7 228
Subscribers
-224 hours
+57 days
+5630 days
Posts Archive
7 229
Repost from THE TARGET 100 (SSC in KANNADA)
✅ ಇಂದು ಬೆಳಗ್ಗೆ ನಡೆದ Non-HK ಸಿವಿಲ್ ಪೊಲೀಸ್ ಪರಿಕ್ಷೆಯಲ್ಲಿ ಯಾವ ವಿಷಯಗಳ ಮೇಲೆ ಎಷ್ಟು ಪ್ರಶ್ವೆಗಳನ್ನು ಕೇಳಿದ್ದರು ಎಂಬ ಮಾಹಿತಿ ನೀಡಲಾಗಿದೆ...
🎯 ಪ್ರಶ್ನೆ ಸಂಖ್ಯೆಗಳನ್ನು D-3 ಪ್ರಶ್ನೆ ಪತ್ರಿಕೆಯಲ್ಲಿ ಇದ್ದಂತೆ ನೀಡಲಾಗಿದೆ...
7 229
Repost from THE TARGET 100 (SSC in KANNADA)
✅ ಇಂದು ಬೆಳಗ್ಗೆ ನಡೆದ HK ಸಿವಿಲ್ ಪೊಲೀಸ್ ಪರಿಕ್ಷೆಯಲ್ಲಿ ಯಾವ ವಿಷಯಗಳ ಮೇಲೆ ಎಷ್ಟು ಪ್ರಶ್ನೆಗಳನ್ನು ಕೇಳಿದ್ದರು ಎಂಬ ಮಾಹಿತಿ ನೀಡಲಾಗಿದೆ...
🎯 ಪ್ರಶ್ನೆ ಸಂಖ್ಯೆಗಳನ್ನು C-3 ಪ್ರಶ್ನೆ ಪತ್ರಿಕೆಯಲ್ಲಿ ಇದ್ದಂತೆ ನೀಡಲಾಗಿದೆ...
📌 ಕೆಲ ಪ್ರಶ್ನೆಗಳನ್ನು ಒಂದಕ್ಕಿಂತ ಹೆಚ್ಚು Subject ಅಲ್ಲಿ ಸೇರಿಸಬಹುದು, ಆದ್ರೆ ಅವುಗಳನ್ನು ಹೆಚ್ಚು ಸೂಕ್ತ ಎನಿಸುವ ವಿಷಯದಲ್ಲಿ ಸೇರಿಸಲಾಗಿದೆ...
7 229
Today's PC (Civil) Question Paper.
👉 Direct but special 🔥 - 50 Questions.
👉 Statement Based - 20 Questions.
👉 Match the following - 15 Questions.
👉 Mental Ability - 15 Questions.
7 229
✅ ಪೊಲೀಸ್ ಕಾನ್ಸ್ ಟೇಬಲ್ ನೇಮಕಾತಿ ಪರೀಕ್ಷೆ:
ಬೆಂಗಳೂರು ನಗರ ಜಿಲ್ಲೆಯ ಪರೀಕ್ಷಾ ಕೇಂದ್ರಗಳಲ್ಲಿ ಪೂರ್ವ ಸಿದ್ದತೆ...
🎯 ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀ. ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಣೆ: ಕಾಂತರಾಜು ಪಿ.ಎಸ್*
📌 ಕರ್ನಾಟಕ ಪರೀಕ್ಷಾ ಪ್ರಾಧಿಕಾರ ವತಿಯಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿ ಪರೀಕ್ಷೆಯು ಆಗಸ್ಟ್ 02 ರಂದು ಬೆಂಗಳೂರು ನಗರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯಲಿದ್ದು ಪಾರದರ್ಶಕತೆ, ಶಾಂತಿಯುತ ಹಾಗೂ ಸುಸೂತ್ರವಾಗಿ ನಡೆಸಲು ಜಿಲ್ಲಾಡಿಳಿತ ವತಿಯಿಂದ ಅಗತ್ಯವಿರುವ ಎಲ್ಲಾ ಪೂರ್ವಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿಗಳಾದ ಕಾಂತರಾಜು ಪಿ.ಎಸ್ ಅವರು ತಿಳಿಸಿದ್ದಾರೆ.
🎯 ಪರೀಕ್ಷಾ ಕೇಂದ್ರಗಳು
ಪರೀಕ್ಷೆಯು ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00 ಗಂಟೆ ಯವರೆಗೆ ಒಟ್ಟು 149 ಪರೀಕ್ಷಾ ಕೇಂದ್ರಗಳಲ್ಲಿ ಹಾಗೂ ಮಧ್ಯಾಹ್ನ 4.00 ರಿಂದ ಸಂಜೆ 5.30 ರವರೆಗೆ ಒಟ್ಟು 47 ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ.
ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳ ವಿವರ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ ಟೇಬಲ್ (ಸಿವಿಲ್) ಹುದ್ದೆಗಳ ನೇಮಕಾತಿ ಪರೀಕ್ಷೆಗೆ ಬೆಳಗಿನ ಅಧಿವೇಶನಕ್ಕೆ 74,942 ಅಭ್ಯರ್ಥಿಗಳು ಹಾಗೂ ಮಧ್ಯಾಹ್ನ ಅಧಿವೇಶನಕ್ಕೆ 22,369 ಅಭ್ಯರ್ಥಿಗಳು ಒಟ್ಟು 97,311 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ.
✅ ಪರೀಕ್ಷಾ ಕೇಂದ್ರಗಳಲ್ಲಿ ಪಾಲೀಸಬೇಕಾದ ನಿಯಮಗಳು:
ಎಲ್ಲಾ ಅಭ್ಯರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿಗಳು ಪರೀಕ್ಷೆ ಆರಂಭಕ್ಕೆ 2 ಗಂಟೆಗಳ ಮುಂಚಿತವಾಗಿ ಕಡ್ಡಾಯವಾಗಿ ಪರೀಕ್ಷಾ ಕೇಂದ್ರದಲ್ಲಿ ಹಾಜರಾಗಬೇಕು.
ಪಠ್ಯ ಸಾಮಗ್ರಿಗಳು, ವೈಯಕ್ತಿಕ ವಸ್ತುಗಳು, ಆಧುನಿಕ ಸಂವಹನ ಸಾಧನೆಗಳು (ಮೊಬೈಲ್, ಸ್ಮಾರ್ಟ್ ವಾಚ್ ಮುಂತಾದವು), ಮಣಿಕಟ್ಟಿನ ವಸ್ತುಗಳು, ಗುಪ್ತ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಆಹಾರ ಮತ್ತು ಪಾನೀಯಗಳನ್ನು ಪರೀಕ್ಷಾ ಕೇಂದ್ರದೊಳಗೆ ನಿಷೇಧಿಸಲಾಗಿದೆ.
🎯 ವಸ್ತ್ರಸಂಹಿತೆ (Dress Code)
ಉದ್ದ ತೋಳಿನ ಉಡುಪು ಧರಿಸಿ ಪರೀಕ್ಷೆಗೆ ಹಾಜರಾಗಬಾರದು, ಕಿವಿ, ತಲೆ ಅಥವಾ ಮುಖವನ್ನು ಮುಚ್ಚುವ ಯಾವುದೇ ಉಡುಪು ಧರಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸಲು ಅವಕಾಶ ಇರುವುದಿಲ್ಲ, ಮೂಗುತಿ ಹಾಗೂ ಮಂಗಳಸೂತ್ರವನ್ನು ಹೊರತುಪಡಿಸಿ ಯಾವುದೇ ಆಭರಣ ಅಥವಾ ಲೋಹದ ವಸ್ತುಗಳನ್ನು ಧರಿಸಬಾರದು, ಚಪ್ಪಲಿ ಅಥವಾ ಕಡಿಮೆ ಹಿಮ್ಮಿಡಿಯಿರುವ ಸ್ಯಾಂಡಲ್ ಧರಿಸುವುದು ಸೂಕ್ತ, ಶೂ ಧರಿಸಿಕೊಂಡು ಬರುವುದಕ್ಕೆ ಅವಕಾಶ ಇರುವುದಿಲ್ಲ.
ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿರುವ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ನಿಗದಿತ ಸಮಕ್ಕಿಂತ 02 ಗಂಟೆ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ಆಗಮಿಸುವ ಮೂಲಕ ಪರೀಕ್ಷೆಯನ್ನು ಸುಗಮವಾಗಿ ನಡೆಸಲು ಸಹಕರಿಸುವಂತೆ ಸಾರ್ವಜಿನಿಕರಲ್ಲಿ ಹಾಗೂ ಅಭ್ಯರ್ಥಿಗಳಲ್ಲಿ ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.
🎯 ಕಾನೂನು ಮತ್ತು ಸುವ್ಯವಸ್ಥೆ:
ಪರೀಕ್ಷಾ ಕೇಂದ್ರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ 200 ಮೀಟರ್ ವ್ಯಾಪ್ತಿಯನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗಿದೆ. ಆಗಸ್ಟ್ 2 ರಂದು ಬೆಳಿಗ್ಗೆ 7.00 ಗಂಟೆಯಿಂದ ಪರೀಕ್ಷೆ ಮುಕ್ತಾಯವಾಗುವವರೆಗೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪರೀಕ್ಷಾ ಕೇಂದ್ರಗಳ ಸುತ್ತಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಮುಚ್ಚಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ವಸ್ತ್ರಸಂಹಿತೆಯಂತೆ ಅಭ್ಯರ್ಥಿಗಳ ಪರಿಶೀಲನೆ ನಡೆಸಿ, ಪರೀಕ್ಷೆ ಆರಂಭಕ್ಕೆ 30 ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರದೊಳಗೆ ಪ್ರವೇಶವನ್ನು ಕಲ್ಪಿಸಲಾಗುವುದು. ಅಭ್ಯರ್ಥಿಗಳು ಯಾವುದೇ ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೇಂದ್ರದೊಳಗೆ ತೆಗೆದುಕೊಂಡು ಹೋಗದಂತೆ ಕಟ್ಟುನಿಟ್ಟಿನ ತಪಾಸಣೆ ನಡೆಸಲಾಗುವುದು. ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ (CCTV)ಕ್ಯಾಮೆರಾಗಳು ಹಾಗೂ ಜ್ಯಾಮರ್ ಗಳನ್ನು (Jammers) ಅಳವಡಿಸಿ ಪರೀಕ್ಷೆಯನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಸಲು ಅಗತ್ಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
7 229
💪 ನಾಳೆಯ PC ಪರೀಕ್ಷೆಗೆ ಶುಭಾಶಯಗಳು! 🇮🇳👮
ನಾಳೆಯ ಪರೀಕ್ಷೆಯನ್ನು ಯಾವುದೇ ಭಯ ಅಥವಾ ಒತ್ತಡವಿಲ್ಲದೆ ಆತ್ಮವಿಶ್ವಾಸದಿಂದ ಬರೆಯಿರಿ.
📌 ಕೊನೆಯ ಕ್ಷಣದಲ್ಲಿ ಹೊಸ ವಿಷಯಗಳನ್ನು ಓದಲು ಹೋಗಬೇಡಿ.
📌 OMR Sheet ಅನ್ನು ತುಂಬುವಾಗ ಅತ್ಯಂತ ಎಚ್ಚರಿಕೆಯಿಂದಿರಿ.
📌 ಉತ್ತರ ಗೊತ್ತಿಲ್ಲದ ಪ್ರಶ್ನೆಗಳಿಗೆ Option E ಅನ್ನು ಟಿಕ್ ಮಾಡಲು ಮರೆಯಬೇಡಿ.
📌 ಸಮಯವನ್ನು ಸರಿಯಾಗಿ ನಿರ್ವಹಿಸಿ.
ನೆನಪಿರಲಿ... ನಿಮ್ಮ ಎದುರಾಳಿಗಳು ಲಕ್ಷಾಂತರ ಜನರಲ್ಲ, ನಿಜವಾದ ಸ್ಪರ್ಧೆ ತಯಾರಿ ಮಾಡಿಕೊಂಡಿರುವ ಕೆಲವರ ಜೊತೆ ಮಾತ್ರ.
ನಿಮ್ಮ ಪರಿಶ್ರಮವೇ ನಿಮ್ಮ ಯಶಸ್ಸಿನ ದಾರಿ.
ಶಾಂತ ಮನಸ್ಸು + ಆತ್ಮವಿಶ್ವಾಸ + ಸರಿಯಾದ ಸಮಯ ನಿರ್ವಹಣೆ = ಯಶಸ್ಸು.
All the Best Future Police Officers! 👮🇮🇳
"ನಾಳೆಯ ನಿಮ್ಮ ಒಂದು ದಿನದ ಪ್ರಯತ್ನ, ನಿಮ್ಮ ಇಡೀ ಜೀವನವನ್ನು ಬದಲಾಯಿಸಬಹುದು.
