cookie

نحن نستخدم ملفات تعريف الارتباط لتحسين تجربة التصفح الخاصة بك. بالنقر على "قبول الكل"، أنت توافق على استخدام ملفات تعريف الارتباط.

avatar

ಆಧ್ಯಾತ್ಮಿಕ ಪ್ರಪಂಚ

Spiritual channel in Kannada

إظهار المزيد
مشاركات الإعلانات
1 590
المشتركون
+624 ساعات
+237 أيام
+10830 أيام

جاري تحميل البيانات...

معدل نمو المشترك

جاري تحميل البيانات...

*ಪಂಡರಾಪುರದ ಯಾತ್ರೆ ವಾರಕರಿ ಸಂಪ್ರದಾಯ:* ಪಂಢರಪುರದಲ್ಲಿ ಆಷಾಢ, ಶ್ರಾವಣ, ಕಾರ್ತಿಕ ಹಾಗೂ ಮಾಘ ಮಾಸಗಳಲ್ಲಿ ಬೃಹತ್ ಉತ್ಸವ ನಡೆಯುತ್ತವೆ. ಈ ಸಂದರ್ಭದಲ್ಲಿ ಭಕ್ತರು ಕಾಲ್ನಡಿಗೆಯಿಂದ ಇಲ್ಲಿಗೆ ಆಗಮಿಸುತ್ತಾರೆ. ವಿಶೇಷವಾಗಿ ಆಷಾಢ ಶುದ್ಧ ಏಕಾದಶಿಗೆ ಹೆಚ್ಚು ಭಕ್ತರು ಆಗಮಿಸುತ್ತಾರೆ. ಈ ಯಾತ್ರೆಗೆ 13ನೇ ಶತಮಾನದಷ್ಟು ಹಳೆಯ ಇತಿಹಾಸವಿದೆ. ಇದನ್ನು ವಾರಕರಿ ಸಂಪ್ರದಾಯ ಎನ್ನುತ್ತಾರೆ. ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ ಈ ಸಂಪ್ರದಾಯದಲ್ಲಿ ಬಂದ ಪ್ರಮುಖರು. ಮುಂದೆ ಅಂದಾಜು 500 ವರ್ಷಗಳಿಂದ 50 ಜನ ಪ್ರಮುಖ ಸಂತರು ಆಗಿ ಹೋಗಿದ್ದಾರೆ ಎಂದು 18ನೇ ಶತಮಾನದಲ್ಲಿ ದಾಖಲಿಸಲಾಗಿದೆ. ಇವರ ಹೆಸರಿನ ವಾರಕರಿಗಳು ಇಂದಿಗೂ ಪಂಢರಪುರಕ್ಕೆ ಪಲ್ಲಕ್ಕಿಗಳನ್ನು ಹೊತ್ತು ಆಗಮಿಸುತ್ತವೆ. ತುಕಾರಾಮ ಅವರ ಮಗ ನಾರಾಯಣ ಮಹಾರಾಜರು 1685ರಿಂದ ಈ ಪಲ್ಲಕ್ಕಿಗಳಲ್ಲಿ ಸಂತರ ಪಾದುಕೆ ಕೊಂಡೊಯ್ಯುವ ಸಂಪ್ರದಾಯಕ್ಕೆ ನಾಂದಿ ಹಾಡಿದರು. 1820ರಲ್ಲಿ ಹೈಬತ್ ಬಾಬಾ ಎಂಬ ಮುಸ್ಲಿಂ ಸಮುದಾಯದ ಸಂತ ಈ ವಾರಕರಿ ಸಂಪ್ರದಾಯಕ್ಕೆ ಹೊಸರೂಪ ನೀಡಿದರು. ಇನ್ನು ವಾರಕರಿ ಸಂಪ್ರದಾಯದಲ್ಲಿ ಕಂಡುಬರುವ ಎರಡು ಪ್ರಮುಖ ಆಚರಣೆಗಳೆಂದರೆ ರಿಂಗಣ ಮತ್ತು ಧಾವಾ. ಪಂಢರಪುರದಿಂದ 14 ಕಿ.ಮೀ.ದೂರದಲ್ಲಿರುವ ಬಂಡಿಸೇಗಾಂವ ಗ್ರಾಮದಲ್ಲಿ ಭಕ್ತರು ಒಂದು ವೃತ್ತ ನಿರ್ಮಿಸಿ ಮಧ್ಯೆ ಒಂದು ಕುದುರೆಯ ಮೇಲೆ ಸಂತರ ಪಾದುಕೆಗಳನ್ನಿಟ್ಟು ವೃತ್ತಾಕಾರದಲ್ಲಿ ಓಡುವ ಕುದುರೆ ಹಿಂದೆ ಸಾಗುತ್ತಾರೆ. ಕುದುರೆ ಓಡುವಾಗ ಅದರ ಕಾಲಿನಿಂದ ಬರುವ ಧೂಳನ್ನು ನೊಸಲಿಗೆ ಹಚ್ಚಿಕೊಳ್ಳುತ್ತಾರೆ. ಇದು ಸಂತರ ಪಾದದ ಧೂಳು ಎಂಬುದು ನಂಬಿಕೆ. ಇದನ್ನೇ ರಿಂಗಣ ಎನ್ನುತ್ತಾರೆ. ಇನ್ನು ಪಂಢರಪುರ 25 ಕಿ.ಮೀ.ಇರುವಂತೆ ಅಂದರೆ ಬೋಂಡ್ಲೆ ಗ್ರಾಮದಿಂದ ಪಾದಯಾತ್ರೆ ವೇಗ ಹೆಚ್ಚುತ್ತದೆ. ದೇವರು ದರ್ಶನ ನೀಡಲು ನಿಂತಿದ್ದಾನೆ ಎಂದು ಭಕ್ತಿಯ ಉನ್ಮಾದದಲ್ಲಿ ಜನ ಓಡುತ್ತ ಬಂದು ವಿಠ್ಠಲನ ದರ್ಶನ ಪಡೆಯುತ್ತಾರೆ. ಇದನ್ನು ಧಾವಾ ಎನ್ನುತ್ತಾರೆ. ಹೀಗೆ ಓಡುತ್ತ ಬಂದು ಮೊದಲು ಪಂಢರಪುರ ತಲುಪುವ ವಾರಕರಿ ತಂಡದ ಮುಖ್ಯಸ್ಥರನ್ನು ಆಷಾಢ ಶುದ್ಧ ಏಕಾದಶಿ ದಿನ ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಸಲ್ಲಿಸುವ ವಿಶೇಷ ಪೂಜೆ ಸಂದರ್ಭದಲ್ಲಿ ದರ್ಶನಕ್ಕೆ ಬಿಡಲಾಗುತ್ತದೆ. ಈ ಸಂಪ್ರದಾಯ 1996ರಿಂದ ನಡೆದುಕೊಂಡು ಬಂದಿದೆ. *ಪ್ರಸಿದ್ಧ ಪಲ್ಲಕ್ಕಿ:* ಪಂಢರಪುರಕ್ಕೆ ಪಲ್ಲಕ್ಕಿ ಹೊತ್ತು ಪಾದಯಾತ್ರೆ ಮೂಲಕ ಬರುವುದು ಸಂಪ್ರದಾಯ. ಅಳಂದದಿಂದ ಜ್ಞಾನೇಶ್ವರ ಮಹಾರಾಜ ಭಕ್ತರು, ದೇಹುದಿಂದ ತುಕಾರಾಮರ ಭಕ್ತರು, ಪೈಠಣದಿಂದ ಏಕನಾಥರ ಭಕ್ತರು, ತ್ರಯಂಬಕೇಶ್ವರದಿಂದ ನಿವೃತ್ತಿನಾಥರ ಭಕ್ತರು, ಮುಕ್ತಿನಗರದಿಂದ ಮುಕ್ತಾಬಾಯಿ ಭಕ್ತರು, ಶೇಗಾಂವದಿಂದ ಗಜಾನನ ಮಹಾರಾಜರ ಭಕ್ತರು, ಸಾಸವಾಡದಿಂದ ಸೋಪಾನ ಮಹಾರಾಜರ ಭಕ್ತರು ಪಲ್ಲಕ್ಕಿ ಹೊತ್ತು ಇಲ್ಲಿಗೆ ಆಗಮಿಸುತ್ತಾರೆ. ಪ್ರಸ್ತುತ ನಾನಾ ಸ್ಥಳಗಳಿಂದ ಅಂದಾಜು 40 ಪಲ್ಲಕ್ಕಿಗಳು ಉತ್ಸವ ಸಂದರ್ಭದಲ್ಲಿ ಪಂಢರಪುರಕ್ಕೆ ಆಗಮಿಸುತ್ತವೆ.
إظهار الكل...
Repost from BHAKTI SAGAR
Photo unavailableShow in Telegram
Opening of Ratna Bhandar: LIVE UPDATES The opening time of Ratna Bhandar has been fixed at 1:28 pm (auspicious time)
إظهار الكل...
🚩🌺🌅🌺🚩 ಮುಂಜಾನೆಯ ಸೂಳ್ನುಡಿ *ಜಾತಿವ್ಯಕ್ತೀ ದೇಹಿದೇಹೌ ಗುಣದ್ರವ್ಯೇ ಯಥಾ ಪೃಥಕ್ |* *ವಿಯತ್ಸತೋಸ್ತಥೈವಾಸ್ತು ಪಾರ್ಥಕ್ಯಂ ಕೋsತ್ರ ವಿಸ್ಮಯಃ ||* "ಜಾತಿ - ವ್ಯಕ್ತಿಗಳು, ಆತ್ಮ - ಶರೀರಗಳು, ಗುಣ - ದ್ರವ್ಯಗಳು - ಇವು ಹೇಗೆ ಬೇರೆ ಬೇರೆಯಾಗಿವೆಯೋ ಹಾಗೆಯೇ ಸದ್ವಸ್ತುವಿಗೂ ಆಕಾಶಕ್ಕೂ ಭೇದವಿರಲಿ, ಈ ವಿಷಯದಲ್ಲಿ ವಿಸ್ಮಯವೇನು? *(ಪಂಚಭೂತವಿವೇಕ ಪ್ರಕರಣ)* ಮುಂದುವರಿಯುತ್ತದೆ.... *🙏🌺ಶುಭದಿನವಾಗಲಿ🌺🙏*
إظهار الكل...
🚩🔯🌸🌄⚛🌅🌸🔯🚩 🌸🌼ಬೆಳಗಿನ 🌅 ಸೂಳ್ನುಡಿ🌼🌸 *ರಾಜನ್ ದುಧುಕ್ಷಸಿ ಯದಿ ಕ್ಷಿತಿಧೇನುಮೇತಾಂ* *ತೇನಾದ್ಯ ವತ್ಸಮಿವ ಲೋಕಮಮುಂ ಪುಷಾಣ ।* *ತಸ್ಮಿಂಶ್ಚ ಸಮ್ಯಗನಿಶಂ ಪರಿಪೋಷ್ಯಮಾಣೇ* *ನಾನಾಫಲೈಃ ಫಲತಿ ಕಲ್ಪಲತೇವ ಭೂಮಿಃ ।।* (ನೀತಿ ಶತಕಮ್) ರಾಜನೇ, ನೀನು ಈ ಭೂಮಿಯೆಂಬ ಹಸುವನ್ನು ಕರೆಯಲು ಇಚ್ಛಿಸಿದ್ದೇ ಆದರೆ, ಈ ಪ್ರಜೆಗಳನ್ನು ಕರುವಿನಂತೆ ಬೆಳೆಸು. ಹೀಗೆ ಯಾವಾಗಲೂ ಪ್ರಜೆಗಳು ಸಂರಕ್ಷಿಸಲ್ಪಟ್ಟರೆ ಭೂಮಿಯೂ ಕೂಡ ನಾನಾ ಬಗೆಯ ಫಲಗಳಿಂದ ಕೂಡಿ ಕಲ್ಪವೃಕ್ಷದಂತೆ ಫಲಿಸುತ್ತದೆ. *🌷🌺🙏ಶುಭದಿನವಾಗಲಿ!🙏🌺🌷*
إظهار الكل...
Photo unavailableShow in Telegram
Photo from Srikanth Matrubai
إظهار الكل...
*ಗಂಧರ್ವರ ಇತಿಹಾಸ:* ಪುರಾಣಗಳಲ್ಲಿ ಕಿನ್ನರರು, ಕಿಂಪುರುಷರಂತೆ ಪ್ರಸಿದ್ಧರಾದ ಒಂದು ಬಗೆಯ ಜನ. ಇವರನ್ನು ದೇವಯೋನಿಗಳು, ದೇವಗಾಯಕರು, ದೇವೀಮೂಲವುಳ್ಳವರು ಎಂದು ಕರೆಯುತ್ತಾರೆ. ಗಂಧರ್ವ ಶಬ್ದ ಋಗ್ವೇದದಲ್ಲಿ ಹಲವೆಡೆಗಳಲ್ಲಿ ಬರುತ್ತದೆ. ಅದರ ಪ್ರಕಾರ ವಿಶ್ವಾವಸು ಅಲ್ಲಿನ ಗಂಧರ್ವ. ಈತನಿಗೆ ವಾಯುಕೇಶನೆಂತಲೂ ಹೆಸರು. ಆಕಾಶ, ಈತನ ನೆಲೆ. ಸ್ವರ್ಗಲೋಕದ ಸೋಮರಸದ ರಕ್ಷಣೆಯ ಭಾರ ಈತನದು. ಕೆಲವು ಕಡೆ ಸ್ವರ್ಗದ ಗಂಧರ್ವ ಚಂದ್ರನೇ (ಸೋಮ) ಎಂಬ ಭಾವನೆಯೂ ಬರುತ್ತದೆ. ಪ್ರಪ್ರಥಮ ಯಮ ಯಮಿಯರಿಗೆ ತಂದೆ ಗಂಧರ್ವ. ಅಥರ್ವವೇದದ ಪ್ರಕಾರ ಹೆಂಗಸರ ವಶೀಕರಣ ಈತನ ಅಪೂರ್ವಶಕ್ತಿ. ಈ ಕಾರಣದಿಂದಲೇ ವೈವಾಹಿಕ ಸಂದರ್ಭಗಳಲ್ಲಿ ಗಂಧರ್ವನನ್ನು ಸ್ತುತಿಸಿ ಆಹ್ವಾನಿಸುತ್ತಿದ್ದರು. ಇವೇ ಗಂಧರ್ವರ ಸಾಮಾನ್ಯ ಗುಣಗಳು. ವೇದಗಳಲ್ಲಿ ವರುಣ ಗಂಧರ್ವರಾಜ. ಸೋಮ ಅಪ್ಸರೆಸೆಯರು ಇವನ ಅಧೀನ. ಗಂಧರ್ವರು ಅನೇಕ ದೈವಿಕರಹಸ್ಯಗಳನ್ನು ಬಲ್ಲವರು. ಅಥರ್ವವೇದದಲ್ಲಿ ಗಂಧರ್ವರೂ ಅಪ್ಸರಸೆಯರೂ ಹೆಸರಿಸಲ್ಪಟ್ಟಿದ್ದಾರೆ. ಅಥರ್ವವೇದದ ಪ್ರಕಾರ ಇವರು ಅನೇಕ ಔಷಧಿಗಳನ್ನು ಬಲ್ಲವರು. ತಪಃಶಕ್ತಿಯ ಮಾರ್ಗದರ್ಶಕರು. ಕನ್ಯೆಯರನ್ನು ಹಿಂಬಾಲಿಸುವುದು ಇವರ ಚಟ. ಋತುಮತಿಯಾದ ಕನ್ಯೆಯರು ಇವರ ಅಧೀನ. ಪಿಶಾಚರು ರಾಕ್ಷಸರು ಮುಂತಾದವರಿಗೆ ಹೆದರುವಂತೆ ಗಂಧರ್ವರಿಗೂ ಜನ ಹೆದರುತ್ತಿದ್ದರು. ಭಯ ನಿವಾರಣೆಗಾಗಿ ತಾಯಿತ ಕಟ್ಟಿಕೊಳ್ಳುತ್ತಿದ್ದರು. ಇವರನ್ನು ಸುಂದರಾಂಗರೆಂದೂ ಕುಬ್ಜರೆಂದೂ ಮೃಸ್ವರೂಪಿಗಳೆಂದೂ ವರ್ಣಿಸಲಾಗಿದೆ. ಇತಿಹಾಸ, ಪುರಾಣಗಳಲ್ಲಿ ಬರುವ ಇವರು ಸ್ವರ್ಗದ ಗಾಯಕರು. ಇಂದ್ರನ ಸಭೆಯಲ್ಲಿನ ವಾದ್ಯಗೋಷ್ಠಿ ಇವರದು. ಇವರ ಕಲೆ ಸಂಗೀತ. ಇದೇ ಗಾಂಧರ್ವವೆಂಬ ಉಪವೇದವೆನಿಸಿದೆ. ಚಿತ್ರರಥ ಇವರ ಪ್ರಭು. ಜೈನಾಗಮಗಳ ಅಷ್ಟಗಣಗಳಲ್ಲಿ ಗಂಧರ್ವರೂ ಒಂದು ಗುಣ. ಹದಿನೇಳನೆಯ ತೀರ್ಥಂಕರನ ಕಿಂಕರ ಒಬ್ಬ ಗಂಧರ್ವ. ಗಂಧರ್ವರು ಸರಸಿಗಳು, ಇವರ ಸ್ತ್ರೀಯರು ಅಪ್ಸರಸೆಯರು. ರಂಭೆ, ಊರ್ವಶಿ, ತಿಲೋತ್ತಮೆ, ಮೇನಕೆ, ಘೃತಾಚೀ ಮುಂತಾದ ಸಪ್ತಕನ್ನಿಕೆಯರು ಗಂಧರ್ವಸ್ತ್ರೀಯರಲ್ಲಿ ಪ್ರಸಿದ್ಧರು. ಇವರ ಪ್ರೇಮಸಂಬಂಧ ಗಾಂಧರ್ವವೆಂದು ಪ್ರಸಿದ್ಧವಾಗಿದೆ. ಆದ್ದರಿಂದಲೆ ತಾಯಿ ತಂದೆಯರ ಅಥವಾ ನೆಂಟರಿಷ್ಟರ ಮಧ್ಯಸ್ತಿಕೆ ಇಲ್ಲದೆ ಪ್ರೇಮವೇ ಬುನಾದಿಯಾಗಿ ಆಗುವ ವಿವಾಹ ಸಂಬಂಧವನ್ನು ಗಾಂಧರ್ವ ಎಂದು ಮನುಸ್ಮತ್ಯಾದಿಗಳು ವಿವರಿಸುತ್ತವೆ.
إظهار الكل...
👍 1
Photo unavailableShow in Telegram
🕉️ ಓಂ ಶ್ರೀ ಗುರುಭ್ಯೋ ನಮಃ 🕉️ ‌ *ಅಡುಗೆ ಮನೆಯಲ್ಲಿ ಅನ್ನಪೂರ್ಣೇಶ್ವರಿ ಅನ್ನದಾತೆ...* ಅನ್ನಪೂರ್ಣ, ಅನ್ನಪೂರ್ಣೇಶ್ವರಿ, ಅನ್ನದಾತೆ ಎಂದು ಕರೆಯಲಾಗುವ ಈ ದೇವಿಯನ್ನು ಆದಿಶಕ್ತಿಯ ಒಂದು ಅಂಶವೆಂದು ಹೇಳಲಾಗುತ್ತದೆ. ಮತ್ತು ಈಕೆಯನ್ನು ಆಹಾರ ಮತ್ತು ಪೋಷಣೆಯ ಹಿಂದೂ ದೇವತೆ ಎಂದು ಕರೆಯಲಾಗುತ್ತದೆ. ಆರಾಧನೆ ಮತ್ತು ಆಹಾರದ ಕೊಡುಗೆಯನ್ನು ಹಿಂದೂ ಧರ್ಮದಲ್ಲಿ ಹೆಚ್ಚು ಪ್ರಶಂಸಿಸಲಾಗುತ್ತದೆ ಮತ್ತು ಆದ್ದರಿಂದ, ಅನ್ನಪೂರ್ಣ ದೇವಿಯನ್ನು ಜನಪ್ರಿಯ ದೇವತೆ ಎಂದು ಪರಿಗಣಿಸಲಾಗುತ್ತದೆ. ಅವಳು ಶಿವನ ಪತ್ನಿಯಾದ ಪಾರ್ವತಿ ದೇವಿಯ ದ್ಯೋತಕವಾಗಿದ್ದಾಳೆ. ಭೋಲೇನಾಥನಿಗೆ ಭಿಕ್ಷೆ ನೀಡುತ್ತಿರುವ ತಾಯಿ ಅನ್ನಪೂರ್ಣೇಶ್ವರಿಯ ಚಿತ್ರವನ್ನು ಅಡುಗೆ ಕೋಣೆಯಲ್ಲಿ ಇಡಬೇಕೆಂದು ಹೇಳುವುದನ್ನು ನೀವು ಆಗಾಗ್ಗೆ ಕೇಳಿರಬಹುದು. ಹಾಗಾದರೆ, ತಾಯಿ ಅನ್ನಪೂರ್ಣೇಶ್ವರಿಯ ಚಿತ್ರವನ್ನು ಅಡುಗೆ ಮನೆಯಲ್ಲಿ ಯಾಕೆ ಇಡಬೇಕು..? ಹಾಗೂ ಅನ್ನಪೂರ್ಣೇಶ್ವರಿ ಫೋಟೋವನ್ನು ಹೇಗಿಡಬೇಕು ಗೊತ್ತೇ..? ‌ ‌ ‌ ‌ *ಮುಂಜಾನೆ ಮೊದಲು ಈ ಕೆಲಸ ಮಾಡಿ* ಮೊದಲ ಬಾರಿಗೆ ದೇವಿಯ ಫೋಟೋ ಇಡುವಾಗ, ಯಾವುದೇ ಗುರುವಾರ ಅಥವಾ ಶುಕ್ರವಾರದಂದು ಮುಂಜಾನೆ ಎದ್ದ ನಂತರ, ದೈನಂದಿನ ಕೆಲಸದಿಂದ ನಿವೃತ್ತರಾಗಿ, ಮೊದಲು ಅಡುಗೆಮನೆಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಪ್ರತಿದಿನ ಅಡುಗೆ ಮನೆಯನ್ನು ರಾತ್ರಿಯೇ ಶುಚಿಗೊಳಿಸಬೇಕು. ತಪ್ಪಿದರೆ ಬೆಳಿಗ್ಗೆ ಎದ್ದ ಕೂಡಲೇ ಶುಚಿಗೊಳಿಸಿ ನಂತರವೇ ಒಲೆ ಹಚ್ಚಬೇಕು. *ಗಂಗಾಜಲವನ್ನು ಸಿಂಪಡಿಸಿ* ಅಡುಗೆ ಮನೆಯನ್ನು ಸ್ವಚ್ಛಗೊಳಿಸಿದ ನಂತರ ಗಂಗಾಜಲವನ್ನು ಸಿಂಪಡಿಸುವ ಮೂಲಕ ಇಡೀ ಮನೆಯನ್ನು ಪವಿತ್ರಗೊಳಿಸಿ. ಚಿತ್ರವನ್ನು ಇಡಬೇಕಾದರೂ ಗಂಗಾಜಲದಿಂದ ಗೋಡೆಯನ್ನೂ ಸ್ವಚ್ಛಗೊಳಿಸಿ, ನಂತರ ಗೋಡೆಯ ಮೇಲೆ ಚಿತ್ರವನ್ನು ಹಾಕಿ. *ತಾಯಿಯ ಈ ರೂಪವನ್ನು ಪೂಜಿಸಿ* ಅಡುಗೆ ಮನೆಯಲ್ಲಿ ಅನ್ನಪೂರ್ಣ ರೂಪದಲ್ಲಿರುವ ಶಿವ ಮತ್ತು ಪಾರ್ವತಿ ದೇವಿಯನ್ನು ಅಥವಾ ಕೈಯಲ್ಲಿ ಅನ್ನ ಹಿಡಿದಿರುವ ತಾಯಿಯನ್ನು ಪೂಜಿಸಬೇಕು ಮತ್ತು ನಿಮ್ಮ ಮನೆಯಲ್ಲಿ ಅನ್ನ, ಆಹಾರ ಮತ್ತು ಪಾನೀಯಗಳಿಗೆ ಎಂದಿಗೂ ಕೊರತೆಯಾಗಬಾರದು ಎಂದು ವಿನಂತಿಸಬೇಕು. *ಪೂಜೆ ಹೀಗಿರಲಿ* ಗಂಗಾಜಲದಿಂದ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಿದ ನಂತರ, ನೀವು ಅಡುಗೆ ಮಾಡುವ ಅನಿಲ, ಒಲೆ ಅಥವಾ ಮಣ್ಣಿನ ಒಲೆಯನ್ನು ಕ್ರಮಬದ್ಧವಾಗಿ ಪೂಜಿಸಿ ಮತ್ತು ತಾಯಿ ಅನ್ನಪೂರ್ಣೆಯನ್ನು ಪೂಜಿಸಿ. *ಅನ್ನಪೂರ್ಣೆಯ ಫೋಟೋವನ್ನು ಹಾಕಿ* ಇದರೊಂದಿಗೆ ಅನ್ನಪೂರ್ಣ ಮಾತೆಯ ಮಂತ್ರ, ಸ್ತೋತ್ರ, ಆರತಿ ಮತ್ತು ಕಥೆಯನ್ನು ಓದಬೇಕು. ಈ ಚಿತ್ರವನ್ನು ಅಡುಗೆಮನೆಯ ದಕ್ಷಿಣ ಅಥವಾ ಪೂರ್ವ ದಿಕ್ಕಿನಲ್ಲಿ ಹಾಕಿ. ತಾಯಿಯ ಕೃಪೆಯಿಂದ ನಿಮ್ಮ ಮನೆಯ ಅಡುಗೆ ಕೋಣೆಯು ಸದಾ ಆಹಾರದಿಂದ ತುಂಬಿರುತ್ತದೆ. *ಧೂಪ - ದೀಪದಿಂದ ಪೂಜಿಸಿ* ಅನ್ನಪೂರ್ಣೇಶ್ವರಿಯ ಮಂತ್ರ ಮತ್ತು ಸ್ತೋತ್ರವನ್ನು ಪಠಿಸಿ, ಆಕೆಯ ಚಿತ್ರವನ್ನು ಹಾಕಿದ ನಂತರ ಅಡುಗೆ ಮಾಡುವ ಒಲೆಗೆ ಅರಿಶಿನ, ಕುಂಕುಮ, ಅಕ್ಷತೆ, ಹೂವು, ಧೂಪ ಮತ್ತು ದೀಪವನ್ನು ಹಚ್ಚಿ ಪೂಜಿಸಬೇಕು. ಅಡುಗೆ ಮನೆಯಲ್ಲಿಯೇ ತಾಯಿ ಪಾರ್ವತಿ ಮತ್ತು ಶಂಕರ ದೇವರನ್ನು ಪೂಜಿಸಿ. *ಮನೆಯ ಪ್ರತಿಯೊಬ್ಬರೂ ಪ್ರಾರ್ಥಿಸಿ* ತಾಯಿ ಅನ್ನಪೂರ್ಣೆಯ ಚಿತ್ರದ ಮುಂದೆ, ಮನೆಯ ಪ್ರತಿಯೊಬ್ಬ ಸದಸ್ಯರು ಅಡುಗೆಮನೆಯಲ್ಲಿ 11 ಬಾರಿ ಪ್ರಾರ್ಥಿಸಬೇಕು, "ಓ ತಾಯಿ, ನಮ್ಮ ಕುಟುಂಬವು ಯಾವಾಗಲೂ ಆಹಾರ ಮತ್ತು ನೀರಿನಿಂದ ತುಂಬಿರಬೇಕು" ಎಂದು ಬೇಡಿಕೊಳ್ಳಬೇಕು. ಇದರ ಬಳಿಕ ಮನೆಯಲ್ಲಿ ಅಡುಗೆಯನ್ನು ಮಾಡಿ ಮೊದಲು ದೇವರಿಗೆ, ಪ್ರಾಣಿ ಪಕ್ಷಿಗಳಿಗೆ, ಬಡವರಿಗೆ ಅಥವಾ ನಿರ್ಗತಿಕರಿಗೆ ನೀಡಿ ನಂತರ ಮನೆಯ ಸದಸ್ಯರು ಆಹಾರವನ್ನು ಸೇವಿಸಬೇಕು. ‌ ‌ ‌ ‌ ‌ ‌ ‌ ‌ ‌ ‌ ‌ ‌ ‌ ‌"ಭೋಜನಕ್ಕೆ ಕುಳಿತುಕೊಂಡ ಮೇಲೆ ಮುಂದಿನ ಶ್ಲೋಕವನ್ನು ಭಕ್ತಿಯಿಂದ ಪಠಿಸಬೇಕು" *ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣ ವಲ್ಲಭೇ* | *ಜ್ಞಾನ ವೈರಾಗ್ಯ ಸಿದ್ಧ್ಯರ್ಥಂ ಭಿಕ್ಷಾಂ ದೇಹಿ ಚ ಪಾರ್ವತೀ* || ಈ ಶ್ಲೋಕದಲ್ಲಿ ಪಾರ್ವತಿದೇವಿಯ ಅವತಾರವಾದ ಅನ್ನಪೂರ್ಣಾ ಮಾತೆಯನ್ನು ಸಂಬೋಧಿಸಿ, ತಟ್ಟೆಯಲ್ಲಿರುವ ಅನ್ನವನ್ನು ಅವಳು ದಯಪಾಲಿಸಿದ ಭಿಕ್ಷೆಯೆಂದು ಸ್ವೀಕರಿಸಲಾಗುತ್ತದೆ. ಇದರಿಂದ ಅನ್ನದ ಬಗ್ಗೆ ಗೌರವ ಮತ್ತು ಕೃತಜ್ಞತೆಯ ಭಾವ ನಿರ್ಮಾಣವಾಗಲು ಸಹಾಯವಾಗುತ್ತದೆ. ಮೊದಲ ತುತ್ತು ಗ್ರಹಿಸುವ ಮುಂಚೆ ಮುಂದಿನ ಪ್ರಾರ್ಥನೆಯನ್ನು ಮಾಡಬೇಕು. "ಹೇ ಪರಮೇಶ್ವರಾ, ಈ ಅನ್ನವು ನಿನ್ನ ಚರಣಗಳಲ್ಲಿ ಅರ್ಪಿಸಿ, ನಿನ್ನ ಚರಣಗಳ ಪ್ರಸಾದವೆಂದು ಗ್ರಹಿಸುತ್ತಿದ್ದೇನೆ. ಈ ಪ್ರಸಾದದಿಂದ ನನಗೆ ಶಕ್ತಿ ಮತ್ತು ಚೈತನ್ಯ ಲಭಿಸಲಿ." ಊಟ ಮಾಡುವಾಗ ಅನಾವಶ್ಯಕವಾಗಿ ಮಾತನಾಡುವುದಕ್ಕಿಂತ, ಇತರ ವಿಷಯಗಳನ್ನು ಮಾಡುವುದಕ್ಕಿಂತ ದೇವರ ನಾಮವನ್ನು ಜಪಿಸುತ್ತಾ ಆಹಾರವನ್ನು ಸೇವಿಸಿ.
إظهار الكل...
Photo unavailableShow in Telegram
ಶ್ರೀ ಮಹೇಶ್ವರಮ್ಮ ದೇವಸ್ಥಾನ ಯಲಹಂಕ ಬೆಂಗಳೂರು ಈ ದಿನ ಆಷಾಢ ಶುಕ್ರವಾರದ ಪ್ರಯುಕ್ತ ವಿಶೇಷ ಪೂಜಾ ಅಲಂಕಾರ🙏🙏🙏🌹🌹🌹12/07/2024
إظهار الكل...
Photo unavailableShow in Telegram
On the occasion of 1st Ashada Friday 🚩 ಶ್ರೀಮಾತ್ರೇ ನಮಃ Sri Banashankari Amma Alankaram Pooja Darshanam 🙏 July 12th , Friday 2024 🚩ಪ್ರಥಮ ಆಷಾಢ ಶುಕ್ರವಾರ ಪ್ರಯುಕ್ತ🚩 ಶ್ರೀ ಬನಶಂಕರಿ ಅಮ್ಮನವರಿಗೆ ಗೆಜ್ಜೆ ಅಲಂಕಾರ ಪೂಜೆ ದರ್ಶನ 🙏🏼😻🛕🙏 ಶ್ರೀ ಬನಶಂಕರಿ ಅಮ್ಮನವರ ಸನ್ನಿಧಿ, ಬೆಂಗಳೂರು 🙏🏼 🙏🏼😻🛕 Sri Banashankari Temple, Banashankari,Bengaluru *ಸರ್ವೇಷಾಂ ಸಮಸ್ತ ಸನ್ಮಂಗಳಾನಿ ಭವಂತು* *’ಸಮಸ್ತ ಲೋಕ ಸುಖಿನೋಭವಂತು ಸರ್ವೇ ಸನ್ಮಂಗಳಾನಿ ಭವಂತು’* *ಧಮೋ೯ ರಕ್ಷತಿ ರಕ್ಷಿತ:* *ಕೃಷ್ಣಾರ್ಪಣಮಸ್ತು*
إظهار الكل...
👍 1
🚩🌺🌅🌺🚩 ಮುಂಜಾನೆಯ ಸೂಳ್ನುಡಿ *ಭಾತೀತಿ ಚೇದ್ಭಾತು ನಾಮ ಭೂಷಣಂ ಮಾಯಿಕಸ್ಯ ತತ್ |* *ಯದಸದ್ಭಾಸಮಾನಂ ತನ್ಮಿಥ್ಯಾ ಸ್ವಪ್ನಗಜಾದಿವತ್ ||* "ಆಕಾಶವು ಕಾಣುತ್ತಿದೆಯೆಂದು ನೀನು ಹೇಳಿದರೆ ಅದು ಕಾಣಲಿ ! ಆ ತೋರಿಕೆಯು ಮಾಯಾವಿಗೆ ಭೂಷಣವಾಗಿದೆ. ಇಲ್ಲದಿರುವ ವಸ್ತುವು ಇದ್ದಂತೆ ಕಂಡುಬಂದರೆ ಅದು ಸ್ವಪ್ನದಲ್ಲಿ ಕಂಡುಬಂದ ಆನೆ ಮೊದಲಾದುವುಗಳಂತೆ ಮಿಥ್ಯೆ. *(ಪಂಚಭೂತವಿವೇಕ ಪ್ರಕರಣ)* ಮುಂದುವರಿಯುತ್ತದೆ.... *🙏🌺ಶುಭದಿನವಾಗಲಿ🌺🙏*
إظهار الكل...
اختر خطة مختلفة

تسمح خطتك الحالية بتحليلات لما لا يزيد عن 5 قنوات. للحصول على المزيد، يُرجى اختيار خطة مختلفة.