TARGET KEA KSP 2026
Open in Telegram
Welcome to our Telegram channel: @D_Shivu Patience is the art of hoping..💖
Show more3 073
Subscribers
-224 hours
-47 days
+4330 days
Data loading in progress...
Similar Channels
Tags Cloud
No data
Any problems? Please refresh the page or contact our support manager.
Incoming and Outgoing Mentions
---
---
---
---
---
---
Attracting Subscribers
September '26
September '26
+6
in 0 channels
August '26
+132
in 0 channels
Get PRO
July '26
+321
in 0 channels
Get PRO
June '26
+127
in 5 channels
Get PRO
May '26
+186
in 7 channels
Get PRO
April '26
+160
in 0 channels
Get PRO
March '26
+65
in 0 channels
Get PRO
February '26
+12
in 0 channels
Get PRO
January '26
+51
in 0 channels
Get PRO
December '25
+99
in 0 channels
Get PRO
November '25
+35
in 0 channels
Get PRO
October '25
+97
in 0 channels
Get PRO
September '25
+47
in 0 channels
Get PRO
August '25
+62
in 0 channels
Get PRO
July '25
+62
in 0 channels
Get PRO
June '25
+31
in 0 channels
Get PRO
May '25
+36
in 0 channels
Get PRO
April '25
+24
in 0 channels
Get PRO
March '25
+37
in 0 channels
Get PRO
February '25
+62
in 1 channels
Get PRO
January '25
+184
in 1 channels
Get PRO
December '24
+352
in 0 channels
Get PRO
November '24
+480
in 0 channels
Get PRO
October '24
+663
in 0 channels
Get PRO
September '24
+171
in 0 channels
Get PRO
August '24
+130
in 1 channels
Get PRO
July '24
+4
in 0 channels
Get PRO
June '24
+123
in 1 channels
Get PRO
May '24
+69
in 2 channels
Get PRO
April '24
+13
in 0 channels
Get PRO
March '24
+66
in 1 channels
Get PRO
February '240
in 0 channels
Get PRO
January '240
in 0 channels
Get PRO
December '230
in 0 channels
Get PRO
November '230
in 0 channels
Get PRO
October '230
in 0 channels
Get PRO
September '230
in 0 channels
Get PRO
August '230
in 0 channels
Get PRO
July '230
in 0 channels
Get PRO
June '230
in 0 channels
Get PRO
May '230
in 0 channels
Get PRO
April '23
+3
in 0 channels
Get PRO
March '23
+7
in 0 channels
Get PRO
February '23
+4
in 0 channels
Get PRO
January '23
+2
in 0 channels
Get PRO
December '22
+10
in 0 channels
Get PRO
November '22
+8
in 0 channels
Get PRO
October '22
+7
in 0 channels
Get PRO
September '22
+7
in 0 channels
Get PRO
August '22
+11
in 0 channels
Get PRO
July '22
+4
in 0 channels
Get PRO
June '22
+7
in 0 channels
Get PRO
May '22
+3
in 0 channels
Get PRO
April '22
+23
in 0 channels
Get PRO
March '22
+739
in 0 channels
| Date | Subscriber Growth | Mentions | Channels | |
| 06 September | +1 | |||
| 05 September | +2 | |||
| 04 September | +1 | |||
| 03 September | 0 | |||
| 02 September | +2 | |||
| 01 September | 0 |
Channel Posts
| 2 | KEA EXAM SPECIAL: ಎಥಿಕ್ಸ್ ( ETHICS ) QUICK REVISION NOTES 📌
ಆತ್ಮೀಯ ಸ್ಪರ್ಧಾರ್ಥಿಗಳೇ,
KEA ನಡೆಸುವ ಮುಂಬರುವ ಪರೀಕ್ಷೆಗಳಲ್ಲಿ ‘ನೈತಿಕತೆ ಮತ್ತು ಮಾನವೀಯ ಮೌಲ್ಯಗಳು’ (Ethics & Human Values) ವಿಷಯದ ಕುರಿತು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಪರೀಕ್ಷೆಗೆ ಕೊನೆ ನಿಮಿಷದ ಪುನರಾವರ್ತನೆಗೆ (Last-Minute Revision) ನೆರವಾಗುವ Short Notes ಇಲ್ಲಿದೆ:
🔹 1. ನೈತಿಕತೆ (Ethics) ಎಂದರೆ ಏನು?
• ಅರ್ಥ: ಸಮಾಜದಲ್ಲಿ ಸರಿ ಮತ್ತು ತಪ್ಪು, ಧರ್ಮ ಮತ್ತು ಅಧರ್ಮ, ಉತ್ತಮ ಮತ್ತು ಕೆಟ್ಟ ನಡೆವಳಿಕೆಗಳನ್ನು ನಿರ್ಧರಿಸುವ ತತ್ವಗಳ ಸಮೂಹವೇ ನೈತಿಕತೆ (Ethics).
• ಮೂಲ: ಗ್ರೀಕ್ ಭಾಷೆಯ ‘Ethos’ (ಸ್ವಭಾವ/ಗುಣ) ಎಂಬ ಪದದಿಂದ ಬಂದಿದೆ.
• Ethics vs Morality:
- Ethics: ಸಮಾಜ ಅಥವಾ ಸಂಸ್ಥೆ ನಿಗದಿಪಡಿಸಿದ ನಿಯಮಗಳು (ಸಾಮಾಜಿಕ).
- Morality: ಒಬ್ಬ ವ್ಯಕ್ತಿಯ ವೈಯಕ್ತಿಕ ನಂಬಿಕೆ ಮತ್ತು ಸರಿ-ತಪ್ಪುಗಳ ಕಲ್ಪನೆ (ವೈಯಕ್ತಿಕ).
🔹 2. ಸಿವಿಲ್ ಸೇವೆಯ 5 ಪ್ರಮುಖ ನೈತಿಕ ಮೌಲ್ಯಗಳು (Core Values)
1. ಪ್ರಾಮಾಣಿಕತೆ ಮತ್ತು ನಿಷ್ಠೆ (Integrity): ಯಾವುದೇ ದುರಾಶೆ ಅಥವಾ ಒತ್ತಡಕ್ಕೆ ಒಳಗಾಗದೆ, ತತ್ವಗಳಿಗೆ ಬದ್ಧರಾಗಿ ಕೆಲಸ ಮಾಡುವುದು.
2. ಪಾರದರ್ಶಕತೆ (Transparency): ಸರ್ಕಾರದ ನಿರ್ಧಾರಗಳು ಮತ್ತು ಕೆಲಸಗಳು ಸಾರ್ವಜನಿಕರಿಗೆ ಸ್ಪಷ್ಟವಾಗಿ ತಿಳಿಯುವುದು.
3. ಹೊಣೆಗಾರಿಕೆ (Accountability): ತಾನು ಮಾಡುವ ಕೆಲಸ ಮತ್ತು ನಿರ್ಧಾರಗಳ ಸರಿ-ತಪ್ಪುಗಳಿಗೆ ಸ್ವತಃ ಜವಾಬ್ದಾರನಾಗಿರುವುದು.
4. ತಟಸ್ಥತೆ (Impartiality / Neutrality): ಜಾತಿ, ಧರ್ಮ, ರಾಜಕೀಯ ಅಥವಾ ಬಡವ-ಬಲ್ಲಿದ ಎನ್ನದೆ ಎಲ್ಲರಿಗೂ ಸಮಾನವಾಗಿ ಸೇವೆ ಸಲ್ಲಿಸುವುದು.
5. ಸಹಾನುಭೂತಿ (Empathy): ಸಮಾಜದ ದುರ್ಬಲ ಮತ್ತು ಬಡ ವರ್ಗದ ಜನರ ಕಷ್ಟಗಳನ್ನು ಅರ್ಥೈಸಿಕೊಂಡು ಸ್ಪಂದಿಸುವುದು.
🔹 3. ಸಾರ್ವಜನಿಕ ಜೀವನದ 7 ನೋಲನ್ ತತ್ವಗಳು (Nolan Principles - 1995)
UK ಯ ನೋಲನ್ ಸಮಿತಿಯು ಸಾರ್ವಜನಿಕ ಸೇವಕರಿಗಾಗಿ ನೀಡಿದ 7 ಸಾರ್ವತ್ರಿಕ ತತ್ವಗಳು:
1. Selflessness (ಸ್ವಾರ್ಥರಹಿತತೆ)
2. Integrity (ಉನ್ನತ ನಿಷ್ಠೆ)
3. Objectivity (ವಸ್ತುನಿಷ್ಠತೆ/ಆಧಾರಸಹಿತ ನಿರ್ಧಾರ)
4. Accountability (ಹೊಣೆಗಾರಿಕೆ)
5. Openness (ಪಾರದರ್ಶಕತೆ/ಮುಕ್ತತೆ)
6. Honesty (ನಿಜಸಂಧತೆ)
7. Leadership (ನಾಯಕತ್ವ)
🔹 4. ನೈತಿಕ ಬಿಕ್ಕಟ್ಟು (Ethical Dilemma)
• ಅರ್ಥ: ಎರಡು ನೈತಿಕ ಮೌಲ್ಯಗಳ ನಡುವೆ ಸಂಘರ್ಷ ಏರ್ಪಟ್ಟಾಗ ಯಾವುದನ್ನು ಆಯ್ಕೆ ಮಾಡಬೇಕೆಂದು ತಿಳಿಯದ ಗೊಂದಲದ ಪರಿಸ್ಥಿತಿ.
• ಉದಾಹರಣೆಗೆ: ಕಟ್ಟುನಿಟ್ಟಿನ ನಿಯಮ ಪಾಲನೆಯೋ ಅಥವಾ ಮಾನವೀಯತೆಯ ಆಧಾರದ ಮೇಲೆ ತಕ್ಷಣ ನೆರವಾಗುವುದೋ ಎಂಬ ಧರ್ಮಸಂಕಟ.
🎯 KEA EXAM TIP:
• ಪರೀಕ್ಷೆಯಲ್ಲಿ ನೇರ ಪ್ರಶ್ನೆಗಳ ಜೊತೆಗೆ "ನೀವು ಈ ಪರಿಸ್ಥಿತಿಯಲ್ಲಿದ್ದರೆ ಏನು ಮಾಡುತ್ತೀರಿ?" ಎಂಬ ಸನ್ನಿವೇಶ ಆಧಾರಿತ (Situation-based) ಪ್ರಶ್ನೆಗಳನ್ನು ಕೇಳಲಾಗುತ್ತದೆ.
• ಉತ್ತರ ಕೊಡುವಾಗ ಯಾವಾಗಲೂ ಕಾನೂನು, ನಿಯಮಗಳು ಮತ್ತು ಸಾರ್ವಜನಿಕ ಹಿತಾಸಕ್ತಿಗೆ (Public Interest) ಮೊದಲ ಆದ್ಯತೆ ನೀಡಿ. | 141 |
| 3 | “ನೆಕ್ಸ್ಟ್‌ಜೆನ್ ಆಡಳಿತ ಮತ್ತು ಇ-ಗವರ್‌ನನ್ಸ್ ಸುಧಾರಣೆಗಳು 2026” ಕುರಿತ ರಾಷ್ಟ್ರೀಯ ಸಮ್ಮೇಳನದ ಆತಿಥ್ಯ ವಹಿಸಿದ ರಾಜ್ಯ ಯಾವುದು? | 161 |
| 4 | 5. 2026ರ Dirac Medal ಪಡೆದ ಪ್ರೊ. ದೀಪಕ್ ಧರ್ ಯಾವ ಕ್ಷೇತ್ರಕ್ಕೆ ಪ್ರಮುಖವಾಗಿ ಸಂಬಂಧಿಸಿದ್ದಾರೆ | 240 |
| 5 | 4. 2026ರಲ್ಲಿ ಭಾರತದ ಮೊದಲ ವಾಣಿಜ್ಯ Earth Observation satellite constellation ನಿರ್ಮಿಸಲು ಯಾವ ಸಂಸ್ಥೆ ಅನುಮೋದನೆ ನೀಡಿತು? | 230 |
| 6 | 3. 2026ರ ಆಗಸ್ಟ್‌ನಲ್ಲಿ ಅರುಣಾಚಲ ಪ್ರದೇಶದ ಮೊದಲ Ramsar Site ಆಗಿ ಯಾವ ಸ್ಥಳ ಸೇರ್ಪಡೆಯಾಯಿತು? | 214 |
| 7 | 2. 2026ರ ಆಗಸ್ಟ್ 17ರಂದು ನೀತಿ ಆಯೋಗದ CEO ಆಗಿ ಯಾರು ಅಧಿಕಾರ ವಹಿಸಿಕೊಂಡರು? | 196 |
| 8 | 1. 2026ರ ಜುಲೈನಲ್ಲಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿಗೆ ಯಾರನ್ನು ಆಯ್ಕೆ ಮಾಡಲಾಯಿತು? | 186 |
| 9 | ಇಸ್ರೋ(ISRO)ದ ಹೊಸ ಭೂವೀಕ್ಷಣಾ ಉಪಗ್ರಹ: ಜಿಎಸ್‌ಎಲ್‌ವಿ-ಎಫ್17 / ಇಒಎಸ್-05
* ಉಡಾವಣೆ ಡೀಟೇಲ್ಸ್: ಇಒಎಸ್-05 (EOS-05) ಅನ್ನೋ ಭೂವೀಕ್ಷಣಾ ಉಪಗ್ರಹವನ್ನ ಜಿಎಸ್‌ಎಲ್‌ವಿ-ಎಫ್17 (GSLV-F17) ವಾಹನದ ಮೂಲಕ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ (ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ) ಉಡಾವಣೆ ಮಾಡಲಾಗೈತಿ.
* ಕಕ್ಷೆ (Orbit): ಇದನ್ನ ಭೂಮಿಯಿಂದ ಸುಮಾರು 36,000 ಕಿ.ಮೀ ಎತ್ತರದಾಗ ಇರೋ 'ಭೂಸ್ಥಿರ ಕಕ್ಷೆ' (Geostationary Orbit) ಒಳಗೆ ಸೆಟ್ ಮಾಡ್ತಾರ. ಇದು ಭಾರತದ ಪಾಲಿಗೆ 'ಹೊಸ ಕಣ್ಣು' ಇದ್ದಂಗ.
* ಸ್ಪೆಷಾಲಿಟಿ (High-Frequency Imaging): ಇದರ ದೊಡ್ಡ ತಾಕತ್ ಅಂದ್ರೆ ಹೈ-ಫ್ರೀಕ್ವೆನ್ಸಿ ಇಮೇಜಿಂಗ್. ಬರೀ 5 ನಿಮಿಷದ ಗ್ಯಾಪ್‌ನಾಗ ಒಂದೇ ಜಾಗದ ಫೋಟೋ ಮತ್ತೆ ಮತ್ತೆ ತೆಗೀಬಲ್ಲದು. ಬರೀ ಅರ್ಧ ತಾಸಿನಾಗ ಭಾರತದ ಬಹುಪಾಲು ಭೂಭಾಗವನ್ನ ಸೆರೆಹಿಡಿಯೋ ಕೆಪಾಸಿಟಿ ಇದಕ್ಕೈತಿ.
* ಭದ್ರತೆ ಮತ್ತು ಆಯಕಟ್ಟಿನ ನಿಗಾ (National Security): ಗಡಿ ಪ್ರದೇಶ, ಕರಾವಳಿ ತೀರ ಮತ್ತು ಸೂಕ್ಷ್ಮ ವಲಯಗಳ ಮ್ಯಾಲ ನಿರಂತರ ಕಣ್ಣಿಡಾಕ ಇದು ಹೆಲ್ಪ್ ಆಗ್ತೈತಿ. ಗ್ರೌಂಡ್ ಸೆನ್ಸರ್ ಮತ್ತು ಗುಪ್ತಚರ ಮಾಹಿತಿಯೊಂದಿಗೂ ಬೆರೆತು ಕೆಲಸ ಮಾಡ್ತೈತಿ. ಆದ್ರೆ ಇದೇನು ಪೂರ್ತಿ ಗೂಢಚಾರಿ (Spy) ಉಪಗ್ರಹ ಅಲ್ಲ, ಪ್ರಮುಖವಾಗಿ ನಾಗರಿಕ ಬಳಕೆಗೆ (Civilian use) ಮಾಡಿದ್ದು.
* ವಿಪತ್ತು ನಿರ್ವಹಣೆ (Disaster Management): ಪ್ರವಾಹ (ನೆರೆ), ಚಂಡಮಾರುತ ಅಥವಾ ಕಾಡಿಗೆ ಬೆಂಕಿ ಬಿದ್ದಾಗ ತ್ವರಿತವಾಗಿ ಮತ್ತು ನೈಜಸಮಯದ (Real-time) ಡಾಟಾ ಕೊಟ್ಟು, ರಕ್ಷಣಾ ತಂಡಗಳು ಜಲ್ದಿ ನಿರ್ಧಾರ ತಗೋಳಾಕ ಭಾಳ ಹೆಲ್ಪ್ ಮಾಡ್ತೈತಿ.
* ಕೃಷಿ ಮತ್ತು ಪರಿಸರ (Agriculture & Environment): ರೈತರು ಹಾಕಿದ ಬೆಳೆಗಳ ಬೆಳವಣಿಗೆ ಟ್ರ್ಯಾಕ್ ಮಾಡಾಕ, ಸಸ್ಯಗಳ ಆರೋಗ್ಯ ಮತ್ತು ಭೌಗೋಳಿಕ ಬದಲಾವಣೆಗಳನ್ನ ಸ್ಟಡಿ ಮಾಡಾಕ ಇದು ಕೃಷಿ ಮತ್ತು ವಿಜ್ಞಾನ ಕ್ಷೇತ್ರಕ್ಕೆ ಮಸ್ತ್ ಯೂಸ್ ಆಗ್ತೈತಿ.
ಎಕ್ಸಾಮ್‌ನ್ಯಾಗ ವಾಹನದ ಹೆಸರು (GSLV-F17), ಉಪಗ್ರಹದ ಹೆಸರು (EOS-05) ಮತ್ತು ಅದು ಇರೋ ಕಕ್ಷೆ (ಭೂಸ್ಥಿರ ಕಕ್ಷೆ / Geostationary Orbit) ಪಕ್ಕಾ ನೆನಪಿಟ್ಕೋರಿ ದೋಸ್ತ್! | 1 |
| 10 | No text... | 185 |
| 11 | No text... | 211 |
| 12 | ನಾಳಿನ KSP CAR/DAR ಎಕ್ಸಾಮ್ ಬರೆಯೋ ನಮ್ ಎಲ್ಲಾ ದೋಸ್ತರಿಗೂ ದೇವರ ಹಾಗೂ ತಂದೆ-ತಾಯಿಯ ಸಂಪೂರ್ಣ ಆಶೀರ್ವಾದ ಇರಲಿ.!
ಇಷ್ಟು ದಿನ ನೀವು ಪಟ್ಟಿರೋ ಕಷ್ಟ, ಹರಿಸಿರೋ ಬೆವರು ಯಾವತ್ತೂ ಸುಳ್ಳಾಗಂಗಿಲ್ಲ. ನಾಳೆ ಪರೀಕ್ಷೆ ಬರಿಯಾಕ ಹೋಗೋ ಮುಂದ, ನಿಮ್ಮನ್ನ ಹೆತ್ತು ಹೊತ್ತು ಬೆಳೆಸಿರೋ ಅವ್ವ-ಅಪ್ಪನ ಮುಖ ಒಮ್ಮೆ ನೆನಪ ಮಾಡ್ಕೋರಿ, ಅವರ ಆಶೀರ್ವಾದಾನೇ ನಿಮಗೆ ಅತೀ ದೊಡ್ಡ ಶಕ್ತಿ.
ಆ ದೇವರು ನಿಮ್ಮ ಬೆನ್ನ ಹಿಂದ ನಿಂತು ನಿಮ್ಮ ಕೈಯಿಂದ ಸರಿ ಉತ್ತರ ಬರೆಸ್ತಾನ ಅನ್ನೋ ನಂಬಿಕೆ ಇರಲಿ.
🙌 ಆಶೀರ್ವಾದದ ಬಲ: ನಿಮ್ಮನ್ನ ನಂಬಿರೋ ಗುರು-ಹಿರಿಯರ ಹಾರೈಕೆ ನಿಮ್ಮೊಂದಿಗೈತಿ. ಹೆದರದೆ, ಎದೆಗುಂದದೆ ಎಕ್ಸಾಮ್ ಎದುರಿಸ್ರಿ.
🌍 ಶಾಂತ ಮನಸ್ಸು: ಹಾಲ್‌ನ್ಯಾಗ ಕೂತಾಗ ಯಾವ್ದೇ ಟೆನ್ಷನ್ ತಗೋಬ್ಯಾಡ್ರಿ. ತಲೀ ಪೂರ್ತಿ ತಣ್ಣಗ ಇಟ್ಟು, ಆರಾಮ್‌ಸೆ ಪೇಪರ್ ಓದ್ಕೊಳ್ರಿ.
💪 ಛಲ ಬಿಡಬ್ಯಾಡ್ರಿ: ಖಾಕಿ ಬಟ್ಟಿ ಹಾಕೊಂಡು, ನಿಮ್ಮವ್ವ-ಅಪ್ಪ ಹೆಮ್ಮೆಯಿಂದ ಊರಾಗ ಕಾಲರ್ ಎತ್ತಿ ತಿರುಗಾಡೋ ಹಂಗ ಮಾಡೋ ಜವಾಬ್ದಾರಿ ನಿಮ್ಮ ಮ್ಯಾಲ ಐತಿ.
🪷 ನಿಮ್ಮ ಪ್ರಾಮಾಣಿಕ ಪ್ರಯತ್ನಕ್ಕೆ ತಕ್ಕ ಫಲ ಆ ಭಗವಂತ ಕೊಟ್ಟೇ ಕೊಡ್ತಾನ. ಯಾವ್ದಕ್ಕೂ ಅಂಜಬ್ಯಾಡ್ರಿ, ಧೈರ್ಯದಿಂದ ಹೋಗಿ ಗೆದ್ದು ಬರ್ರಿ.
ಶುಭವಾಗಲಿ, ಆಲ್ ದಿ ಬೆಸ್ಟ್..!🚨 | 223 |
| 13 | ಡಿಗ್ರಿ ಮುಗಿಸಿ,
'ಸರ್ಕಾರಿ ನೌಕರಿ' ಎನ್ನುವ ಚಕ್ರವ್ಯೂಹಕ್ಕೆ
ಸಿಲುಕುವ ಭಾರತದ ಬಹುಪಾಲು ಯುವಕರು ಶಾಲೆಯಲ್ಲಿ ಪ್ರತಿಭಾವಂತರಾಗಿದ್ದವರೇ.
ಬಡತನ ಮತ್ತು ಮಧ್ಯಮವರ್ಗದ ಹಣಕಾಸಿನ ಕೊರತೆಗಳು, ಅವರಿಗೆ ತೋರುವ ಏಕೈಕ ರಾಜಮಾರ್ಗವೆಂದರೆ,
'ಸರ್ಕಾರಿ ನೌಕರಿ'.
ಆದರೆ, ಪರೀಕ್ಷೆ ಪಾಸಾಗುವೆ, ಎನ್ನುವ ಛಲದಿಂದ ಆರಂಭವಾಗುವ ಅವರ ದಂಡಯಾತ್ರೆ, ಬಹಳ ಬಾರಿ ಅರ್ಧ ದಾರಿಯಲ್ಲೇ ಹಳ್ಳಹಿಡಿಯುತ್ತದೆ.
ಅನಾರೋಗ್ಯವೋ,
ಪ್ರೀತಿ-ಪ್ರೇಮಗಳ ವ್ಯವಸಾಯವೋ,
ಯೌವ್ವನದ ಚಿಗಿತವೋ,
ಕೆಟ್ಟವ್ಯಸನಗಳ ಜಿಗಿತವೋ,
ಅಥವಾ,
ಕುಟುಂಬದಲ್ಲಿ ಘಟಿಸುವ ಅನಾಹುತಗಳೋ,
ಆಕಾಂಕ್ಷಿಯನ್ನ ನಾಲ್ಕುಗೋಡೆಗಳ ಬಂಧಿಯನ್ನಾಗಿಸಿಬಿಡುತ್ತವೆ.
ಇಲ್ಲಿ 4-5 ವರ್ಷ ಕೊಳೆತ ನಂತರ ಫಸಲೆಲ್ಲಿಯದು ಹೇಳಿ?
ಶಾಲೆಯಲ್ಲಿ ಕಾಲೇಜಿನಲ್ಲಿ ಟಾಪರ್ ಆಗಿದ್ದವರು, ಇಲ್ಲಿ ಪಾಪರ್ ಆಗೋದೇಕೆ?
ಏಕೆಂದರೆ ಅಲ್ಲಿ ತಿಂಗಳಿಗೊ, ಅರ್ಧವರ್ಷಕ್ಕೊ ಪರೀಕ್ಷೆಗಳಿದ್ದವು.
ದಿನಂಪ್ರತಿ Homework ಕೊಡಲಾಗುತ್ತಿತ್ತು.
ತಪ್ಪಿದರೆ, ಛಡಿಏಟು,
ಅಥವಾ,
Fail ಆಗುವ ಶಿಕ್ಷೆ ಇರುತ್ತಿತ್ತು.
ಆದರೆ,
ಈ ಸ್ಪರ್ಧಾತ್ಮಕ ಪರೀಕ್ಷೆಯ ಜಾಲದಲ್ಲಿ,
ಯಾವುದೂ ಕಡ್ಡಾಯವಲ್ಲ,
It Depends on you,
Short notes ಮಾಡುವುದು,
PYQ ವಿಶ್ಲೇಷಣೆ ಮಾಡೋದು,
Weekly Test ಬರೆಯೋದು,
ಇದೆಲ್ಲವೂ ನಿಮ್ಮ ಆಯ್ಕೆ.
ಇಲ್ಲಿ ಶಿಕ್ಷಕರು ನಿಮಗೆ ಒತ್ತಾಯ ಮಾಡಲಾಗಲ್ಲ,
ಬೈಯಿಸಿಕೊಳ್ಳುವ ವಯಸ್ಸೂ ನಿಮ್ಮದಲ್ಲ.
ಇನ್ನು ಹೊಡೆಯೋದಂತೂ,
ದೂರದ ಮಾತು.
ಇಂದಿನ ಯುವಕರಿಗೆ ಬೈದು ಬುದ್ಧಿಹೇಳುವವರಿಗಿಂತ, ನಗಿಸಿ, Temporary Dopamine Hit ಮಾಡಿಸುವವರೇ ಬಹುಪಾಲು ಇಷ್ಟವಾಗೋದು.
ಹಾಗಾಗಿ,
Accountability ಯ ಕೊರತೆ...
ನಿಮ್ಮನ್ನು ದಿನದಿಂದ ದಿನಕ್ಕೆ,
ಆಲಸಿ ಮತ್ತು ಹೊಣೆಗೇಡಿಯನ್ನಾಗಿಸುತ್ತದೆ.
ಹಲವು ವರ್ಷಗಳ ನಂತರ ತಿರುಗಿ ನೋಡಿದಾಗ,
ಜೇಬೂ ಖಾಲಿ,
ಆಕಡೆ,
Plan B ಕೂಡ ಇರಲ್ಲ,
ಈ ಕಡೆ ಪರೀಕ್ಷೆಯಲ್ಲಿಯೂ Fail.
ನೀವು, ಪ್ರೀತಿಸಿದ ಹುಡುಗಿಯನ್ನ ಇನ್ಯಾರೋ ಮದುವೆಯಾಗುವ ದೃಶ್ಯ ನಿಮ್ಮ ಕರುಳು ಹಿಂಡುತ್ತದೆ.
ನಿಮ್ಮ ಇಷ್ಟದ ಹುಡುಗನ ಮದುವೆಯಾಗಲು, ನಿಮ್ಮ ಅಪ್ಪ ನಿರಾಕರಿಸೋದು, ನಿಮ್ಮ ಹೃದಯವನ್ನ ಒಡೆದುಬಿಡುತ್ತದೆ.
ಜ್ಞಾನೋದಯ ಆಗುವ ವೇಳೆಗೆ 27-28ರ ಗಂಟೆ ಜೋರಾಗಿ ಬಡಿಯುತ್ತಿರುತ್ತದೆ.
ಇದು ನನ್ನ ಜೀವನದಲ್ಲಿಯೂ ಆದದ್ದೇ.
But, ನಿಮ್ಮ ಜೀವನದಲ್ಲಿ ಇದಾಗಬಾರದು,
ಎನ್ನೋದೆ ನನ್ನ ಉದ್ದೇಶ.
ಇದಕ್ಕೆ ಪರಿಹಾರ ಏನು?
ಸಿಂಪಲ್,
2 ವರ್ಷ ಸಂಪೂರ್ಣವಾಗಿ ಓದೋದು.
ನಂತರ,
ನಿಮ್ಮಿಷ್ಟದ ಕ್ಷೇತ್ರದಲ್ಲಿ,
ಅದೆಷ್ಟೇ ಸಣ್ಣ ಕೆಲಸವಾದರೂ ಸರಿ,
Part time ಕೆಲಸ ಮಾಡಲು ಹೊರಡೋದು.
ಬೇಕಾದರೆ, ಮುಂದೆ ನೀವು ಉದ್ಯೋಗ ನಿಲ್ಲಿಸಿ ಓದಿ ಪರವಾಗಿಲ್ಲ,
ಆದರೆ, ತಪ್ಪದೇ, 2 ವರ್ಷ ಓದಿದ ನಂತರ,
ಒಂದಲ್ಲ ಒಂದು ಕಡೆ ಕನಿಷ್ಠ 6 ತಿಂಗಳು ಕೆಲಸ ಮಾಡಿ.
ಯಾಕೆಂದರೆ,
ಈ ಜಗತ್ತಿನ ಕ್ರೂರತನ,
ಮತ್ತು ಸಮಾಜದ ಮುಖವಾಡ ನಿಮಗೆ,
ಅಲ್ಲಿ ಅರ್ಥವಾಗುತ್ತದೆ.
ತದ ನಂತರ, Job ಬಿಟ್ಟು ಬಂದರೂ,
ಚೆನ್ನಾಗಿ ಓದುತ್ತೀರಿ.
ಆ ಉದ್ಯೋಗ ನಿಮ್ಮಲ್ಲಿದ್ದ ಅಹಂಕಾರವನ್ನ ಮೆಟ್ಟಿ ಪುಡಿಮಾಡಿರುತ್ತದೆ, ನಿಮ್ಮ Attitude ಅನ್ನ ನಿರ್ನಾಮ ಮಾಡಿರುತ್ತದೆ.
Life Will Make you humble.
ಪ್ರೀತಿ ಪ್ರೇಮ ಮತ್ತು ಕೆಟ್ಟ ಹವ್ಯಾಸಗಳಿಂದ ಹೊರಬರಲು ಇರುವ Best ಉಪಾಯ,
ಉದ್ಯೋಗ ಮಾಡೋದು.
ಆದ್ದರಿಂದ,
ಯಾವುದೇ ಕಾರಣಕ್ಕೂ ಕೆಲಸವಿಲ್ಲದೆ ಕೂರಬೇಡಿ.
ಕಂಪ್ಯೂಟರ್ ಕಲಿಯಿರಿ,
Spoken English ಕಲಿಯಿರಿ,
ಮನೆ ಬಿಟ್ಟು ನಗರಗಳಿಗೆ ಹೋಗಿ Interview ಕೊಟ್ಟು ನೋಡಿ...
ಅಥವಾ,
ಸ್ವಂತದ್ದಾಗಿ ಏನಾದರೂ ಮಾಡಿ,
But,
ಯಾವುದೇ ಕಾರಣಕ್ಕೂ,
ಸರ್ಕಾರಿ, ಉದ್ಯೋಗದ ನೆಪ ಹೇಳುತ್ತ,
Idle ಆಗಿ ಕುಳಿತು, ಕಳೆಯಾಗಬೇಡಿ.
ಕಳೆದ 2.5 ವರ್ಷಗಳ ಬೋಧನೆಯ ಅವಧಿಯಲ್ಲಿ ನಾನು ನೋಡಿದ ಆಕಾಂಕ್ಷಿಗಳಲ್ಲಿ ಹೆಚ್ಚು Serous ಆಗಿ ಇದ್ದವರು, ಇರುವವರು,
1. Job ಮಾಡುತ್ತ ಓದುವವರು,
2. Housewife ಗಳು,
3. ಈಗಾಗಲೇ ಉದ್ಯೋಗ ಮಾಡಿ, ಉದ್ಯೋಗ ಬಿಟ್ಟು ಬಂದು ಓದುತ್ತಿರುವವರು.
ಕಾಲೇಜು ಮುಗಿಸಿ ಓದಲು ಬಂದ Maximum ವಿದ್ಯಾರ್ಥಿಗಳು,
Chill ಮಾಡುತ್ತಿರುತ್ತಾರೆ.
I have seen it.
But,
My dear juniors,
Life is Very Very Brutal.
ಜಾಗೃತರಾಗಿ.
ಕಲಿಯದೇ,
ದುಡಿಯದೇ,
ಬೆಳೆಯದೇ
ಹೋದಿರೆಂದರೆ,
ಬಡತನವೆಂಬ ಹೊದಿಕೆ
ನಿಮ್ಮನ್ನ ಮುಸುಕು ಹಾಕಿ ಮಲಗಿಸಿಬಿಡುತ್ತದೆ.
ಉದ್ಯೋಗ ನಿಮ್ಮ Personality ಗೆ Seriousness ತಂದರೆ,
ಹಣ ನಿಮಗೆ Freedom ಕೊಡುತ್ತದೆ.
ಇಷ್ಟೆಲ್ಲ ಉಪದೇಶ ಮಾಡಲುಕಾರಣ,
ನನ್ನ ಉದ್ಯೋಗ.
ಒಬ್ಬ ಆಕಾಂಕ್ಷಿಯಾಗಿದ್ದಾಗ,
ರಾತ್ರಿ 10 ಕ್ಕೆ ಮಲಗಿ, ಬೆಳಿಗ್ಗೆ 8 ಕ್ಕೆ ಏಳುತ್ತ...
ಮತ್ತೆ ಮಧ್ಯಾಹ್ನ 1-2 ಗಂಟೆ ನಿದ್ದೆ ಹೊಡೆಯುತ್ತಿದ್ದ ನಾನು....
ಈಗ ರಾತ್ರಿ 12 ಕ್ಕೆ ಮಲಗಿದರೂ,
ಬೆಳಿಗ್ಗೆ 7 ಕ್ಕೆಂದರೆ, ಎದ್ದುಬಿಡುತ್ತೇನೆ.
ಏಳಲೇ ಬೇಕು, ಎನ್ನುವ ಕೆಲಸದ ಒತ್ತಡ ನನ್ನ Subconscious mind ಗಿದೆ.
ಇನ್ನು, Bank ಕೆಲಸ,
GST ಕೆಲಸ,
ವಿದ್ಯಾರ್ಥಿಗಳ Message ಗಳಿಗೆ Reply,
ಅದು ಇದು ಎನ್ನುತ್ತ ಮಧ್ಯಾಹ್ನ ಮಲಗೋದೆ ಅಪರೂಪ,
ಮಲಗಿದರೂ 20 ನಿಮಿಷಕ್ಕೆ ಅಕ್ಷಿಗಳು,
ವಿಶಾಲವಾಗಿಬಿಡುತ್ತವೆ.
So,
Come on...
ಏಳಿ, ಎದ್ದೇಳಿ,
2 ವರ್ಷ ಚೆನ್ನಾಗಿ ಓದಿ,
ಈ ಕ್ರೂರ ಜಗತ್ತಿನ ಪರಿಚಯ ಮಾಡಿಕೊಳ್ಳಿ.
ಮತ್ತು,
ಇನ್ನೂ ಒಂದು ಹೇಳ್ತೀನಿ...
If you are really Talented,
ನಿಮಗೆ ಸರ್ಕಾರಿ ನೌಕರಿ ಏನೇನೂ ಅಲ್ಲ.
ಇಡಿ ಜಗತ್ತೇ ನಿಮಗಾಗಿ ತೆರೆದಿದೆ.
But,
ಮೊದಲು,
ಮನೆ ಕಟ್ಟಿ ನಂತರ,
ಗುಡಿಸಲು ಕೆಡವಿ.
God bless you.
All the best 💐
-
ಪ್ರವೀಣ ಮ ಮಗದುಮ್ಮ | 221 |
| 14 | 🪷💥 | 223 |
| 15 | ⬆️⬆️ LAST 7 MONTHS CA 2026 (TOP MCQs).pdf | 227 |
| 16 | .🚂🚂 GROUP D CURRENT AFFAIRS ANALYSIS.pdf | 238 |
| 17 | ಸಕ್ಕರೆ ಇತಿಹಾಸ ಮತ್ತು ಭಾರತದ ಪಾತ್ರ
ಮೊದಲ ಉತ್ಪಾದನೆ: ಜಗತ್ತಿನಲ್ಲೇ ಪ್ರಪ್ರಥಮವಾಗಿ ಸಕ್ಕರೆಯನ್ನು ತಯಾರಿಸಿದ್ದು ಭಾರತದಲ್ಲಿ. ಸರಿಸುಮಾರು ಕ್ರಿ.ಪೂ. 500-350 ರ ಅವಧಿಯಲ್ಲಿ ಭಾರತದಲ್ಲಿ ಕಬ್ಬಿನ ರಸದಿಂದ ಹರಳು ರೂಪದ ಸಕ್ಕರೆ ತಯಾರಿಸುವ ವಿಧಾನ ಅಸ್ತಿತ್ವಕ್ಕೆ ಬಂದಿತು.
ಭಾಷಾ ಮೂಲ: ಸಕ್ಕರೆಗೆ ಸಂಬಂಧಿಸಿದ ಪದಗಳು ಸಂಸ್ಕೃತ ಭಾಷೆಯಿಂದ ಹುಟ್ಟಿಕೊಂಡಿವೆ. ಉದಾಹರಣೆಗೆ: 'ಶರ್ಕರಾ' (Sarkara) ಎಂಬ ಸಂಸ್ಕೃತ ಪದದಿಂದಲೇ ಇಂಗ್ಲಿಷ್‌ನ 'Sugar', ಅರೇಬಿಕ್‌ನ 'ಸುಕ್ಕರ್' ಎಂಬ ಪದಗಳು ಬಂದಿವೆ. ಖಂಡ ಸಕ್ಕರೆಗೆ ಬಳಸುವ 'ಖಂಡ' ಎಂಬ ಪದದಿಂದ ಇಂಗ್ಲಿಷ್‌ನ 'Candy' ಪದ ಬಂದಿದೆ
ಜಾಗತಿಕ ಪ್ರಸರಣ: ಭಾರತದಿಂದ ಈ ಸಕ್ಕರೆ ತಂತ್ರಜ್ಞಾನವು ಪರ್ಷಿಯಾ, ಚೀನಾ, ಅರಬ್ ದೇಶಗಳು ಮತ್ತು ಯುರೋಪ್‌ಗೆ ಹರಡಿತು. ಆರಂಭದಲ್ಲಿ ಚೀನಾವನ್ನು ಕಬ್ಬಿನ ತಂತ್ರಜ್ಞಾನದ ಪ್ರಮುಖ ಕೇಂದ್ರವೆಂದು ಕರೆಯಲಾಗುತ್ತಿತ್ತು.
1.ಕೃಷಿ ಆಧಾರಿತ ಉದ್ಯಮ: ಭಾರತದಲ್ಲಿ ಹತ್ತಿ (Cotton) ಉದ್ಯಮದ ನಂತರ ಸಕ್ಕರೆ ಉದ್ಯಮವು ಎರಡನೇ ಅತಿ ದೊಡ್ಡ ಕೃಷಿ ಆಧಾರಿತ ಉದ್ಯಮವಾಗಿದೆ.
2.ಜಗತ್ತಿನಲ್ಲಿ ಕಬ್ಬು ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬ್ರೆಜಿಲ್ ಪ್ರಥಮ ಸ್ಥಾನದಲ್ಲಿದ್ದರೆ, ಭಾರತ ದ್ವಿತೀಯ ಸ್ಥಾನದಲ್ಲಿದೆ (ಕೆಲವು ವರ್ಷಗಳಲ್ಲಿ ಭಾರತವು ಜಾಗತಿಕವಾಗಿ ಅತಿ ಹೆಚ್ಚು ಸಕ್ಕರೆ ಉತ್ಪಾದಿಸುವ ದೇಶವಾಗಿಯೂ ಹೊರಹೊಮ್ಮುತ್ತದೆ).
3.ಭಾರತದಲ್ಲಿ ಅತಿ ಹೆಚ್ಚು ಕಬ್ಬು ಮತ್ತು ಸಕ್ಕರೆ ಉತ್ಪಾದಿಸುವ ರಾಜ್ಯ: ಉತ್ತರ ಪ್ರದೇಶ (UP). ಮಹಾರಾಷ್ಟ್ರ 2ನೇ ಸ್ಥಾನದಲ್ಲಿದೆ.
4.ಕರ್ನಾಟಕದ ಸ್ಥಾನ: ಕರ್ನಾಟಕವು ಭಾರತದಲ್ಲೇ ಕಬ್ಬು ಉತ್ಪಾದನೆಯಲ್ಲಿ 3ನೇ ಪ್ರಮುಖ ರಾಜ್ಯವಾಗಿದೆ.
5.ಕರ್ನಾಟಕದ ಮೊದಲ ಸಕ್ಕರೆ ಕಾರ್ಖಾನೆ: ಮೈಸೂರು ಶುಗರ್ ಕಂಪನಿ (MySugar), ಇದು 1933 ರಲ್ಲಿ ಮಂಡ್ಯದಲ್ಲಿ ಸ್ಥಾಪನೆಯಾಯಿತು. ಇದನ್ನು ಸ್ಥಾಪಿಸಿದವರು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್ ಎಂ. ವಿಶ್ವೇಶ್ವರಯ್ಯನವರು.
6.ಮಂಡ್ಯ ಜಿಲ್ಲೆಯನ್ನು "ಸಕ್ಕರೆಯ ನಗರಿ" (Sugar City of Karnataka) ಎಂದು ಕರೆಯಲಾಗುತ್ತದೆ.
7.ಪ್ರಸ್ತುತ ಕರ್ನಾಟಕದಲ್ಲಿ ಬೆಳಗಾವಿ ಜಿಲ್ಲೆಯು ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳನ್ನು ಹೊಂದಿದ್ದು, ಅತಿ ಹೆಚ್ಚು ಕಬ್ಬು ಉತ್ಪಾದಿಸುತ್ತದೆ.
8.ಮೊಲಾಸಸ್ (Molasses):
ಸಕ್ಕರೆ ತಯಾರಿಕೆಯಲ್ಲಿ ಸಿಗುವ ಜಿಡ್ಡು ದ್ರವವಾಗಿದ್ದು, ಇದನ್ನು ಆಲ್ಕೋಹಾಲ್ ಮತ್ತು ಎಥೆನಾಲ್ (Ethanol) ತಯಾರಿಕೆಗೆ ಬಳಸಲಾಗುತ್ತದೆ.
9.ಬಗಾಸ್ (Bagasse):
ಕಬ್ಬಿನ ಜರಡಿ/ಸಿಪ್ಪೆಯಾಗಿದ್ದು, ಇದನ್ನು ಕಾಗದ ತಯಾರಿಕೆ ಹಾಗೂ ವಿದ್ಯುತ್ ಉತ್ಪಾದನೆಗೆ (Cogen) ಇಂಧನವಾಗಿ ಬಳಸಲಾಗುತ್ತದೆ. | 242 |
| 18 | 🌳ರಾಷ್ಟ್ರೀಯ ಶಿಕ್ಷಕರ ದಿನಾಚರಣೆ
ದಿನಾಂಕ: ಪ್ರತಿ ವರ್ಷ ಸೆಪ್ಟೆಂಬರ್ 5 ರಂದು ಆಚರಿಸಲಾಗುತ್ತದೆ.
ಯಾರ ಸವಿನೆನಪಿಗಾಗಿ?: ಭಾರತದ ಮಾಜಿ ರಾಷ್ಟ್ರಪತಿ, ತತ್ವಜ್ಞಾನಿ ಹಾಗೂ ಶ್ರೇಷ್ಠ ಶಿಕ್ಷಣತಜ್ಞ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನದ ನೆನಪಿಗಾಗಿ (ಜನನ: 05 ಸೆಪ್ಟೆಂಬರ್ 1888, ತಿರುತ್ತಣಿ).
ಡಾ. ಎಸ್. ರಾಧಾಕೃಷ್ಣನ್ ಅವರ ಹುದ್ದೆಗಳು:
° ಭಾರತದ ಮೊದಲ ಉಪರಾಷ್ಟ್ರಪತಿ
(1952 – 1962).
° ಭಾರತದ ಎರಡನೇ ರಾಷ್ಟ್ರಪತಿ
(1962 – 1967).
ಉನ್ನತ ನಾಗರಿಕ ಪ್ರಶಸ್ತಿ:
ಡಾ. ಎಸ್. ರಾಧಾಕೃಷ್ಣನ್ ಅವರಿಗೆ 1954 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ 'ಭಾರತ ರತ್ನ' ನೀಡಿ ಗೌರವಿಸಲಾಯಿತು (ಅದೇ ವರ್ಷ ಸಿ. ರಾಜಗೋಪಾಲಚಾರಿ ಮತ್ತು ಸಿ. ವಿ. ರಾಮನ್ ಅವರಿಗೂ ನೀಡಲಾಗಿತ್ತು).
🌳ವಿಶ್ವ ಶಿಕ್ಷಕರ ದಿನಾಚರಣೆ
(World Teachers' Day):
ದಿನಾಂಕ: ಪ್ರತಿ ವರ್ಷ ಅಕ್ಟೋಬರ್ 5 ರಂದು UNESCO ಮತ್ತು UN ಸಂಸ್ಥೆಗಳಿಂದ ಆಚರಿಸಲ್ಪಡುತ್ತದೆ.
(ಗಮನಿಸಿ: ರಾಷ್ಟ್ರೀಯ ಶಿಕ್ಷಕರ ದಿನಾಚರಣೆ - ಸೆಪ್ಟೆಂಬರ್ 5, ವಿಶ್ವ ಶಿಕ್ಷಕರ ದಿನಾಚರಣೆ - ಅಕ್ಟೋಬರ್ 5).
🌳ಸಂವಿಧಾನಾತ್ಮಕ ನಿಯಮಗಳು
44ನೇ ತಿದ್ದುಪಡಿ / 86ನೇ ಸಂವಿಧಾನ ತಿದ್ದುಪಡಿ (2002): 86ನೇ ತಿದ್ದುಪಡಿಯ ಮೂಲಕ 6 ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ವಿಧಿ 21A ರ ಅಡಿಯಲ್ಲಿ ಮೂಲಭೂತ ಹಕ್ಕನ್ನಾಗಿ ಮಾಡಲಾಯಿತು. | 187 |
| 19 | ❗️ಜಿಎಸ್ಎಲ್‌ವಿ-ಎಫ್17
(GSLV-F17) ರಾಕೆಟ್ ಉಡಾವಣೆ.
ಯಾವ ರಾಕೆಟ್?:
GSLV-F17 (Geosynchronous Satellite Launch Vehicle). ಇದು ಜಿಎಸ್ಎಲ್‌ವಿ ರಾಕೆಟ್ ಸರಣಿಯ 19ನೇ ಉಡಾವಣೆಯಾಗಿದೆ.
ರಾಕೆಟ್ ತಂತ್ರಜ್ಞಾನ: ಜಿಎಸ್ಎಲ್‌ವಿ ರಾಕೆಟ್ ಘನ (Solid), ದ್ರವ (Liquid) ಮತ್ತು ಕ್ರಯೋಜನಿಕ್ (Cryogenic) ಎಂಬ 3 ಹಂತದ ಇಂಜಿನ್‌ಗಳನ್ನು ಒಳಗೊಂಡಿರುವ ವಿಶಿಷ್ಟ ಹಾಗೂ ಅತ್ಯಂತ ಶಕ್ತಿಶಾಲಿ ರಾಕೆಟ್ ಆಗಿದೆ.
ಭಾರತದ ಮೊದಲ ಮೈಲಿಗಲ್ಲು: ಜಿಯೋಸಿಂಕ್ರೋನಸ್ ಅಕ್ಷದಲ್ಲಿ ಸೇರ್ಪಡೆಗೊಳ್ಳಲಿರುವ ಭಾರತದ ಪ್ರಥಮ ಅತ್ಯಾಧುನಿಕ ಇಮೇಜಿಂಗ್ ಉಪಗ್ರಹ (First Advanced Imaging Satellite) ಇದಾಗಿದೆ.
ಉಪಗ್ರಹಗಳ ಭೂ ನಿಯಂತ್ರಣ ಕೇಂದ್ರ (MCF): ಹಾಸನ (ಕರ್ನಾಟಕ) ಮತ್ತು ಭೋಪಾಲ್ (ಮಧ್ಯಪ್ರದೇಶ | 171 |
| 20 | ❗️ಭಾರತದ ಜಿಡಿಪಿ (GDP) ಮತ್ತು ಬೇಸ್ ಇಯರ್
ಮೂಲ ವರ್ಷದ ಬದಲಾವಣೆ (Change of Base Year): ಪ್ರಸ್ತುತ ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ 2011-12 ಅನ್ನು ಮೂಲ ವರ್ಷವಾಗಿ (Base Year) ಬಳಸಲಾಗುತ್ತಿದೆ. ಆದರೆ, 2026-27ರ ಮೊದಲ ತ್ರೈಮಾಸಿಕದಿಂದ ಜಿಡಿಪಿ ಲೆಕ್ಕಾಚಾರದ ಹೊಸ ಮೂಲ ವರ್ಷವನ್ನು 2022-23 ಕ್ಕೆ ಬದಲಾಯಿಸಲು ಸರ್ಕಾರ ನಿರ್ಧರಿಸಿದೆ.
ಹೊಸ ಸೂಚ್ಯಂಕಗಳ ಸೇರ್ಪಡೆ: ಮೂಲ ವರ್ಷದ ಪರಿಷ್ಕರಣೆಯೊಂದಿಗೆ ಕೈಗಾರಿಕಾ ಉತ್ಪಾದನಾ ಸೂಚ್ಯಂಕ (IIP) ಮತ್ತು ಸಗಟು ಬೆಲೆ ಸೂಚ್ಯಂಕ (WPI) ಗಳಿಗೂ ಹೊಸ ದತ್ತಾಂಶ ಮತ್ತು ಹೊಸ ಸರಕುಗಳನ್ನು ಸೇರಿಸಲಾಗುತ್ತದೆ. ಅಲ್ಲದೆ ಉತ್ಪಾದಕರ ಬೆಲೆ ಸೂಚ್ಯಂಕ (PPI) ಯನ್ನು ಹೊಸದಾಗಿ ಪರಿಚಯಿಸುವ ಪ್ರಕ್ರಿಯೆ ನಡೆಯುತ್ತಿದೆ.
ಜಿಡಿಪಿ (GDP) ಎಂದರೇನು?:
ಒಂದು ನಿರ್ದಿಷ್ಟ ಹಣಕಾಸು ವರ್ಷದಲ್ಲಿ ದೇಶದ ಭೌಗೋಳಿಕ ಗಡಿಯೊಳಗೆ ಉತ್ಪಾದನೆಯಾಗುವ ಎಲ್ಲಾ ಅಂತಿಮ ಸರಕು ಮತ್ತು ಸೇವೆಗಳ ಒಟ್ಟು ಹಣದ ಮೌಲ್ಯವೇ ಒಟ್ಟು ದೇಶೀಯ ಉತ್ಪನ್ನ (Gross Domestic Product).
ಜಿಡಿಪಿ ಲೆಕ್ಕ ಹಾಕುವ ಸಂಸ್ಥೆ:
ಭಾರತದಲ್ಲಿ ಜಿಡಿಪಿಯನ್ನು ಕೇಂದ್ರ ಸಾಂಖ್ಯಿಕ ಕಚೇರಿ — NSO (National Statistical Office) ಲೆಕ್ಕಾಚಾರ ಮಾಡುತ್ತದೆ. ಇದು ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ (MoSPI) ಅಡಿಯಲ್ಲಿ ಬರುತ್ತದೆ. | 171 |
