en
Feedback
Target PDO

Target PDO

Open in Telegram

ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.✍

Show more
1 944
Subscribers
No data24 hours
-87 days
-3030 days
Posts Archive
Tips For ನೆಮ್ಮದಿ! ★ ಮುಖದಲ್ಲೊಂದು ನಗು ಇರ್ಲಿ. ★ ಸಣ್ಣ ಖುಷಿಯನ್ನು ಆನಂದಿಸಿ. ★ ಇನ್ನೊಬ್ಬರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ. ★ ನಿಮ್ಮನ್ನ Ignore ಮಾಡಿದವರನ್ನ ನೀವು ignore ಮಾಡಿ. ★ ವಾದ ಮಾಡುವವರ ಮುಂದೆ ಸುಮ್ಮನಿರಿ. ★ ರಿಪ್ಲೆ ಮಾಡದೆ ಇರುವವರ Last seenನನ್ನು ಅವಾಗವಾಗ Check ಮಾಡೋದನ್ನ ಬಿಟ್ಬಿಡಿ. ★ ಮುಂದೆ ಆಗುವುದರ ಬಗ್ಗೆ ಈಗಲೇ ಯೋಚನೆ ಮಾಡಬೇಡಿ. ★ ಯಾರಿಂದನೂ ಏನು ಬಯಸಬೇಡಿ. ★ ಹೋಗೋರು ಹೋಗ್ತಾರೆ, ಇರೋರು ಇರ್ತಾರೆ. Don't Care. ★ ಇತರರೊಂದಿಗೆ ನಿಮ್ಮನ್ನು ಹೋಲಿಸಿಕೊಳ್ಳಬೇಡಿ. ★ ಹೋಪ್ ಇಳ್ಕೊಳ್ಳಿ, ಆದರೆ ಆತುರ ಬೇಡ. ★ ತೋರಿಕೆಗಾಗಿ ಆಡಂಬರ ಮಾಡಬೇಡಿ. ★ ಎಲ್ಲರ ಜೊತೆ ನಗ್ತಾ ಮಾತಾಡಿ. ★ ಪ್ರತಿ ಕ್ಷಣವೂ ಕುತೂಹಲದಿಂದಿರಿ.

*◾ ವಿಷಯ : ಕನ್ನಡ ◾ *350 ವಿರುದ್ಧಾರ್ಥಕ ಪದಗಳ ಸಂಗ್ರಹ* ಉಚಿತ × ಅನುಚಿತ ತೆಂಕಣ × ಬಡಗಣ ಲಕ್ಷಣ × ಅವಲಕ್ಷಣ ಮೈಮರೆ × ಎಚ್ಚರ ಏಕ × ಅನೇಕ ಜನ × ನಿರ್ಜನ ಗಮ್ಯ × ಅಗಮ ಪ್ರಧಾನ × ಗೌಣ ವಾಸನೆ × ದುರ್ವಾಸನೆ ಶಕುನ × ಅಪಶಕುನ ಪರಾಕ್ರಮಿ × ಹೇಡಿ ಆಸೆ × ನಿರಾಸೆ ಉತ್ಸಾಹ × ನಿರುತ್ಸಾಹ ಆರೋಗ್ಯ × ಅನಾರೋಗ್ಯ ಲಾಭ × ನಷ್ಟ ಆಯಾಸ × ಅನಾಯಾಸ ಸಹಜ × ಅಸಹಜ ಹಿತ × ಅಹಿತ ಬಹಳ/ಹೆಚ್ಚು × ಕಡಿಮೆ ಮೃದು × ಒರಟು ಉಪಯೋಗ × ನಿರುಪಯೋಗ ಸ್ವಾರ್ಥ × ನಿಸ್ವಾರ್ಥ ಒಣ × ಹಸಿ ಸದುಪಯೋಗ × ದುರುಪಯೋಗ ಸಾಧಾರಣ × ಅಸಾಧಾರಣ ಅವಶ್ಯಕ × ಅನಾವಶ್ಯಕ ಶುಚಿ × ಕೊಳಕು ಲಕ್ಷ್ಯ × ಅಲಕ್ಷ್ಯ ಕೀರ್ತಿ × ಅಪಕೀರ್ತಿ ನಂಬಿಕೆ × ಅಪನಂಬಿಕೆ ಸಮತೆ × ಅಸಮತೆ ಜಯ × ಅಪಜಯ ಸತ್ಯ × ಅಸತ್ಯ ವಿರೋಧ × ಅವಿರೋಧ ಜನನ × ಮರಣ ಆದರ × ಅನಾದರ ಗೌರವ × ಅಗೌರವ ಪೂರ್ಣ × ಅಪೂರ್ಣ ಬಡವ × ಬಲ್ಲಿದ/ ಶ್ರೀಮಂತ ಸ್ವಿಕರಿಸು × ನಿರಾಕರಿಸು ಆರಂಭ × ಅಂತ್ಯ ಸುದೈವಿ × ದುರ್ಧೈವಿ ಕೃತಜ್ಞ × ಕೃತಘ್ನ ಊರ್ಜಿತ × ಅನೂರ್ಜಿತ ಸ್ವಾವಲಂಬನೆ × ಪರಾವಲಂಬನೆ ಶ್ರೇಷ್ಟ × ಕನಿಷ್ಠ ಆಧುನಿಕ × ಪ್ರಾಚೀನ ಉತ್ತಮ × ಕಳಪೆ ಅಮೃತ × ವಿಷ ನಗು × ಅಳು ಹಿಗ್ಗು × ಕುಗ್ಗು ಸಾಹುಕಾರ × ಬಡವ ಶಿಷ್ಟ × ದುಷ್ಟ ಉಚ್ಚ × ನೀಚ ಸುಕೃತಿ × ವಿಕೃತಿ ಜಾತಿ × ವಿಜಾತಿ ನೀತಿ × ಅನೀತಿ ವ್ಯವಹಾರ × ಅವ್ಯವಹಾರ ಚೇತನ × ಅಚೇತನ ಸ್ತುತಿ × ನಿಂದೆ ಮಿತ × ಅಮಿತ ಅನುಭವ × ಅನನುಭವ ಸಜ್ಜನ × ದುರ್ಜನ ವಾಸ್ತವ × ಅವಾಸ್ತವ ಅದೃಷ್ಟ × ದುರಾದೃಷ್ಟ ಜ್ಞಾನ × ಅಜ್ಞಾನ ನ್ಯಾಯ × ಅನ್ಯಾಯ ರೋಗ × ನಿರೋಗ ಫಲ × ನಿಷ್ಪಲ ಸಮಂಜಸ × ಅಸಮಂಜಸ ಮಿತ್ರ × ಶತ್ರು ವ್ಯಯ × ಆಯ ಬಾಲ್ಯ × ಮುಪ್ಪು ಕನಸು × ನನಸು ಖಂಡ × ಅಖಂಡ ಮೌಲ್ಯ × ಅಪಮೌಲ್ಯ ಸೌಭಾಗ್ಯ × ದೌರ್ಭಾಗ್ಯ ಇಹಲೋಕ × ಪರಲೋಕ ಭಯಂಕರ × ಅಭಯಂಕರ ದಾಕ್ಷಿಣ್ಯ × ನಿರ್ದಾಕ್ಷಿಣ್ಯ ಸ್ವಸ್ಥ × ಅಸ್ವಸ್ಥ ಆಡಂಬರ × ನಿರಾಡಂಬರ ಸಂಶಯ × ನಿಸ್ಸಂಶಯ ಬೆಳಕು × ಕತ್ತಲೆ ಮೂರ್ಖ × ಜಾಣ ಸಹ್ಯ × ಅಸಹ್ಯ ಮಬ್ಬು × ಚುರುಕು ಸಮರ್ಥ × ಅಸಮರ್ಥ ಪ್ರಾಮಾಣಿಕತೆ × ಅಪ್ರಾಮಾಣಿಕತೆ ಸ್ವದೇಶ × ಪರದೇಶ ಉನ್ನತಿ × ಅವನತಿ ಉತ್ತಮ × ಅಧಮ ಉಗ್ರ × ಶಾಂತ ವ್ಯವಸ್ಥೆ × ಅವ್ಯವಸ್ಥೆ ಒಡೆಯ × ಸೇವಕ ಆತಂಕ × ನಿರಾತಂಕ ಭೀತಿ × ನಿರ್ಭೀತಿ ಪಾಪ × ಪುಣ್ಯ ತೇಲು × ಮುಳುಗು ಭಯ × ನಿರ್ಭಯ/ ಅಭಯ ಸೂರ್ಯೋದಯ × ಸೂರ್ಯಾಸ್ತ ವಿಭಾಜ್ಯ × ಅವಿಭಾಜ್ಯ ಉಪಕಾರ × ಅಪಕಾರ ಪ್ರಬಲ × ದುರ್ಬಲ ಸನ್ಮಾರ್ಗ × ದುರ್ಮಾರ್ಗ ಸಮ × ಅಸಮ ಆರ್ಯ × ಅನಾರ್ಯ ದಯ × ನಿರ್ದಯ ಅಧ್ಯಯನ × ಅನಧ್ಯಯನ ಅಧಿಕೃತ × ಅನಧಿಕೃತ ದ್ವಿತಿಯ × ಅದ್ವಿತಿಯ ಜ್ಞಾನ × ಅಜ್ಞಾನ ಅಂತ × ಅನಂತ ದಕ್ಷ × ಅದಕ್ಷ ಪರಿಚಿತ × ಅಪರಿಚಿತ ನಾಗರಿಕ × ಅನಾಗರಿಕ ಆಯುಧ × ನಿರಾಯುಧ ಸ್ವರ × ಅಪಸ್ವರ ಆಯಾಸ × ಅನಾಯಾಸ ಕ್ರಮ × ಅಕ್ರಮ ಆದಾಯ × ವೆಚ್ಚ ಪ್ರಧಾನ × ಗೌಣ ಗತಿ × ದುರ್ಗತಿ ನಡತೆ × ದುರ್ನಡತೆ ಜೇಷ್ಠ × ಕನಿಷ್ಠ ದಮ್ಯ × ಅದಮ್ಯ ಸುಪ್ರಸಿದ್ಧ × ಕುಪ್ರಸಿದ್ಧ ದೇವ × ದಾನವ ಅಬಲೆ × ಸಬಲೆ ಆರಂಭ × ಮುಕ್ತಾಯ ಖ್ಯಾತಿ × ಅಪಖ್ಯಾತಿ ಭಾಜ್ಯ × ಅವಿಭಾಜ್ಯ ದ್ರವ × ಘನ ಕೃಪೆ × ಅವಕೃಪೆ ಮಲ × ನಿರ್ಮಲ ಅರಿವು × ಮರೆವು ಕೊಲ್ಲು × ಕಾಯು ಬಿಂಬ × ಪ್ರತಿಬಿಂಬ ಗದ್ಯ × ಪದ್ಯ ವಾಚ್ಯ × ಅವಾಚ್ಯ ಅಂಕುಶ × ನಿರಂಕುಶ ಅಕ್ಷಯ x ಕ್ಷಯ ಅದೃಷ್ಟ x ದುರಾದೃಷ್ಟ ಅನುಭವ x ಅನನುಭವ ಅನಾಥ x ನಾಥ ಅಪೇಕ್ಷೆ x ಅನಪೇಕ್ಷೆ ಅಭಿಮಾನ x ನಿರಭಿಮಾನ ಅಭ್ಯಾಸ x ದುರಭ್ಯಾಸ (ಕೆಟ್ಟಅಭ್ಯಾಸ ಅರ್ಥದಲ್ಲಿ), ನಿರಭ್ಯಾಸ ( ಯಾವ ಅಭ್ಯಾಸ ಇಲ್ಲ ಎಂಬ ಅರ್ಥದಲ್ಲಿ) ಅಮೃತ x ವಿಷ ಅಮೂಲ್ಯ x ನಿಕೃಷ್ಟ (ಅನಮೂಲ್ಯ) ಅರ್ಥ x ಅನರ್ಥ ಅವಶ್ಯಕ x ಅನಾವಶ್ಯಕ ಅಸೂಯೆ x ಅನಸೂಯೆ ಆಚಾರ x ಅನಾಚರ ಆಡಂಬರ x ನಿರಾಡಂಬರ ಆತಂಕ x ನಿರಾತಂಕ ಆದರ x ಅನಾದರ ಆಧುನಿಕ x ಪ್ರಾಚೀನ ಆಯಾಸ x ಅನಾಯಾಸ ಆರಂಭ x ಅಂತ್ಯ ಆರೋಗ್ಯ x ಅನಾರೋಗ್ಯ ಆಸೆ x ನಿರಾಸೆ ಆಹಾರ x ನಿರಾಹಾರ ಇಂಚರ x ಕರ್ಕಶ ಇಂದು x ನಾಳೆ (ನಿನ್ನೆ) ಇಹಲೋಕ x ಪರಲೋಕ ಉಗ್ರ x ಶಾಂತ ಉಚ್ಚ x ನೀಚ ಉತ್ತಮ x ಕಳಪೆ (ಅಧಮ) ಉತ್ಸಾಹ x ನಿರುತ್ಸಾಹ ಉದಾರ x ಅನುದಾರ ಉನ್ನತ x ಅವನತ ಉನ್ನತಿ x ಅವನತಿ ಉಪಕಾರ x ಅಪಕಾರ ಉಪಯೋಗ x ನಿರುಪಯೋಗ ಉಪಾಯ x ನಿರುಪಾಯ ಉಪಾಹಾರ x ಪ್ರಧಾನಾಹಾರ ಊರ್ಜಿತ x ಅನೂರ್ಜಿತ ಒಂಟಿ x ಜೊತೆ (ಗುಂಪು) ಒಡೆಯ x ಸೇವಕ ಒಣ x ಹಸಿ ಕನಸು x ನನಸು ಕನ್ಯೆ x ಸ್ತ್ರೀ ಕಲ್ಮಶ x ನಿಷ್ಕಲ್ಮಶ ಕಾಲ x ಅಕಾಲ ಕೀರ್ತಿ x ಅಪಕೀರ್ತಿ ಕೃತಜ್ಞ x ಕೃತಘ್ನ ಖಂಡ x ಅಖಂಡ ಗೌರವ x ಅಗೌರವ ಚಲ x ನಿಶ್ಚಲ ಚಿಂತೆ x ನಿಶ್ಚಿಂತೆ ಚೇತನ ಅಚೇತನ ಜಂಗಮ x ಸ್ಥಾವರ ಜನ x ನಿರ್ಜನ ಜನನ x ಮರಣ ಜಯ x ಅಪಜಯ ಜಲ x ನಿರ್ಜಲ ಜಾತ x ಅಜಾತ ಜಾತಿ x ವಿಜಾತಿ ಜ್ಞಾನ x ಅಜ್ಞಾನ ಟೊಳ್ಳು x ಗಟ್ಟಿ ತಂತು x ನಿಸ್ತಂತು ತಜ್ಞ x ಅಜ್ಞ ತಲೆ x ಬುಡ ತೇಲು x ಮುಳುಗು ದಾಕ್ಷಿಣ್ಯ x ನಿರ್ದಾಕ್ಷಿಣ್ಯ ಧೈರ್ಯ x ಅಧೈರ್ಯ ನಂಬಿಕೆ x ಅಪನಂಬಿಕೆ ನಗು x ಅಳು ನಾಶ x ಅನಾಶ ನಿಶ್ಚಿತ x ಅನಿಶ್ಚಿತ ನೀತಿ x ಅನೀತಿ ನ್ಯಾಯ x ಅನ್ಯಾಯ ಪ್ರಜ್ಞೆ x ಮೂರ್ಚೆ ಪಾಪ x ಪುಣ್ಯ ಪುರಸ್ಕಾರ x ತಿರಸ್ಕಾರ ಪೂರ್ಣ x ಅಪೂರ್ಣ ಪ್ರಾಮಾಣಿಕತೆ x ಅಪ್ರಾಮಾಣಿಕತೆ ಪ್ರೋತ್ಸಾಹಕ x ನಿರುತ್ಸಾಹಕ ಫಲ x ನಿಷ್ಫಲ ಬಡವ x ಬಲ್ಲಿದ/ ಶ್ರೀಮಂತ ಬತ್ತು x ಜಿನುಗು ಬಹಳ/ಹೆಚ್ಚು x ಕಡಿಮೆ ಬಾಲ್ಯ x ಮುಪ್ಪು ಬೀಳು x ಏಳು ಬೆಳಕು x ಕತ್ತಲೆ ಭಕ್ತ x ಭವಿ ಭಯ x ನಿರ್ಭಯ/ ಅಭಯ ಭಯಂಕರ x ಅಭಯಂಕರ ಭೀತಿ x ನಿರ್ಭೀತಿ ಮಬ್ಬು x ಚುರುಕು ಮಿತ x ಅಮಿತ ಮಿತ್ರ x ಶತ್ರು ಮೂಡು x ಮುಳುಗು (ಮರೆಯಾಗು) ಮೂರ್ಖ x ಜಾಣ ಮೃದು x ಒರಟು ಮೌಲ್ಯ x ಅಪಮೌಲ್ಯ ಯಶಸ್ವಿ x ಅಪಯಶಸ್ವಿ ಯೋಚನೆ x ನಿರ್ಯೋಚನೆ ಯೋಚನೆ x ನಿರ್ಯೋಚನೆ ರೀತಿ x ಅರೀತಿ ರೋಗ x ನಿರೋಗ ಲಕ್ಷ್ಯ x ಅಲಕ್ಷ್ಯ ಲಾಭ x ನಷ್ಟ ವಾಸ್ತವ x ಅವಾಸ್ತವ

🌹 *ಸ್ಪೂರ್ತಿ ಕಿರಣ*🌹 ಯೋಚಿಸದೆ *ಯೋಜನೆ* ಹಾಕಿಕೊಳ್ಳಬಾರದು, ಯೋಜನೆ *ಹಾಕಿಕೊಂಡ* ಮೇಲೆ *ಯೋಚಿಸಬಾರದು.* ಯೋಜನೆಯ *ಯಶಸ್ಸು* ಪ್ರಾರಂಭದ *ಯೋಚನೆಯಲ್ಲೂ* ನಂತರದ *ಅನುಷ್ಠಾನದಲ್ಲೂ* ಅಡಗಿದೆ. *ಒಳ್ಳೆಯ ಸ್ವಭಾವವಿರುವ ವ್ಯಕ್ತಿ ಗಣಿತದಲ್ಲಿನ ಶೂನ್ಯವಿದ್ದಂತೆ,* *ಯಾರ ಜೊತೆ ಇದ್ದರೂ ಅವರ ಬೆಲೆ ಹೆಚ್ಚುತ್ತಲೇ ಇರುತ್ತದೆ.* *ಮೋಸದ ಅರಿವಾದಾಗ ಮೂರ್ಖನಾದೆ ಎಂದು ವ್ಯಥೆ ಪಡಬೇಡ ಸತ್ಯದ ಅರಿವಾಯಿತು ಎಂದು ಸಂತಸ ಪಡು.* *🙏🏼ಶುಭೋದಯ🙏🏼*

🙏 *ತಂದೆ ತಾಯಿ,  ಪಾಲಕರಲ್ಲಿ ನಮ್ರವಾದ ವಿನಂತಿ*👏       ಏನೆಂದರೆ ಈಗಿನ ಕಾಲದಲ್ಲಿ ಕೇವಲ *BIODATA* ಕೆಲಸ ಸಂಬಳ ನೋಡುವುದರ ಜೊತೆಗೆ ಪ್ರತ್ಯಕ್ಷವಾಗಿ ಭೇಟಿ ನೀಡಿ ಅವರ ಮನೆತನ ಸಂಸ್ಕಾರ ಗುಣ ಪರಿಸ್ಥಿತಿ ಯನ್ನು ನೋಡಿ ನಿರ್ಣಯ ತೆಗೆದುಕೊಳ್ಳಿ. ಪ್ರತಿಯೊಬ್ಬರಿಗೆ *ಸರಕಾರಿ* ನೌಕರಿ ಎಲ್ಲಿಂದ ಸಿಗುತ್ತೆ. ಹಾಗೆ ಎಲ್ಲರೂ software engnieer ಆಗಲು ಸಾಧ್ಯವೇ...?    ನಾವು ಸ್ವತಃ ನಮ್ಮ ಮಕ್ಕಳಿಗೆ *ಸರಕಾರಿ ನೌಕರಿ* ಕೊಡಿಸಲು ಸಾಧ್ಯವೇ ? ಇದರ ಬಗ್ಗೆ ಸ್ವಲ್ಪ ವಿಚಾರ ಮಾಡಿ. ಹಳ್ಳಿಗಳಲ್ಲಿ ಹೊಲ ಗದ್ದೆ ಇದ್ದರೆ, ಸಂಸ್ಕಾರವಂತನಾ ಗುಣವಂತನಾ ಪರಿಶೀಲಿಸಿ, ಮನೆಯಲ್ಲಿ ಕುಳಿತು ಕನಸು ಕಾಣಬೇಡಿ.            *ಶೂನ್ಯದಿಂದ ಜಗತ್ತನ್ನು ನಿರ್ಮಾಣ ಮಾಡುವ ಹುಡುಗರು ಇದ್ದಾರೆ,ಅಚ್ಚುಕಟ್ಟಾಗಿ ಮನೆತನ ನಡೆಸಿಕೊಂಡು ಹೋಗುವ ಹೆಣ್ಣುಮಕ್ಕಳು ಇದ್ದಾರೆ* ಮತ್ತು ಶ್ರೀಮಂತಿಕೆಯ ಮದದಿಂದ ಕೆಡುವ ಕೆಡಿಸುವ  *ಮಕ್ಕಳು ದುಶ್ಚಟಗಳ ದಾಸರು  * ಇದ್ದಾರೆ. ಬರಿ *ಡಿಗ್ರೀ* ನೋಡಿ ನಿರ್ಣಯ ತೆಗೆದುಕೊಳ್ಳುತ್ತಿದ್ದರೆ ಇದು ನಿಮ್ಮ *ದೊಡ್ಡ ತಪ್ಪು*. ಇಂಜಿನಿಯರ್ ಆದರು 8 ರಿಂದ 10000/- ವೇತನ ಪಡೆದು ಕೆಲಸ ಮಾಡುವವರಿದ್ದಾರೆ *ಪೊಲೀಸ್ ಭರ್ತಿ*   ನಡೆದಾಗ ನೋಡಿ ತಮಗೆ ಬೇಕಾದ *ಡಿಗ್ರೀ* ಹೊಂದಿದ ಹುಡುಗರು ಸಾಲಲ್ಲಿ ನಿಂತಿರುತ್ತಾರೆ. ಗಾರ್ಮೆಂಟ್ಸ್ ಗಳಲ್ಲಿ, ಖಾಸಗಿ ಕಾರ್ಖಾನೆ,ಆಸ್ಪತ್ರೆಗಳಲ್ಲಿ, ಸೆಕ್ಯೂರಿಟಿ  ಗಾರ್ಡ್,ಸ್ವಚ್ಚತಾ ಸಿಬ್ಬಂದಿ ಗಳಾಗಿ ತಿಂಗಳಿಗೆ 8-10 ಸಾವಿರಗಳಿಗೆ 8-10 ಗಂಟೆ ದುಡಿಯುವ ಪದವೀಧರ ಗಂಡು, ಹೆಣ್ಣುಮಕ್ಕಳು ಬಹುಶಃ ಆ ಸಾಲಿನಲ್ಲಿ  *ತಮ್ಮ ಮಗನೂ, ಮಗಳೂ* ಇರಲು ಬಹುದು ಇದರ ಬಗ್ಗೆ ವಿಚಾರ ಮಾಡಿ ಮತ್ತು *ಪರಿಶೀಲಿಸಿ '*   ನೋಡಿದ ನಂತರ ನಿರ್ಣಯಿಸಿ. ಮತ್ತು  ಬರಿ *ಡಿಗ್ರೀ* ನೇ ಬೇಕು ಎಂದರೆ *ರಾತ್ರಿ 9:00 ನಂತರ ಬಾರ್ ನಲ್ಲಿ ಹೋಗಿ ನೋಡಿ* ಅನೇಕ *ಡಿಗ್ರೀ ಹೋಲ್ಡರ್ಸ್* ಕಾಣಿಸುತ್ತಾರೆ. ಬರೀ ನೌಕರಿ ಸಿಗಲಿಲ್ಲವೆಂದು ದುಃಖ ಮರೆಯುವ ಔಷಧಿಯ ಜೊತೆಗೆ ಪ್ರೀತಿ ಪ್ರೇಮದ ಬಲೆಯಲ್ಲಿ ಬೀಳ್ತಾರೆ ಮಾಡ್ತಾರೆ. *ಇಂದು ಅನೇಕ ಹುಡುಗಿಯರ biodata ನೋಡಿ ನಗಬೇಕು ಅನಿಸುತ್ತದೆ* ಕಾರಣ ಜನ್ಮ ದಿನಾಂಕ ನೋಡಿ, ಬಹಳ ಹುಡುಗಿಯರ ವಯಸ್ಸು 30 ರಿಂದ 35 ವರ್ಷಗಳಾದರೂ ಅವರ *ಇಚ್ಛೆ ,ಭಾವನೆ*  ಗಳ ವಿಚಾರಮಾಡುವದಿಲ್ಲ. ಇವತ್ತಿನ ದಿನಮಾನದಲ್ಲಿ ಮಾನವನ ಆಯಸ್ಸು ಸರಾಸರಿ 60 ವರ್ಷ ವಿದೆ,ಬಾಕಿ25-30 ವರ್ಷದಲ್ಲಿ ಯಾವ ಸುಖ ಪಡೆಯುತ್ತಾರೆ ಹೇಳಿ..?    *ಅತಿಯಾಗಿ ಪ್ರೀತಿ ಮಾಡಿ ಮಗ, ಮಗಳ ಸಂಸಾರ ಜೀವನ ಏಕೆ ಹಾಳು ಮಾಡುತ್ತೀರಿ...* ಸರಕಾರಿ ನೌಕರಿಗೆ ಅಥವಾ ಒಳ್ಳೆಯ ನೌಕರಿಗೆ ಲಕ್ಷ ಲಕ್ಷ ಕೊಟ್ಟು ಸೇರುತ್ತಾರೆ ಮುಂದೆ ಅವರು ಲಂಚ ತೆಗೆದುಕೊಂಡೇ ಕೆಲಸ ಮಾಡುತ್ತಾರೆ. ಮಹಾಭಾರತದಲ್ಲಿ ಯುಧಿಷ್ಠರನು ಒಂದು ಸತ್ಯ ಹೇಳುತ್ತಿದ್ದ *ಸಾವು* ಎಲ್ಲರಿಗೂ ಇದೆ...ಆದರೆ... *ಸಾಯಲು* ಯಾರು ತಯಾರಿಲ್ಲ..!, ಇವತ್ತಿನ ಪರಿಸ್ಥಿತಿ ಬಹಳ ಗಂಭೀರ ವಾಗಿದೆ. *ಅನ್ನ* ಎಲ್ಲರಿಗೂ ಬೇಕು... ಆದರೆ... *ರೈತನ* ಜೊತೆ ಮದುವೆ ಇಷ್ಟವಿಲ್ಲಾ *,ನೀರು* ಎಲ್ಲರಿಗೂ ಬೇಕು.... ಆದರೆ.... *ನೀರನ್ನು* ಉಳಿಸಬೇಕು ಅಂತ ಅನ್ನಿಸುವುದಿಲ್ಲ. *ನೆರಳು* ಎಲ್ಲರಿಗೂ ಬೇಕು.... ಆದರೆ.... *ಗಿಡ ಮರಗಳನ್ನು* ಬೆಳೆಸಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ... *ಸೊಸೆ* ಎಲ್ಲರಿಗೂ ಬೇಕು... ಆದರೆ. *ಮಗಳು* ಹುಟ್ಟಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ.. ಹಾಗೆ *ಈ ರೀತಿಯಾಗಿ ವಿಚಾರ* ಮಾಡ ಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ. *ಈ* ಮೆಸೇಜ್ ಎಲ್ಲರಿಗೂ ಇಷ್ಟ ವಾಗುತ್ತೆ....ಆದರೆ *FORWARD* ಮಾಡಬೇಕು ಅಂತ ಯಾರಿಗೂ ಅನ್ನಿಸುವುದಿಲ್ಲ. 🎤 *ಸರೀ ಅನಿಸಿದರೆ* *ಮುಂದೆ ಕಳುಹಿಸಿರಿ ಮನೆ,ಮನಗಳ ಪರಿವರ್ತನೆ ತನ್ನಿ* *👍ಒಂದು ಸತ್ಯ*👌ದಯವಿಟ್ಟು ಈ ಸತ್ಯವನ್ನು  ಎಲ್ಲರೂ ಅರಿತು ನಮ್ಮ  ಸಂಸಾರ, ಸಂಸ್ಕೃತಿ, ಸಂಸ್ಕಾರವನ್ನು ಉಳಿಸಿ 🙏🙏

photo content

photo content

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಅಳವಡಿಸಿಕೊಳ್ಳುತ್ತಿದೆ. ಕೆರೆಗಳನ್ನು ಕೆರೆಗಳನ್ನಾಗಿಯೇ ಉಳಿಸಿಕೊಂಡು, ಅತ್ಯಾಧುನಿಕ ಸೌಕರ್ಯಗಳಿಂದ ದೂರ ಉಳಿಸಿ, ಕಡಿಮೆ ವೆಚ್ಚದಲ್ಲಿ ಪರಿಸರ ಸ್ನೇಹಿ ತಾಣವನ್ನಾಗಿಸುವ ಯೋಜನೆ ಆರಂಭವಾಗಿದೆ. ರಾಜ್ಯದ 31 ಜಿಲ್ಲೆಗಳಲ್ಲಿ 100 ಕೆರೆಗಳು ‘ಹಸಿರು ಸರೋವರ’ವಾಗುವ ಕಾರ್ಯ ಆಗಸ್ಟ್‌ನಿಂದ ಆರಂಭವಾಗಲಿದೆ. ಕೆರೆಗಳನ್ನು ನೈಸರ್ಗಿಕವಾಗಿಯೇ ಉಳಿಸಿ, ಕಾಂಕ್ರೀಟ್ ಬಳಸದೆ, ಕಡಿಮೆ ವೆಚ್ಚದಲ್ಲಿ ಅಭಿವೃದ್ಧಿಗೊಳಿಸುವುದೇ ‘ಹಸಿರು ಸರೋವರ’ ಅಭಿಯಾನದ ಮೂಲ ಉದ್ದೇಶ. ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಲ್ಲಿ (ಎಂನರೇಗಾ) ಈ ಅಭಿಯಾನವನ್ನು ಅನುಷ್ಠಾನಗೊಳಿಸಲಾಗುತ್ತಿದೆ.

ಕೆಪಿಎಸ್‌ಸಿ ಮೂಲಕ PDO, SDA, ಪಂಚಾಯ್ತಿ ಕಾರ್ಯದರ್ಶಿ ಹುದ್ದೆ ನೇಮಕ: ಆದೇಶ ಬಿಡುಗಡೆ https://vijaykarnataka.com/jobs/govt-jobs/karnataka-government-order-pdo-panchayat-secretory-sda-posts-to-recruitment-by-kpsc/articleshow/101917259.cms

ಕರ್ನಾಟಕ ಪಂಚಾಯತ್ ರಾಜ್ ಅಧಿನಿಯಮ 1993 ಜಾರಿಗೆ ಬಂದಾಗ ನಮ್ಮ ರಾಜ್ಯದಲ್ಲಿ ಇದ್ದ ರಾಜ್ಯಪಾಲರು ಯಾರು
Anonymous voting

ಕರ್ನಾಟಕ ಪಂಚಾಯತ್ ರಾಜ್ ಅದಿನಿಯಮ ಜಾರಿಗೆ ಬಂದ ದಿನಾಂಕ ಯಾವುದು
Anonymous voting

ಕರ್ನಾಟಕ ಪಂಚಾಯತ್ ರಾಜ್ ಅದಿನಿಯಮಕ್ಕೆ ರಾಜ್ಯಪಾಲರ ಅನುಮೋದನೆ ದೊರೆತ ದಿನಾಂಕ ಯಾವುದು
Anonymous voting

ವಾರ್ಡ್ ಸಭೆಗಳನ್ನು ಯಾವ ವರ್ಷ ಜಾರಿಗೆ ತರಲಾಯಿತು
Anonymous voting

73ನೇ ಸಂವಿಧಾನಾತ್ಮಕ ತಿದ್ದುಪಡಿ ಕಾಯ್ದೆಯನ್ನು ದೇಶದಲ್ಲಿ ಮೊದಲ ಬಾರಿಗೆ ಜಾರಿಗೆ ತಂದ ರಾಜ್ಯ ಯಾವುದು
Anonymous voting

ಕರ್ನಾಟಕದಲ್ಲಿ ಜಿಲ್ಲಾ ಪರಿಷತ್ತು ತಾಲೂಕು ಪಂಚಾಯಿತಿ ಸಮಿತಿ ಮಂಡಲ ಪಂಚಾಯತಿ ಮತ್ತು ನ್ಯಾಯ ಪಂಚಾಯಿತಿ ಕಾಯ್ದೆ 1983 ಯಾವ ವರ್ಷದಲ್ಲಿ ರಾಜ್ಯದ್ಯಂತ ಜಾರಿಗೆ ಬಂದಿತು
Anonymous voting