upsc_and_kpsc
Open in Telegram
Well come to our upsc_and_kpsc chanel, ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಹೆಚ್ಚು ಮತ್ತು ಉಪಯುಕ್ತ ಮಾಹಿತಿಗಾಗಿ upsc_and_kpsc ಸಹಕಾರಿಯಾಗುತ್ತೆ.
Show moreThe country is not specifiedThe category is not specified
1 240
Subscribers
No data24 hours
No data7 days
No data30 days
Posts Archive
1 240
Repost from upsc_and_kpsc
👉ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಪ್ರಮುಖ ಕ್ರಾಂತಿಗಳು 👈
🎯ಬೆಳ್ಳಿನಾರು (ರಜತನಾರು) ಕ್ರಾಂತಿ
👉ಬಿಳಿಯ ಚಿನ್ನ ಎಂದು ಕರೆಯುವ ಹತ್ತಿಯ ಉತ್ಪಾದನೆ ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
🎯 ರಜತ ಕ್ರಾಂತಿ
👉 ಮೊಟ್ಟೆ ಉತ್ಪಾದನೆ ಕೋಳಿ ಸಾಕಾಣಿಕೆಯಲ್ಲಿ ಅಭಿವೃದ್ಧಿ ತರಲು ಜಾರಿಗೆ ತಂದ ಈ ಕ್ರಾಂತಿಯನ್ನು ಬೆಳ್ಳಿ ಕ್ರಾಂತಿ ಎಂತಲೂ ಕರೆಯುವರು.
🎯 ಬೂದು ಕ್ರಾಂತಿ
👉ನೈಟ್ರೋಜನ್ (ಸಾರಜನಕ) ಆಧಾರಿತ ರಸಗೊಬ್ಬರಗಳ ಬಳಕೆಯನ್ನು ಹೆಚ್ಚಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
🎯 ಸ್ವರ್ಣ ಕ್ರಾಂತಿ
👉ಹಣ್ಣುಗಳು, ತೋಟಗಾರಿಕಾ ಬೆಳೆಗಳು, ಜೇನಿನ ಉತ್ಪಾದನೆಯಲ್ಲಿ ಪ್ರಗತಿಯನ್ನು ಸಾಧಿಸಲು ಈ ಕ್ರಾಂತಿಯನ್ನು ಜಾರಿಗೆ ತರಲಾಯಿತು.
🎯ಕಂದು ಕ್ರಾಂತಿ
👉ಕಂದು ಕ್ರಾಂತಿಯು ಚರ್ಮದ ಉತ್ಪಾದನೆಗಳು ಮತ್ತು ಕೋಕೋ (ಕಾಫಿ) ಬೆಳೆಗೆ ಸಂಬಂಧಿಸಿದಾಗಿದೆ.
🎯 ಗುಲಾಬಿ ಕ್ರಾಂತಿ
👉ಗುಲಾಬಿ ಕ್ರಾಂತಿಯು ಔಷಧಿ ಸಸ್ಯಗಳು, ಈರುಳ್ಳಿ ಮತ್ತು ಸಮುದ್ರದ ಚಿಕ್ಕ ಜೀವಿಗಳಾದ ಸೀಗಡಿ, ಏಡಿಗಳ ಉತ್ಪಾದನೆಗೆ ಸಂಬಂಧಿಸಿದುದಾಗಿದೆ.
🎯ವೃತ್ತ ಕ್ರಾಂತಿ
👉ಬಟಾಟೆ (ಆಲೂಗಡ್ಡೆ) ಬೆಳೆಗೆ ಸಂಬಂಧಿಸಿದ ಇದನ್ನು ದುಂಡು ಕ್ರಾಂತಿ ಎಂತಲೂ ಕರೆಯುವರು.
🎯 ಕೆಂಪು ಕ್ರಾಂತಿ
👉ಕೆಂಪು ಕ್ರಾಂತಿಯು ಮಾಂಸ ಮತ್ತು ಟೊಮ್ಯಾಟೊಗಳಿಗೆ ಸಂಬಂಧಿಸಿದು. ವಿಶಾಲ್ ತೆವಾರಿಯವರನ್ನು ಕೆಂಪು ಕ್ರಾಂತಿಯ ಪಿತಾಮಹ ಎನ್ನುವರು.
🎯 ಕಪ್ಪು ಕ್ರಾಂತಿ
👉ಪೆಟ್ರೋಲಿಯಂ ಮತ್ತು ಕಲ್ಲಿದ್ದಿಲಿನ ಬಳಕೆಯಲ್ಲಿ ಸುಧಾರಣೆಯನ್ನು ತರಲು ಕಪ್ಪುಕ್ರಾಂತಿಯನ್ನು ತಂದರು.
🎯ಹಳದಿ ಕ್ರಾಂತಿ
👉ಹಳದಿ ಕ್ರಾಂತಿಯು ಎಣ್ಣೆಕಾಳುಗಳಿಗೆ ಸಂಬಂಧಿಸಿದಾಗಿದೆ.
🎯ನೀಲಿ ಕ್ರಾಂತಿ
👉ನೀಲಿ ಕ್ರಾಂತಿಯು ಮೀನು ಹಾಗೂ ಮೀನಿನ ಉತ್ಪನ್ನಗಳಿಗೆ (ಮತ್ಸ್ಯೋದ್ದಮ) ಸಂಬಂಧಿಸಿದಾಗಿದೆ.
🎯ಶ್ವೇತ ಕ್ರಾಂತಿ (ಕ್ಷೀರ ಕ್ರಾಂತಿ)
👉ಶ್ವೇತ ಕ್ರಾಂತಿಯು ಹಾಲಿನ ಉತ್ಪಾದನೆಗೆ ಸಂಬಂಧಿಸುದಾಗಿದೆ. ಈ ಕ್ರಾಂತಿಯನ್ನು ಆಪರೇಷನ್ ಫ್ಲಡ್ ಎಂದು ಸಹ ಕರೆಯುವರು.
1 240
Repost from upsc_and_kpsc
📓ಸಿಬಿಐ ಜಂಟಿ ನಿರ್ದೇಶಕರಾಗಿ ಕರ್ನಾಟಕದ ಐಪಿಎಸ್ ಅಧಿಕಾರಿ ಪ್ರವೀಣ್ ಮಧುಕರ್ ನೇಮಕ
ಕರ್ನಾಟಕ ಕೇಡರ್‌ನ ಹಿರಿಯ ಐಪಿಎಸ್ ಅಧಿಕಾರಿ ಪ್ರವೀಣ್ ಮಧುಕರ್ ಪವಾರ್ ಅವರನ್ನು ಕೇಂದ್ರೀಯ ತನಿಖಾ ದಳದ (ಸಿಬಿಐ) ಜಂಟಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ.
ಐದು ವರ್ಷಗಳ ಕಾಲ ಅವರು ಈ ಹುದ್ದೆಯಲ್ಲಿ ಇರಲಿದ್ದಾರೆ ಎಂದು ಸಿಬ್ಬಂದಿ ಸಚಿವಾಲಯದ ಆದೇಶದಲ್ಲಿ ತಿಳಿಸಲಾಗಿದೆ.
ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕರಾಗಿದ್ದ ಪ್ರವೀಣ್ ಸೂದ್ ಅವರು ಈ ವರ್ಷದ ಮೇ ತಿಂಗಳಿನಲ್ಲಿ ಸಿಬಿಐ ನಿರ್ದೇಶಕರಾಗಿ ನೇಮಕವಾಗಿದ್ದರು.
1 240
Repost from upsc_and_kpsc
🛟 2023 ನೇ ಸಾಲಿನ 37 ನೇ ರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯವನ್ನು ವಹಿಸಿಕೊಂಡ ರಾಜ್ಯ - ಗೋವಾ...
Logo/ Mascot - Moga..
✍ 36 th - ಗುಜರಾತ್
✍ 38 th - ಉತ್ತರಾಖಂಡ್..
🚔ನಿಮಗಿದು ತಿಳಿದಿರಲಿ.🚔
✍ LAC - Line of Actual Control = ಭಾರತ ಮತ್ತು ಚೀನಾ..
✍ LOC - Line of Control = ಭಾರತ ಮತ್ತು ಪಾಕಿಸ್ತಾನ..
1 240
ನಂದಿನಿ ದಾಸ್ ಗೆ " ಬ್ರಿಟಿಷ್ ಅಕಾಡೆಮಿ ಬುಕ್ " ಪ್ರಶಸ್ತಿ....
[ನಂದಿನಿ ದಾಸ್ ಅವರ 'ಕೋರ್ಟಿಂಗ್ ಇಂಡಿಯಾ' ಜಾಗತಿಕ ಸಾಂಸ್ಕೃತಿಕ ತಿಳುವಳಿಕೆಗಾಗಿ ಬ್ರಿಟಿಷ್ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಗೆದ್ದಿದೆ]...
ಭಾರತ ಸಂಜಾತ ಲೇಖಕಿ ನಂದಿನಿ ದಾಸ್ ಅವರು ಪ್ರಸಕ್ತ ಸಾಲಿನ ಪ್ರತಿಷ್ಠಿತ "ಬ್ರಿಟಿಷ್ ಅಕಾಡೆಮಿ ಬುಕ್ ಫಾರ್ ಗ್ಲೋಬಲ್ ಕಲ್ಚರಲ್ ಅಂಡರ್ ಸ್ಟ್ಯಾಂಡಿಂಗ್" ಪ್ರಶಸ್ತಿಗೆ ಬಾಜನರಾಗಿದ್ದಾರೆ...
"ಕೊರ್ಟಿಂಗ್ ಇಂಡಿಯಾ : ಇಂಗ್ಲೆಂಡ್, ಮೊಘಲ್ ಇಂಡಿಯಾ ಆಂಡ್ ದಿ ಒರಿಜಿನ್ಸ್ ಆಫ್ ಎಂಪೈರ್ " ಎಂಬ ಅವರ ಕೃತಿಗೆ ಈ ಪ್ರಶಸ್ತಿ ಲಭಿಸಿದೆ.
ಈ ಪ್ರಶಸ್ತಿಯು ಒಟ್ಟು 25 ಲಕ್ಷ ನಗದು ಒಳಗೊಂಡಿದೆ..
49 ವರ್ಷದ ನಂದಿನಿ ದಾಸ ಅವರು ಆಕ್ಸ್ಫರ್ಡ್ ವಿಶ್ವವಿದ್ಯಾಲಯದಲ್ಲಿ ಇಂಗ್ಲಿಷ್ ಪ್ರಾಧ್ಯಾಪಕಿಯಾಗಿದ್ದಾರೆ...
1 240
ಅಕ್ಟೋಬರ್ 29 ರಂದು ನಡೆದ ಕೆ.ಇ.ಎ ಪರೀಕ್ಷೆಯಲ್ಲಿ ನಾವು ತಯಾರಿಸಿದ ಪ್ರಚಲಿತ ಘಟನೆಗಳ ನೋಟ್ಸ್ ಇಂದ ಬಂದ ಪ್ರಶ್ನೋತ್ತರಗಳು
7 ರಿಂದ 8 ಪ್ರಶ್ನೆಗಳು ನೇರವಾಗಿ ಬಂದಿವೆ
