ರಹ್ಮವನ್ನು ನೇರವಾಗಿ ತಿಳಿಯುವುದಿಲ್ಲ. ವೇದಾಂತದಲ್ಲಿ ಎರಡು ವ್ಯಾಪ್ತಿ ಇದೆ:
- *ವೃತ್ತಿವ್ಯಾಪ್ತಿ:* ಮನಸ್ಸಿನ ವೃತ್ತಿ ಬ್ರಹ್ಮದವರೆಗೆ ಹೋಗುವುದು
- *ಫಲವ್ಯಾಪ್ತಿ:* ಆ ವೃತ್ತಿಯಿಂದ ಅಜ್ಞಾನ ನಾಶವಾಗಿ ಬ್ರಹ್ಮವು ಸ್ವಯಂ ಪ್ರಕಾಶವಾಗುವುದು
ಬ್ರಹ್ಮಕ್ಕೆ ಫಲವ್ಯಾಪ್ತಿ ಇಲ್ಲ. ಅದು ಸ್ವಯಂಪ್ರಕಾಶ. ವೃತ್ತಿವ್ಯಾಪ್ತಿ ಮಾತ್ರ ಇದೆ. ಆ ವೃತ್ತಿಯೂ ಸಾಕ್ಷಾತ್ ವೃತ್ತಿಯಲ್ಲ, *ಲಕ್ಷಣಾವೃತ್ತಿ.*
ಲಕ್ಷಣಾವೃತ್ತಿ ಎಂದರೆ ನೇರ ಅರ್ಥವಲ್ಲ, ಸೂಚಿತ ಅರ್ಥ.
ಉದಾಹರಣೆಗೆ: "ಗಂಗಾಯಾಂ ಘೋಷಃ" - ಗಂಗೆಯ ಮೇಲೆ ಗೊಲ್ಲರ ಹಳ್ಳಿ ಇದೆ ಎಂದರೆ, ನೇರವಾಗಿ ನೀರಿನ ಮೇಲೆ ಹಳ್ಳಿ ಇರಲು ಸಾಧ್ಯವಿಲ್ಲ. ಆದ್ದರಿಂದ "ಗಂಗಾ ತೀರದಲ್ಲಿ ಹಳ್ಳಿ ಇದೆ" ಎಂದು ಲಕ್ಷಣೆಯಿಂದ ತಿಳಿಯುತ್ತೇವೆ. ಇಲ್ಲಿ ಒಂದು ಭಾಗ ಬಿಡುತ್ತೇವೆ, ಒಂದು ಭಾಗ ಇಟ್ಟುಕೊಳ್ಳುತ್ತೇವೆ. ಇದಕ್ಕೆ *ಜಹದಜಹಲ್ಲಕ್ಷಣೆ* ಎನ್ನುತ್ತಾರೆ.
ಹಾಗೆಯೇ "ತತ್ ತ್ವಮ್ ಅಸಿ" ಎಂಬ ಮಹಾವಾಕ್ಯದಲ್ಲಿ ತತ್ ಪದದ ಸರ್ವಜ್ಞತ್ವ, ತ್ವಮ್ ಪದದ ಅಲ್ಪಜ್ಞತ್ವವನ್ನು ಬಿಟ್ಟು, ಎರಡಕ್ಕೂ ಆಧಾರವಾದ ಚೈತನ್ಯವನ್ನು ಮಾತ್ರ ತೆಗೆದುಕೊಳ್ಳುತ್ತೇವೆ.
> _ವೇದ್ಯಂ ಚೇತ್ ಲಕ್ಷಣಾವೃತ್ತ್ಯಾ ಲಕ್ಷಿತಂ ಸಮುಪಾಸ್ಯತಾಂ_
ಹಾಗಾದರೆ ಜ್ಞಾನದಲ್ಲಿ ಲಕ್ಷಣಾವೃತ್ತಿಯಿಂದ ತಿಳಿದ ಬ್ರಹ್ಮ ಹೇಗೆ ನಿರ್ಗುಣವಾಗಿಯೇ ಉಳಿಯುತ್ತದೋ, ಹಾಗೆಯೇ ಉಪಾಸನೆಯಲ್ಲೂ ಲಕ್ಷಣಾವೃತ್ತಿಯಿಂದ ಲಕ್ಷಿತವಾದ ಬ್ರಹ್ಮವನ್ನು ಉಪಾಸನೆ ಮಾಡಬಹುದು. ಆಗ ಸಗುಣ ದೋಷ ಬರುವುದಿಲ್ಲ.
*ಸಾಧನೆಗೆ ಇದರ ಅರ್ಥವೇನು?*
ನಿರ್ಗುಣವನ್ನು ಧ್ಯಾನ ಮಾಡುವುದು ಎಂದರೆ ಮನಸ್ಸನ್ನು ಶೂನ್ಯ ಮಾಡುವುದಲ್ಲ. ಶಾಸ್ತ್ರ ಹೇಳಿದ ಲಕ್ಷಣಗಳ - ಅಸ್ತಿ, ಭಾತಿ, ಪ್ರಿಯ, ನಿತ್ಯ, ಶುದ್ಧ, ಬುದ್ಧ, ಮುಕ್ತ - ಈ ಸೂಚನೆಗಳ ಸಹಾಯದಿಂದ ಮನಸ್ಸನ್ನು ನಿರ್ಗುಣದ ಅಭಿಮುಖವಾಗಿ ಮಾಡುವುದು. ಆ ಲಕ್ಷಿತದ ಮೇಲೆ ಮನಸ್ಸು ನಿಲ್ಲುವುದೇ ನಿರ್ಗುಣೋಪಾಸನೆ, ನಿರ್ಗುಣಧ್ಯಾನ.
ಧ್ಯಾನವು ದೀಪದ ಹಾಗೆ, ಬ್ರಹ್ಮವನ್ನು ಸೃಷ್ಟಿಸುವುದಿಲ್ಲ, ಇರುವ ಅಜ್ಞಾನವೆಂಬ ಕತ್ತಲೆಯನ್ನು ಮಾತ್ರ ಹೋಗಲಾಡಿಸುತ್ತದೆ ಎಂಬ ಸಂದೇಶ.
*🙏🌺ಶುಭದಿನವಾಗಲಿ🌺🙏* | 147 |
| 12 | ಶ್ರೀ ಇಡು ಗುಂಜಿ ಗಣೇಶ ದರ್ಶನ 🙏🙏🙏 | 8 |
| 13 | *ದಕ್ಷಿಣ ಕಾಶಿ ನಮ್ಮ ನಂಜನಗೂಡು ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ಮೂಲ ಗಣಪತಿಯ.. ಈ ದಿನದ ಬೆಣ್ಣೆ ಅಲಂಕಾರ*🙏 | 137 |
| 14 | 🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
*ಓಂ ಇಹೈವೈಧಿ ಧನಸನಿರಿಹ ಚಿತ್ತ ಇಹ ಕ್ರತುಃ |*
*ಇಹೈಧಿ ವೀರ್ಯವತ್ತರೋ ವಯೋಧಾ ಅಪರಾಹತಃ ||*
(ಅಥರ್ವವೇದ)
_"ಓಂ! ಇಲ್ಲಿಯೇ ಧನವನ್ನು ಗಳಿಸುವವನಾಗಿರು; ಇಲ್ಲಿಯೇ ನಿನ್ನ ಚಿತ್ತವು ಸ್ಥಿರವಾಗಿರಲಿ; ಇಲ್ಲಿಯೇ ನಿನ್ನ ಸಂಕಲ್ಪ ಮತ್ತು ಕಾರ್ಯಶಕ್ತಿ ಇರಲಿ. ಇಲ್ಲಿಯೇ ನೀನು ಹೆಚ್ಚು ಪರಾಕ್ರಮಶಾಲಿಯಾಗಿರು; ಯೌವನಶಕ್ತಿಯಿಂದ ಕೂಡಿದವನಾಗಿರು; ಯಾರಿಂದಲೂ ಸೋಲಿಸಲ್ಪಡದವನಾಗಿರು."_
ಈ ಮಂತ್ರವು ಇಹಲೋಕದಲ್ಲಿಯೇ ದೃಢತೆ, ಸಂಪತ್ತು, ಏಕಾಗ್ರತೆ, ಕಾರ್ಯಶಕ್ತಿ, ವೀರ್ಯ ಮತ್ತು ಅಜೇಯತೆಯನ್ನು ಹೊಂದಿ ಸಮೃದ್ಧ ಜೀವನವನ್ನು ನಡೆಸುವಂತೆ ಪ್ರಾರ್ಥಿಸುತ್ತದೆ.
*🌷🌺🙏 ☆ ಶುಭದಿನವಾಗಲಿ! ☆ 🙏🌺🌷* | 142 |
| 15 | *ನಿನಗಾಗಿ ಓಡೋಡಿ ಬಂದೆ ನಾನು ಅರಿಯದೆ ಹೀಗೇಕೆ ಮರೆಯಾಗಿ ಹೋದೆ*
ಜಾತಕದಲ್ಲಿ ಗ್ರಹಗಳ placement ಮಹತ್ವದ್ದು ನಿಜ ಆದರೆ ಗ್ರಹಗಳಿರುವ ನಕ್ಷತ್ರಗಳು ಅಪವಾದ ರೀತಿ ಫಲ ಕೊಡುತ್ತವೆ.
ಸಾಮಾನ್ಯವಾಗಿ ಚಂದ್ರ 1/6 ರಲ್ಲಿ ಅಷ್ಟೊಂದು ಧನಾತ್ಮಕ ಅನ್ನಿಸಲ್ಲ ಆದರೆ ಅದೇ 5/10 ರಲ್ಲಿ ಒಳ್ಳೆಯದು ಎನ್ನುತ್ತೇವೆ.
ಆದರೆ ಚಂದ್ರ 1/6 ರಲ್ಲಿ ಇದ್ದು ಉತ್ತರ ಅಥವಾ ಪೂರ್ವಾಷಾಢ ನಕ್ಷತ್ರದಲ್ಲಿದ್ದಾಗ ಅತ್ಯುತ್ತಮ ಫಲ ಕೊಡುತ್ತಾನೆ.
ಹಾಗೆನೇ 5/10 ರಲ್ಲಿ ಇದ್ದು ಆರಿದ್ರಾ ಅಥವಾ ಮೂಲಾ ದಲ್ಲಿ ಇದ್ದಾಗ ಅವ್ಯವಸ್ಥೆ ಹೆಚ್ಚು ಮಾಡಿ ಶುಭ ಫಲ work out ಆಗಲ್ಲ ಅಥವಾ ಅನ್ನಿಸುವುದಿಲ್ಲ | 162 |
| 16 | *ನಕ್ಷತ್ರಗಳ ಅಧಿದೇವತೆಗಳು*
*27 ನಕ್ಷತ್ರಗಳು*
ಅಶ್ವಿನಿ - ಅಶ್ವಿನಿ ದೇವತೆಗಳು
ಭರಣಿ - ಯಮ
ಕೃತ್ತಿಕಾ - ಅಗ್ನಿ
ರೋಹಿಣಿ - ಬ್ರಹ್ಮ
ಮೃಗಶಿರಾ - ಚಂದ್ರ
ಆರ್ದ್ರ - ರುದ್ರ
ಪುನರ್ವಸು - ಅದಿತಿ
ಪುಷ್ಯ - ಬೃಹಸ್ಪತಿ
ಆಶ್ಲೇಷಾ - ಸರ್ಪ
ಮಘ - ಪಿತೃ ದೇವತೆಗಳು
ಪೂರ್ವ ಫಾಲ್ಗುಣಿ(ಹುಬ್ಬಾ) - ಸೂರ್ಯ
ಉತ್ತರ ಫಾಲ್ಗುಣಿ - ಆರ್ಯ
ಹಸ್ತ - ಸವಿತೃ
ಚಿತ್ತ - ತ್ವಷ್ಟ್ರ
ಸ್ವಾತಿ - ವಾಯು
ವಿಶಾಖ - ಇಂದ್ರಾಗ್ನಿ
ಅನುರಾಧಾ - ಮಿತ್ರ
ಜ್ಯೇಷ್ಠಾ - ಇಂದ್ರ
ಮೂಲ - ರಾಕ್ಷಸ
ಪೂರ್ವಾಷಾಢ - ಉದಕ
ಉತ್ತರಾಷಾಢ - ವಿಶ್ವ ದೇವತೆಗಳು
ಶ್ರವಣ - ವಿಷ್ಣು
ಧನಿಷ್ಠಾ - ಅಷ್ಟ ವಸುಗಳು
ಶತಭಿಷಾ - ವರುಣ
ಪೂರ್ವಾಭಾದ್ರಪದ - ಜಲ
ಉತ್ತರಾಭಾದ್ರಪದ - ಬ್ರಹ್ಮ
ರೇವತಿ - ಪುಷಾನಾಮ ದೇವತೆ
#astrology | 186 |
| 17 | 🚩🌺🌅🌺🚩
*ಮುಂಜಾನೆಯ ಸೂಳ್ನುಡಿ*
*ವಾಗಾದ್ಯಗೋಚರಾಕಾರಮಿತ್ಯೇವಂ ಯದಿ ವೇತ್ತ್ಯಸೌ |*
*ವಾಗಾದ್ಯಗೋಚರಾಕಾರಮಿತ್ಯುಪಾಸೀತ ನೋ ಕುತಃ ||*
ಮುಮುಕ್ಷುವು ಮಾತು ಮೊದಲಾದವುಗಳಿಗೆ ಒಳಗಾಗದ ಆಕಾರದಲ್ಲಿ ನಿರ್ಗುಣ ಬ್ರಹ್ಮವನ್ನು ಅರಿಯುತ್ತಾನೆ- ಎನ್ನುವೆಯಾದರೆ, ಮಾತು ಮೊದಲಾದವುಗಳಿಗೆ ಒಳಗಾಗದ ಆಕಾರದಲ್ಲಿಯೇ ಏಕೆ ಉಪಾಸನೆ ಮಾಡಬಾರದು?
*(ಧ್ಯಾನದೀಪ ಪ್ರಕರಣ)*
ಮುಂದುವರಿಯುತ್ತದೆ..
ಈ ಶ್ಲೋಕ *ಪೂರ್ವಪಕ್ಷಿ ಕೇಳುವ ಅನುಮಾನ.*
ಪೂರ್ವಪಕ್ಷಿ ಹೇಳುವುದು ಹೀಗೆ:
"ನೀವು ವೇದಾಂತಿಗಳು ಹೇಳುತ್ತೀರಿ - ಬ್ರಹ್ಮವು ಮಾತಿಗೆ, ಮನಸ್ಸಿಗೆ ಸಿಗುವುದಿಲ್ಲ ಅಂತ. ಸರಿ, ಹಾಗೆ ಮಾತಿಗೆ ಸಿಗದ ರೂಪದಲ್ಲಿಯೇ ಬ್ರಹ್ಮ ಇದೆ ಎಂದು ನಾವು _ತಿಳಿದುಕೊಳ್ಳುತ್ತೇವೆ_ ಅಲ್ಲವೇ? ಹಾಗಾದರೆ ಅದೇ ಮಾತಿಗೆ ಸಿಗದ ರೂಪದಲ್ಲಿಯೇ _ಧ್ಯಾನ_ ಮಾಡಿದರಾಯ್ತು ಅಲ್ಲವೇ? ಏಕೆ ವಿಗ್ರಹ, ಮಂತ್ರ, ಸಗುಣ ರೂಪ ಬೇಕು?"
*ಇದಕ್ಕೆ ಶ್ರೀ ಶ್ರೀ ವಿದ್ಯಾರಣ್ಯರು ಸವಿವರವಾದ ಉತ್ತರವನ್ನು ಕೊಡುತ್ತಾರೆ.*
ತಿಳಿಯುವುದು ಮತ್ತು ಧ್ಯಾನ ಮಾಡುವುದು ಎರಡೂ ಒಂದಲ್ಲ.
*1. ತಿಳಿಯುವುದು ಹೇಗೆಂದರೆ -* "ಅಲ್ಲಿ ಏನಿಲ್ಲ" ಎಂದು ತಿಳಿಯುವುದು. ಉದಾಹರಣೆಗೆ "ಆ ಕೋಣೆಯಲ್ಲಿ ಆನೆ ಇಲ್ಲ" ಎಂದು ನೀವು ತಿಳಿಯಬಹುದು. ಇದಕ್ಕೆ ಆನೆಯನ್ನು ತರಬೇಕಿಲ್ಲ.
ಬ್ರಹ್ಮವು ಮಾತಿಗೆ ನಿಲುಕುವುದಿಲ್ಲ, ಆಕಾರವಿಲ್ಲ ಎಂದು ತಿಳಿಯುವುದು ಹೀಗೆ. ಇದು *ಜ್ಞಾನ.*
*2. ಉಪಾಸನೆ / ಧ್ಯಾನ ಹೇಗೆಂದರೆ -* ಮನಸ್ಸಿನಿಂದ ಒಂದು ಆಕಾರವನ್ನು _ಹಿಡಿದಿಟ್ಟುಕೊಳ್ಳುವುದು._
ಮನಸ್ಸಿನ ಸ್ವಭಾವವೇ ಹಾಗೆ. ಅದಕ್ಕೆ ಹಿಡಿಯಲು ಏನಾದರೂ ಆಕಾರ ಬೇಕು. "ಆಕಾರವೇ ಇಲ್ಲದ್ದನ್ನು ಹಿಡಿ" ಎಂದರೆ ಮನಸ್ಸಿಗೆ ಆಗುವುದಿಲ್ಲ. "ಏನನ್ನೂ ಯೋಚಿಸಬೇಡ" ಎಂದು ಹೇಳಿದರೆ, ಮನಸ್ಸು "ಏನನ್ನೂ ಯೋಚಿಸಬಾರದು" ಎಂಬುದನ್ನೇ ಒಂದು ಯೋಚನೆ ಮಾಡಿಕೊಂಡು ಬಿಡುತ್ತದೆ.
ಆದ್ದರಿಂದ:
- *ಸಗುಣ ಉಪಾಸನೆ = ಮನಸ್ಸನ್ನು ಶುದ್ಧ ಮಾಡುವ ಸಾಧನ.* ದೇವರ ಒಂದು ರೂಪ, ಒಂದು ನಾಮವನ್ನು ಕೊಟ್ಟರೆ ಮನಸ್ಸು ನಿಲ್ಲುತ್ತದೆ, ಏಕಾಗ್ರವಾಗುತ್ತದೆ.
- *ನಿರ್ಗುಣ ಜ್ಞಾನ = ಗುರಿ.* ಮನಸ್ಸು ಶುದ್ಧವಾಗಿ, ಏಕಾಗ್ರವಾದ ಮೇಲೆ, ಆ ಹಿಡಿದಿದ್ದ ಆಕಾರವನ್ನೂ ಬಿಟ್ಟುಬಿಡಬೇಕು. ಆಗ ಉಳಿಯುವುದೇ ಶುದ್ಧ ಬ್ರಹ್ಮ.
*ಇಲ್ಲಿ ಕತ್ತಲ ಕೋಣೆಯಲ್ಲಿ ದೀಪ ಹಚ್ಚಿದರೆ ವಸ್ತುಗಳು ಕಾಣುತ್ತವೆ. ಆದರೆ ದೀಪದ ಬೆಳಕಿನಲ್ಲೇ ವಸ್ತುವನ್ನು ನೋಡಬೇಕು, ಇಲ್ಲಿ ನಮಗೆ ಬೇಕಾಗಿರುವುದು ವಸ್ತು ಮಾತ್ರವೆ.ಆದರೆ ನಾವು ದೀಪವನ್ನೇ ನೋಡುತ್ತಾ ಕೂರಬಾರದು. ಹಾಗೆಯೇ ಧ್ಯಾನವು ಒಂದು ದೀಪದಂತೆ - ಅದು ಬ್ರಹ್ಮನನ್ನು ತೋರಿಸುತ್ತದೆ, ಆದರೆ ಧ್ಯಾನವೇ ಬ್ರಹ್ಮವಲ್ಲ.*
*ಅದಕ್ಕೆ ಮೊದಲು ಆಕಾರ ಸಹಿತ ಉಪಾಸನೆ, ನಂತರ ಆಕಾರ ರಹಿತ ಜ್ಞಾನ ಎಂಬ ಸಂದೇಶ.*
*🙏🌺ಶುಭದಿನವಾಗಲಿ🌺🙏* | 188 |
| 18 | 🚩🔯🌸🌄⚛🌅🌸🔯🚩
🌸🌼ಬೆಳಗಿನ 🌅 ಸೂಳ್ನುಡಿ🌼🌸
*ಪರಚ್ಛಿದ್ರೇಷು ಹೃದಯಂ*
*ಪರವಾರ್ತಾಸು ಚ ಶ್ರವಃ |*
*ಪರಮರ್ಮಣಿ ವಾಚಂ ಚ*
*ಖಲಾನಾಮಸೃಜದ್ವಿಧಿಃ ||*
(ಕಲಿವಿಡಂಬನ)
_“ಇತರರ ದೋಷಗಳನ್ನು ಹುಡುಕುವುದರಲ್ಲಿ ಆಸಕ್ತವಾಗಿರುವ ಹೃದಯವನ್ನು, ಇತರರ ಸುದ್ದಿಗಳನ್ನು ಕೇಳುವುದರಲ್ಲಿ ಆಸಕ್ತವಾಗಿರುವ ಕಿವಿಗಳನ್ನು, ಹಾಗೂ ಇತರರ ಗುಟ್ಟು-ಮರ್ಮಗಳನ್ನು ಕುರಿತು ಮಾತನಾಡುವ ನಾಲಿಗೆಯನ್ನು — ವಿಧಾತನು ದುಷ್ಟರಿಗೆ ನೀಡಿದ್ದಾನೆ.”_
ಅಂದರೆ, ದುಷ್ಟರ ಸ್ವಭಾವವೇ ಇತರರ ದೋಷಗಳನ್ನು ಹುಡುಕುವುದು, ಇತರರ ವಿಷಯಗಳನ್ನು ತಿಳಿದುಕೊಳ್ಳುವುದರಲ್ಲಿ ಆಸಕ್ತಿ ತೋರುವುದು ಮತ್ತು ಇತರರ ಗುಟ್ಟು-ದೌರ್ಬಲ್ಯಗಳನ್ನು ಕುರಿತು ಮಾತನಾಡುವುದು.
ಈ ಶ್ಲೋಕವು ದುರ್ಜನರ ಪರದೋಷಾನ್ವೇಷಣೆ, ಪರವಾರ್ತಾಶ್ರವಣ ಮತ್ತು ಪರಮರ್ಮಪ್ರಕಾಶನ ಎಂಬ ಮೂರು ದುರ್ಗುಣಗಳನ್ನು ವ್ಯಂಗ್ಯವಾಗಿ ಚಿತ್ರಿಸುತ್ತದೆ.
*🌷🌺🙏 ☆ ಶುಭದಿನವಾಗಲಿ! ☆ 🙏🌺🌷* | 168 |
| 19 | ಬಾಂಕೇ ಬಿಹಾರಿ (ಕೃಷ್ಣನ) ಲೀಲೆಗಳು :-
ದಕ್ಷಿಣ ಭಾರತ ದಾಸ ಪಂಥದವರಾದ ಪುರಂದರದಾಸರು- ಕನಕದಾಸರು ತ್ಯಾಗರಾಜ ದಾಸ ಶ್ರೇಷ್ಠರಂತೆ, ಉತ್ತರ ಭಾರತದಲ್ಲಿ ತುಳಸಿದಾಸರು,ಕಬೀರ ಮತ್ತು ಸೂರದಾಸರಂಥ ಶ್ರೇಷ್ಠ ಹರಿದಾಸರುಗಳಲ್ಲಿ ಸ್ವಾಮಿ ಹರಿ ದಾಸರು ಒಬ್ಬರು. ಇವರು ಉತ್ತರ ಪ್ರದೇಶದ 'ಅಲೀಘರ್' ಎಂಬ ಗ್ರಾಮ ದಲ್ಲಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತಾಯಿ ಗಂಗಾ ದೇವಿ. ಮಗುವನ್ನು ನೋಡಿದವರೆಲ್ಲ, ಈ ಮಗು ಶ್ರೀ ಕೃಷ್ಣನ ಪ್ರಿಯಸಖಿಯರಲ್ಲಿ ಒಬ್ಬಳಾದ ಲಲಿತಾದೇವಿಯ ಪುನರ್ಜನ್ಮವೇ ಆಗಿದೆ ಎಂದು ಹೇಳುತ್ತಿದ್ದರು. ಮಗುವಿಗೆ 'ಸ್ವಾಮಿ ಹರಿದಾಸ' ಎಂದು ಕರೆದರು. ಬಾಲ್ಯದಲ್ಲಿಯೇ ಸಂಗೀತ ದಲ್ಲಿ ಜ್ಞಾನ ಪಡೆದಿದ್ದ ಇವರು ಹಿಂದುಸ್ತಾನಿ ಸಂಗೀತ ಅಭ್ಯಾಸ ಮಾಡಿ ಪಾಂಡಿತ್ಯಜ್ಞಾನ ಪಡೆದರು. ಚಿಕ್ಕಂದಿನಿಂದಲೇ ರಾಧಾ-ಕೃಷ್ಣರ ಮೇಲೆ ಭಕ್ತಿ ಪ್ರೀತಿ ನರನಾಡಿ ಗಳಲ್ಲೂ ತುಂಬಿತ್ತು. ದಿನ ಕಳೆದಂತೆ ಕೃಷ್ಣನಲ್ಲಿದ್ದ ಭಕ್ತಿ ಪ್ರೇಮವೇ ಇವರ ಶಕ್ತಿಯಾಯಿತು. ರಾಧಾಕೃಷ್ಣರ ಕುರಿತಾಗಿ ಹಲವು ಕೃತಿಗಳನ್ನು ರಚಿಸಿ ಸ್ವತಃ ಮಧುರವಾಗಿ ಹಾಡುತ್ತಿದ್ದರು. ಇವರು ಅದ್ಭುತ ಸಂಗೀತಗಾರರೆಂದು ಖ್ಯಾತಿ ಪಡೆದಿದ್ದರು. ಆ ಕಾಲದ ಅಕ್ಬರನ ಆಸ್ಥಾನದ ತಾನಸೇನನಿಗೆ ಗುರುವಾಗಿದ್ದರು. “ತಾನಸೇನ್ “ದೀಪಕ” ರಾಗ ಹಾಡಿ ದೀಪ ಬೆಳಗಿಸಿದ ಸಂಗೀತ ವಿದ್ವಾಂಸ ಎಂಬ ಹೆಸರು ಪಡೆದಿದ್ದನು.
ಭಕ್ತರ ಭಕ್ತಿಯನ್ನು ಪರೀಕ್ಷಿಸುವ ಶ್ರೀ ಕೃಷ್ಣ ಒಮ್ಮೆ ನಾರದ ಮತ್ತು ಹನುಮಂತ ನಿಗೆ ಸಭೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದ ನು. ಹನುಮಂತ ಹಾಡುತ್ತಿದ್ದ ಅವನ ಗಾನಕ್ಕೆ ತನ್ಮಯರಾಗಿ ಕೇಳುತ್ತಿದ್ದರು. ನಾರದರು ತಮ್ಮ ಮಹತಿ ವೀಣೆಯನ್ನು ತಾವು ಕುಳಿತಿದ್ದ ಪಕ್ಕದ ಕಲ್ಲಿನ ಮೇಲಿಟ್ಟು ಸಂಗೀತ ಕೇಳುವುದರಲ್ಲಿ ಮಗ್ನರಾಗಿದ್ದರು. ಹನುಮಂತನು ಹಾಡಿದ ಹಾಡಿಗೆ ಕಲ್ಲು ಕರಗಿತು. ಕರಗಿ ದ ಕಲ್ಲಿನ ಕೆಳಗೆ ನಾರದರ ವೀಣೆ ಸಿಕ್ಕಿಕೊಂಡಿತು. ಪುನಃ ಕೃಷ್ಣನ ಆದೇಶದಂತೆ ಹನುಮಂತ ಹಾಡಿನಲ್ಲಿ ಮೈಮರೆತನು. ಹಾಡಿದ ಹಾಡಿನ ಮಾಧುರ್ಯಕ್ಕೆ ಮತ್ತೆ ಕರಗಿತು. ಈಗ ನಾರದರು ಕರಗಿದ ಕಲ್ಲಿನ ಕೆಳಗಿದ್ದ ವೀಣೆಯನ್ನು ತೆಗೆದುಕೊಂಡರಂತೆ. ಹನುಮಂತನಂತೆ ಸ್ವಾಮಿ ಹರಿದಾಸರು ಹಾಡುತ್ತಿದ್ದರೆ, ರಾಧ ಕೃಷ್ಣರು ನರ್ತಿಸುತ್ತಿದ್ದರಂತೆ. ಇಂಥ ಹರಿದಾಸರು ಕೆಲವು ಕಾಲದ ನಂತರ ಅವರು ನೆಲೆಸಿದ್ದ ಗ್ರಾಮದಿಂದ ಬೃಂದಾವನದ “ನಿಧಿವನ” ಕ್ಕೆ ಹೋದರು.
ಅಲ್ಲಿ ಕಾನನದ ತುಂಬಾ ಅಲೆದಾಡುತ್ತಾ,ರಾಧಾಕೃಷ್ಣರ ಕುರಿತಾಗಿ ಕೃತಿಗಳನ್ನು ರಚಿಸಿ ತನ್ಮಯರಾಗಿ ಮೈದುಂಬಿ ಹಾಡುತ್ತಿದ್ದರು. |ಇವರ ಜೊತೆಗೆ ಒಂದಷ್ಟು ಶಿಷ್ಯ ಬಳಗವು ಹೋಗಿದ್ದು, ಹರಿದಾಸರಿಂದ ಕೃಷ್ಣ ಗೀತೆಗಳನ್ನು ಕಲಿತು ಹಾಡಿ ದರು. ಸ್ವಾಮಿ ಹರಿದಾಸರು ರಾಧಾಕೃಷ್ಣರನ್ನು “ಪ್ರೇಮ ಮುದಿತ ಮನಸೆ ಕಹೋ ರಾಮ್ ರಾಮ್ ಶ್ರೀ ರಾಮ್ ರಾಮ್” ಗೀತೆಗಳನ್ನು ಹಾಡುತ್ತಾ ಹರೇ ಕೃಷ್ಣ ಹರೇ ಕೃಷ್ಣ ಎಂದು ಭಕ್ತಿಯಿಂದ ಆರಾಧಿಸುತ್ತಾ ನಿಧಿ ವನದಲ್ಲಿ ಇದ್ದು ಪ್ರತಿನಿತ್ಯವೂ ರಾಧಾಕೃಷ್ಣರ ರಾಸಲೀಲೆ ಯನ್ನು ಕಣ್ತುಂಬ ನೋಡುವ ಸೌಭಾಗ್ಯ ಅವರದಾಗಿತ್ತು. ಸ್ವತಃ ರಾಧಾಕೃಷ್ಣರ ರಾಸಲೀಲೆ ನೋಡಿ ಆ ಲೀಲೆಯನ್ನು ಮನದಲ್ಲಿ ಸ್ಮರಿಸುತ್ತಾ ಅದೇ ತರಹದ ಗೀತೆಯನ್ನು ರಚಿಸಿ ಹಾಡುತ್ತಿದ್ದರು. ಹಾಡುತ್ತಿದ್ದ ಹಾಡಿನ ತಾಳಕ್ಕೆ ಸರಿಯಾಗಿ ಗೋಲೋಕ ದಲ್ಲಿ ರಾಧಾಕೃಷ್ಣರು ನೃತ್ಯ ಮಾಡುತ್ತಿದ್ದರಂತೆ.
ತಮ್ಮ ಗುರುಗಳು ರಾಧಾಕೃಷ್ಣರ ನೃತ್ಯವನ್ನು ಸ್ವತಃ ನೋಡುತ್ತಿದ್ದಾರೆ ಎಂಬ ವಿಷಯ ತಿಳಿದ ಶಿಷ್ಯರು ತಮಗೂ ಆ ನೃತ್ಯವನ್ನು ತೋರಿಸ ಬೇಕೆಂದು ಹಠ ಹಿಡಿದರು. ಸ್ವಾಮಿ ಹರಿದಾಸರು ಆ ಶಿಷ್ಯರನ್ನು ನಿಧಿವನದೊಳಗೆ ಬರಲು ಪ್ರವೇಶ ಕೊಟ್ಟರು. ಶಿಷ್ಯರಿಗೆ ರಾಧಾಕೃ ಷ್ಣರ ದರ್ಶನ ಮಾಡಿಸಲು ದಾಸರು ಹಾಡಲು ಕುಳಿತರು. ಕೃಷ್ಣ ಗೀತೆಯನ್ನು ಹಾಡಿದರು, ಹಾಡಿದರು ಮೈಮೇಲೆ ಪರಿವೆ ಇಲ್ಲದಂತೆ ಹಾಡಿದರು. ಹಾಡನ್ನು ಕೇಳುತ್ತಾ ಕೇಳುತ್ತಾ, ರಾಧಾಕೃಷ್ಣರು ಗೋಲೋಕದಲ್ಲಿ ನಿಲ್ಲಲಾಗದೆ ಸೂರ್ಯನ ತೇಜಸ್ಸಿನಂಥ ಕಣ್ಣು ಕೋರೈಸುವ ಪ್ರಭೆಯೊಂದಿಗೆ ಎರಡು ಕಿರಣಗಳ ರೂಪದಲ್ಲಿ ಭೂಲೋಕಕ್ಕೆ ಇಳಿದರು. ಹರಿ ದಾಸರು ಕಣ್ಮುಚ್ಚಿ ಹಾಡುತ್ತಿದ್ದರು. ತಾಳಕ್ಕೆ ತಕ್ಕಂತೆ ರಾಧಾಕೃಷ್ಣರು ಕುಣಿಯುತ್ತಿದ್ದರು. ಕಿರಣಗಳ ಪ್ರಕಾಶವನ್ನು ನೋಡುತ್ತಿದ್ದ ಶಿಷ್ಯರು ಕುಳಿತಲ್ಲಿಯೇ ಕಲ್ಲಾದರು. ರಾಧಾಕೃಷ್ಣರ ಮನಮೋಹಕ ರೂಪಕ್ಕೆ ಸಾಟಿಯುಂಟೆ, ಅಂತ ದಿವ್ಯಭವ್ಯ ವಾದ ರೂಪವನ್ನು ಕಣ್ತುಂಬಿ ಕೊಂಡ ಹರಿದಾಸರು ಬೆಳಕಿನ ಪ್ರಕರತೆಯನ್ನು ತಾಳಲಾರದೆ, ಕೃಷ್ಣನಿಗೆ ಹೇಳಿದರು. ನಿಮ್ಮಿಬ್ಬರ ಪ್ರಜ್ವಲ ಪ್ರಭೆಯನ್ನು ನೋಡಲು ಸಾಧ್ಯವಿಲ್ಲ. ನೀವಿಬ್ಬರೂ ಒಂದಾಗಿ ನಿಂತ ಏಕಶಿಲೆ ಮೂರ್ತಿ ರೂಪವನ್ನು ಧರಿಸಿ ತೋರಿಸು ಎಂದು ಕೃಷ್ಣನಲ್ಲಿ ಪ್ರಾರ್ಥಿಸಿದರು. ಸ್ವಾಮಿ ಹರಿದಾಸರ ಪ್ರಾರ್ಥನೆಗೆ ಮನ ಸೋತ ಕೃಷ್ಣ ರಾಧೆಯೊಂದಿಗೆ ಅದೃಶ್ಯ ವಾಗುವ ಮೊದಲು ಮೊದಲು ರಾಧಾಕೃಷ್ಣ ನೃತ್ಯ ಮಾಡುವ ಭಂಗಿ ರೂಪದ 'ಬಾಂಕೇ ಬಿಹಾರಿ' ಮೂರ್ತಿಯನ್ನು ದಾಸರ ಕೈಯಲ್ಲಿಟ್ಟು ಅದೃಶ್ಯ ನಾದನು.
ಸ್ವಾಮಿ ಹರಿದಾಸರು ಆ ಮೂರ್ತಿಯನ್ನು ಬೃಂದಾವನದ ನಿಧಿವನದಲ್ಲಿಟ್ಟು ನಿತ್ಯವೂ ಅಂದ ಚಂದದ ಶೃಂಗಾರವನ್ನು ಮಾಡಿ ಆನಂದ ದಿಂದ ಆ ರೂಪ ವನ್ನು ದಿಟ್ಟಿಸುತ್ತಾ ಆರಾಧಿಸಿ ನಿತ್ಯವೂ ರಾಧಾ -ಕೃಷ್ಣರ ರಾಸಲೀಲೆಯನ್ನು ಕಣ್ಣಾರೆ ಕಾಣುತ್ತಿದ್ದರು. ಕೃಷ್ಣನ ಭಕ್ತರಾಗಿ ಅಂತರಂಗದ ಸೇವಕರಾಗಿ ಬಹಳ ಕಾಲ ಬದುಕಿದ್ದು ಮುಂದೆ ಶ್ರೀಹರಿಯ ನಿತ್ಯ ನಿವಾಸವನ್ನು ಸೇರಿ ಎಂದೆಂದಿಗೂ ತಮ್ಮ ನೆಲೆ ಯಾಗಿಸಿಕೊಂಡರು. ಸ್ವಾಮಿ ಹರಿದಾಸರ ಜೀವಿತಾ ವಧಿಯ ನಂತರ ಶ್ರೀ ಕೃಷ್ಣ ಚೈತನ್ಯರ ಶಿಷ್ಯರಾದ ಗೋಸ್ವಾಮಿಗಳು ಬೃಂದಾವನಕ್ಕೆ ಬಂದರು. ಬೃಂದಾವನದಲ್ಲಿ ರಾಜಸ್ಥಾನಿ ಶೈಲಿಯಲ್ಲಿ ದೇವಸ್ಥಾನವನ್ನು ನಿರ್ಮಿಸಿದರು ನಿಧಿವನದಲ್ಲಿದ್ದ 'ಬಾಂಕೇ ಬಿಹಾ ರಿ' ಕೃಷ್ಣನ ಮೂರ್ತಿಯನ್ನು ತಂದು ಅಲ್ಲಿ ಪ್ರತಿಷ್ಠಾಪಿಸಿದರು. ದೇವಸ್ಥಾನಕ್ಕೆ ಬರುವ ಭಕ್ತರಿಗೆ ಕೃಷ್ಣನು ತನ್ನ ಲೀಲೆಗಳನ್ನು ತೋರಿಸುವುದು ಭಕ್ತರ ಅನುಭವಕ್ಕೆ ಬರುತ್ತಿತ್ತು ಇದು ಕಿವಿಯಿಂದ ಕಿವಿಗೆ ಕೇಳಿ ಬರಬರುತ್ತಾ ಭಕ್ತರ ಸಂಖ್ಯೆ ಹೆಚ್ಚಾಯಿತು. ಇಂದಿಗೂ ಅಲ್ಲಿ ಬರುವ ಭಕ್ತ ರಿಗೆ ಕೃಷ್ಣನು ತನ್ನ ಲೀಲೆಗಳನ್ನು ತೋರಿಸುತ್ತಿರು ವುದು ಭಕ್ತರ ಅನುಭವಕ್ಕೆ ಬಂದಿದೆ ಎಂದು ಹೇಳುತ್ತಾರೆ. | 193 |
| 20 | No text... | 168 |
