en
Feedback
Target PDO

Target PDO

Open in Telegram

ಈ ಗ್ರೂಪ್ನಲ್ಲಿ PDOಗೆ ಸಂಬಂಧಪಟ್ಟ ವಿಷಯಗಳನ್ನು ಹಂಚಿಕೊಳ್ಳಗುವುದು ಆಸಕ್ತಿಯುಳ್ಳವರು ಈ ಗ್ರೂಪ್ ಗೆ ಸೇರಿಕೊಳ್ಳಿ.✍

Show more
1 944
Subscribers
No data24 hours
-87 days
-3030 days
Posts Archive
ದಾರವಾಡ ತಾಲ್ಲೂಕಿನ ಮುಮ್ಮಿಗಟ್ಟಿ ಬಳಿ ನಿರ್ಮಾಣವಾಗುತ್ತಿರುವ ಕೇಂದ್ರ ಸರ್ಕಾರದ HAL ನ ವಿಮಾನ ತಯಾರಿಕೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ITI,Diploma,puc ಆಗಿರುವವರು ಯಾರಾದರೂ ಇದ್ದರೆ ದಯವಿಟ್ಟು ಅರ್ಜಿ ಹಾಕಿ. ದಯವಿಟ್ಟು ಸ್ಥಳೀಯರು ನಿಮ್ಮ ಅಕ್ಕ ಪಕ್ಕದವರಿಗೆ ತಿಳಿಸಿ. ನಮ್ಮವರು ಪ್ರಯತ್ನ ಪಡದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಬರುತ್ತಾರೆ. ಕನ್ನಡಿಗರಿಗೆ ಮೊದಲ ಆದ್ಯತೆ. ಶಾಖಾ ವ್ಯವಸ್ಥಾಪಕರು : ಬಸವರಾಜ್ ಕೂಡಲೆ ಸಂಪರ್ಕಸಿ : 7353111890 7676261453 9380056005 ನಿಮಗೆ ಗೊತ್ತಿರುವವರಿಗೆ ಎಲ್ಲಾ ಗ್ರೂಪ್ ಗಳಿಗೆ ಕಳುಹಿಸಿ...

ಜೀರೋ ಎಫ್‌ಐಆರ್, ಆನ್‌ಲೈನ್‌ ಮೂಲಕ ದೂರು ಸಲ್ಲಿಕೆಗೆ ಅವಕಾಶ, ಎಸ್‌ಎಂಎಸ್‌ ಮೂಲಕ ಸಮನ್ಸ್ ಕಳುಹಿಸುವುದು ಮತ್ತು ಹೇಯ ಅಪರಾಧ ನಡೆದಾಗ ಆ ಸ್ಥಳದ ವಿಡಿಯೊ ಚಿತ್ರೀಕರಣವನ್ನು ಕಡ್ಡಾಯಗೊಳಿಸಿರುವಂತಹ ನಿಬಂಧನೆಗಳನ್ನು ಒಳಗೊಂಡಿರುವ ಹೊಸ ಕಾನೂನುಗಳು ಆಧುನಿಕ ನ್ಯಾಯ ವ್ಯವಸ್ಥೆಯನ್ನು ಜಾರಿಗೆ ತರಲಿದೆ ಎಂದು ವಿಶ್ಲೇಷಿಸಲಾಗಿದೆ. ಜುಲೈ 1ರ ಹಾಗೂ ಆ ಬಳಿಕದ ಎಲ್ಲ ಎಫ್‌ಐಆರ್‌ಗಳನ್ನು ಸಿಆರ್‌ಪಿಸಿಯ 154ನೇ ಸೆಕ್ಷನ್‌ ಬದಲು, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ 173ನೇ ಸೆಕ್ಷನ್‌ ಅಡಿಯಲ್ಲಿ ದಾಖಲಿಸಿಕೊಳ್ಳಲಾಗುತ್ತದೆ. ಮೂರು ಕಾನೂನುಗಳ ಕೆಲವು ಪ್ರಮುಖ ಅಂಶಗಳು ಅಪರಾಧ ಪ್ರಕರಣಗಳಲ್ಲಿ ವಿಚಾರಣೆ ಪೂರ್ಣಗೊಂಡ 45 ದಿನಗಳ ಒಳಗಾಗಿ ತೀರ್ಪು ಪ್ರಕಟಿಸಬೇಕು. ಮೊದಲ ವಿಚಾರಣೆ ನಡೆದ 60 ದಿನಗಳ ಒಳಗಾಗಿ ಆರೋಪಪಟ್ಟಿ ಸಲ್ಲಿಸಬೇಕು. ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ಆಕೆಯ ಪೋಷಕರು ಅಥವಾ ಸಂಬಂಧಿಕರ ಸಮ್ಮುಖದಲ್ಲಿ ಮಹಿಳಾ ಪೊಲೀಸ್‌ ಅಧಿಕಾರಿಯೇ ದಾಖಲಿಸಿಕೊಳ್ಳಬೇಕು. ವೈದ್ಯಕೀಯ ವರದಿ ಏಳು ದಿನಗಳ ಒಳಗೆ ಸಲ್ಲಿಕೆಯಾಗಬೇಕು. 12 ವರ್ಷಕ್ಕಿಂತ ಕೆಳಗಿನ ಬಾಲಕಿಯರ ಮೇಲಿನ ಅತ್ಯಾಚಾರ ಪ್ರಕರಣಕ್ಕೆ ಕನಿಷ್ಠ 20 ವರ್ಷ ಜೈಲು. ಅಪರಾಧಗಳ ಬಗ್ಗೆ ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮ ಬಳಸಿ ದೂರು ನೀಡಬಹುದು. ವ್ಯಕ್ತಿಯು ಪೊಲೀಸ್‌ ಠಾಣೆಗೆ ಖುದ್ದಾಗಿ ಹೋಗುವ ಅಗತ್ಯವಿಲ್ಲ. ‘ಜೀರೊ ಎಫ್‌ಐಆರ್‌’ ಪರಿಕಲ್ಪನೆಯಡಿ, ವ್ಯಕ್ತಿಯು ಅಪರಾಧ ಕೃತ್ಯದ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಿಸಬಹುದು. ಠಾಣಾ ವ್ಯಾಪ್ತಿಯ ಪ್ರಶ್ನೆ ಉದ್ಭವಿಸದು. ಬಂಧಿತ ವ್ಯಕ್ತಿಯು ತನ್ನ ಸ್ಥಿತಿಯ ಬಗ್ಗೆ ತಾನು ಇಚ್ಛಿಸಿದ ಇನ್ನೊಬ್ಬ ವ್ಯಕ್ತಿಗೆ ಮಾಹಿತಿ ನೀಡಬಹುದು. ಬಂಧಿತ ವ್ಯಕ್ತಿಗೆ ತಕ್ಷಣಕ್ಕೆ ನೆರವು ಪಡೆಯಲು ಇದರಿಂದ ಸಾಧ್ಯವಾಗಲಿದೆ. ಬಂಧನದ ವಿವರಗಳನ್ನು ಪೊಲೀಸ್ ಠಾಣೆಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಎಲ್ಲರಿಗೂ ಕಾಣುವಂತೆ ಪ್ರಕಟಿಸಬೇಕು. ಮಹಿಳೆಯರನ್ನು ಗುರಿಯಾಗಿಸಿಕೊಂಡ ಕೆಲವು ಅಪರಾಧಗಳಲ್ಲಿ, ಸಂತ್ರಸ್ತೆಯ ಹೇಳಿಕೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಮಹಿಳಾ ಮ್ಯಾಜಿಸ್ಟ್ರೇಟ್ ಸಮಕ್ಷಮದಲ್ಲಿ ದಾಖಲು ಮಾಡಿಕೊಳ್ಳಬೇಕು. ಆರೋಪಿ ಹಾಗೂ ಸಂತ್ರಸ್ತರಿಗೆ ಎಫ್‌ಐಆರ್, ಪೊಲೀಸ್ ವರದಿ, ದೋಷಾರೋಪ ಪಟ್ಟಿ, ಹೇಳಿಕೆಗಳು, ತಪ್ಪೊಪ್ಪಿಗೆಗಳು ಮತ್ತು ಇತರ ದಾಖಲೆಗಳನ್ನು 14 ದಿನಗಳೊಳಗೆ ನೀಡಬೇಕು.   ಸಮನ್ಸ್‌ಗಳನ್ನು ಎಲೆಕ್ಟ್ರಾನಿಕ್ ಸಂವಹನ ಮಾಧ್ಯಮದ ಮೂಲಕ ರವಾನಿಸಬಹುದು. ಪ್ರಕರಣಗಳ ವಿಚಾರಣೆಯನ್ನು ನ್ಯಾಯಾಲಯಗಳು ಗರಿಷ್ಠ ಎರಡು ಸಲ ಮಾತ್ರ ಮುಂದೂಡಬಹುದು. ಸಾಕ್ಷಿಗಳ ಸುರಕ್ಷತೆ ಮತ್ತು ಸಹಕಾರವನ್ನು ಖಚಿತಪಡಿಸಿಕೊಳ್ಳಲು ಎಲ್ಲ ರಾಜ್ಯಗಳು ಸಾಕ್ಷಿಗಳ ರಕ್ಷಣೆಗೆ ವಿಶೇಷ ಯೋಜನೆಗಳನ್ನು ಜಾರಿಗೊಳಿಸಬೇಕು. ಗಂಭೀರ ಸ್ವರೂಪದ ಅಪರಾಧ ನಡೆದ ಸಂದರ್ಭ ಗಳಲ್ಲಿ ವಿಧಿವಿಜ್ಞಾನ ತಜ್ಞರು ಸ್ಥಳಕ್ಕೆ ತೆರಳಿ ಸಾಕ್ಷ್ಯ ಸಂಗ್ರಹಿಸುವುದು ಕಡ್ಡಾಯ. ಅಪರಾಧ ನಡೆದ ಸ್ಥಳದಲ್ಲಿ ಸಾಕ್ಷ್ಯ ಸಂಗ್ರಹಿಸುವ ಪ್ರಕ್ರಿಯೆಯನ್ನು ವಿಡಿಯೊ ಚಿತ್ರೀಕರಣ ಮಾಡಬೇಕು. ತಲೆಮರೆಸಿಕೊಂಡ ಆರೋಪಿಗಳ ವಿಚಾರಣೆ ಮತ್ತು ಅವರ ವಿರುದ್ಧ ತೀರ್ಪು ನೀಡಲು ಅವಕಾಶ. ಮಹಿಳೆಯರು, 15 ವರ್ಷಕ್ಕಿಂತ ಕೆಳಗಿನ ಮತ್ತು 60 ವರ್ಷ ಮೇಲ್ಪಟ್ಟವರು, ಅಂಗವಿಕಲರು ಹಾಗೂ ತೀವ್ರ ಅನಾರೋಗ್ಯ ಸಮಸ್ಯೆ ಇರುವವರಿಗೆ ಪೊಲೀಸ್ ಠಾಣೆಗೆ ಹೋಗುವುದರಿಂದ ವಿನಾಯಿತಿ.

✨ಇಂದಿನಿಂದ ನೂತನ ಕಾನೂನು ಜಾರಿ✨ ದೇಶದ ಕ್ರಿಮಿನಲ್‌ ನ್ಯಾಯ ವ್ಯವಸ್ಥೆಯಲ್ಲಿ ವ್ಯಾಪಕ ಬದಲಾವಣೆ ತರುವ ಹೊಸ ಮೂರು ಕ್ರಿಮಿನಲ್‌ ಅಪರಾಧ ಕಾನೂನು ಗಳು ಇಂದಿನಿಂದ (ಜುಲೈ 1) ಜಾರಿಗೆ ಬರಲಿವೆ. ಭಾರತೀಯ ನ್ಯಾಯ ಸಂಹಿತೆ 2023, ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023 ಮತ್ತು ಭಾರತೀಯ ಸಾಕ್ಷ್ಯ ಅಧಿನಿಯಮ 2023 ಹೊಸದಾಗಿ ಅನುಷ್ಠಾನಗೊಳ್ಳಲಿರುವ ಕಾಯ್ದೆಗಳು. ಈ ಮೂರು ಕಾನೂನುಗಳು ಹಿಂದಿನ ಕ್ರಿಮಿನಲ್ ಕಾನೂನುಗಳಾದ ಭಾರತೀಯ ದಂಡ ಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್‌ಪಿಸಿ), ಮತ್ತು ಭಾರತೀಯ ಸಾಕ್ಷ್ಯ ಕಾಯಿದೆಯ ಬದಲಿ ಕಾನೂನುಗಳಾಗಿವೆ. ಮೂರು ಹೊಸ ಕಾನೂನುಗಳಿಗೆ ಡಿಸೆಂಬರ್ 25, 2023 ರಂದು, ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕಾರ ನೀಡಿದ್ದರು. 163 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ದಂಡ ಸಂಹಿತೆ, 126 ವರ್ಷಗಳ ಹಿಂದಿನ ಅಪರಾಧ ದಂಡಪ್ರಕ್ರಿಯಾ ಸಂಹಿತೆ ಮತ್ತು 151 ವರ್ಷಗಳ ಹಿಂದೆ ರೂಪುಗೊಂಡ ಭಾರತೀಯ ಸಾಕ್ಷ್ಯ ಕಾಯ್ದೆಯ ಬದಲಿಗೆ ಈ ಮೂರು ಕಾನೂನುಗಳು ಜಾರಿಗೆ ಬರಲಿವೆ. ಸಮಾಜದ ವಾಸ್ತವಾಂಶ ಮತ್ತು ಅಪರಾಧಗಳನ್ನು ಪರಿಣಾಮಕಾರಿ ಯಾಗಿ ಎದುರಿಸುವ ಕಾರ್ಯವಿಧಾನ ವನ್ನು ಹೊಸ ಕಾನೂನುಗಳ ಮೂಲಕ ಒದಗಿಸಲಾಗಿದೆ.ಸಂವಿಧಾನದಲ್ಲಿ ಪ್ರತಿಪಾದಿಸಿರುವ ಆದರ್ಶಗಳನ್ನು ಗಮನದಲ್ಲಿಟ್ಟುಕೊಳ್ಳಲಾಗಿದೆ.

ಫೇಸ್ಬುಕ್ಕಿನ ಟಾಕ್ಸಿಕ್ ಜನರು ಮತ್ತು ಬುದ್ಧ ಒಮ್ಮೆ ಬುದ್ಧನ ಕುಟಿರಕ್ಕೆ ಇದ್ದಕ್ಕಿದ್ದ ಹಾಗೆ ಬಂದ ವ್ಯಕ್ತಿಯೊಬ್ಬ ಬುದ್ಧನನ್ನು ನಿಂದಿಸತೊಡಗಿದ, ಶಪಿಸತೊಡಗಿದ. ಆತನ ಬೈಗುಳ ಎಂಥವರನ್ನೂ ಕೆರಳಿಸುವ ಹಾಗಿದ್ದವು. ಆ ವ್ಯಕ್ತಿ ಗುಡುಗುತ್ತಾ ಅವಾಚ್ಯ ಪದಗಳ ಸುರಿಮಳೆಗೈಯುತ್ತಿದ್ದರೂ ಬುದ್ಧ ವಿಚಲಿತನಾಗದೆ ಆತನನ್ನು ಕರುಣೆಯಿಂದ ನೋಡುತ್ತಾ, ಕಿರುನಗೆಯನ್ನು ಬೀರುತ್ತಲೇ ಕುಳಿತಿದ್ದ. ಕೋಪ ತಣ್ಣಗಾಗಿ ಬೈಗುಳಗಳ ಭಂಡಾರ ಖಾಲಿಯಾದ ಬಳಿಕ ಆ ವ್ಯಕ್ತಿ ಸುಮ್ಮನೆ ಕುಳಿತ. ಬುದ್ಧ ನಗುತ್ತಲೇ ಕೇಳಿದ - "ನಿಮ್ಮ ಮನೆಗೆ ಅಥಿತಿಗಳು ಬರುತ್ತಾರೆಯೇ?" ಅಲ್ಲಿ ನೆರೆದಿದ್ದ ಎಲ್ಲರಿಗೂ ಈ ಪ್ರಶ್ನೆ ತೀರಾ ಅಸಂಬದ್ಧ ಅನಿಸಿತು. ಆದರೂ ಬುದ್ಧ ಮುಂದೇನು ಹೇಳುತ್ತಾನೆ ಎಂದು ಆಲಿಸಲು ಕುತೂಹಲದಿಂದ ಕಾದರು. ಬುದ್ಧನನ್ನು ನಿಂದಿಸಿದ ವ್ಯಕ್ತಿ ಈ ಅನಿರೀಕ್ಷಿತ ಪ್ರಶ್ನೆಯಿಂದ ಕಳವಳಗೊಂಡರೂ ಮನೆಗೆ ಬಂದ ಅತಿಥಿಗಳಿಗೆ ಹಣ್ಣು ಹಂಪಲು ಶರಬತ್ತು ನೀಡುವೆನೆಂದು ಉತ್ತರಿಸಿದ. "ಅವರಿಗಾಗಿ ತಂದ ಹಣ್ಣು, ಮಾಡಿದ ಶರಬತ್ತನ್ನು ಬಂದ ಅತಿಥಿಗಳು ಸ್ವೀಕರಿಸದೆ ಹೋದರೆ ಏನು ಮಾಡುವೆ?" ಎಂದು ಬುದ್ಧ ಕೇಳಿದ. "ಅವರು ಹಣ್ಣು ಹಂಪಲು ಶರಬತ್ತನ್ನು ಸ್ವೀಕರಿಸದೆ ಇದ್ದರೆ, ಆವು ನನ್ನವೇ ಆಗುತ್ತವೆ. ಅವರು ಹೋಗುವವರೆಗೂ ಕಾದು ನಾನೆ ಅವುಗಳನ್ನು ಸೇವಿಸುವೆ" ಎಂದು ಒಂದು ಕ್ಷಣವೂ ಯೋಚಿಸದೆ ಥಟ್ ಎಂದು ಉತ್ತರ ನೀಡಿದ! ಈ ಸನ್ನಿವೇಶಕ್ಕೂ ನೀನು ನೀಡಿದ ಉತ್ತರವೇ ಅನ್ವಯವಾಗುತ್ತದೆ ಕಣಪ್ಪ ಎಂದ ಕರುಣಾಮಯಿ, ನಗುಮೊಗದ ಬುದ್ಧ. ನೀನು ಮನಬಂದಂತೆ ನನಗೆ ಬೈದೆ, ಕೋಪದಿ ಕುದಿದು ನಿಂದಿಸಿದೆ ಆದರೆ ಅದಾವುದನ್ನೂ ನಾನು ಸ್ವೀಕರಿಸಲಿಲ್ಲ. ನೀನು ನೀಡಿದ್ದು ನಾನು ಸ್ವೀಕರಿಸಿಲ್ಲವೆಂದರೆ ನೀನು ನೀಡಿದ್ದು ನಿನಗೇ ಸೇರುತ್ತದೆ. ನೀನೇ ಅದನ್ನು ಸೇವಿಸಬೇಕು! ಎಂದ ಬುದ್ಧ. ಸಮಚಿತ್ತ ಬುದ್ಧನ ಮಾತುಗಳನ್ನು ಕೇಳಿದ ಅವನಲ್ಲಿ ಕೋಪ ಮಾಯವಾಯಿತು. ಮುಂದೆ ಬುದ್ಧನಿಂದ ಅವನು ಧಮ್ಮ ದೀಕ್ಷೆ ಪಡೆದು ಬುದ್ಧನ ಅನುಯಾಯಿಯಾದ. ಬುದ್ಧನ ವಿವೇಕವೇ ಹಾಗೆ ಎಂತಹ ನಂಜು ತುಂಬಿದ ವ್ಯಕ್ತಿಯನ್ನು ಕೂಡ ಬದಲಾಯಿಸಿಬಿಡುತ್ತವೆ. ಜಗತ್ತಿನೆಲ್ಲೆಡೆ ನಂಜು ತುಂಬಿದ ವ್ಯಕ್ತಿಗಳಿದ್ದಾರೆ. ಮನೆಯಲ್ಲಿ, ಸಂಬಂಧಿಗಳಲ್ಲಿ, ಕಾಲೇಜಿನಲ್ಲಿ, ಕೆಲಸದ ಜಾಗದಲ್ಲಿ, ಎಲ್ಲಕ್ಕಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳಲ್ಲಿ. ನೀವು ಬುದ್ಧನಂತೆ ಮಂದಹಾಸ ಬೀರುತ್ತಾ ಕುಳಿತ್ತಿದ್ದರು ಯಾರೋ ಬಂದು ವಿಷ ಉಗುಳುತ್ತಾರೆ. ದ್ವೇಷ ಕಾರುತ್ತಾರೆ. ಆಗ ಮೇಲಿನ ಕಥೆ ನೆನಪಿಸಿಕೊಳ್ಳಿ. ಅವರ ಕೋಪ, ಅಸೂಯೆ, ದ್ವೇಷಕ್ಕೆ ಪ್ರತ್ಯುತ್ತರವಾಗಿ ನೀವು ಅದನ್ನೇ ಕಾರಿದರೆ, ಅವರು ಹಂಚಿದ ಹಣ್ಣು, ಶರಬತ್ತನ್ನು ನೀವು ಸೇವೆಸಿದಿರಿ ಎಂದೇ ಅರ್ಥ. ನಂಜು ಕಾರುವ ವ್ಯಕ್ತಿಗಳ ನಡುವಿದ್ದಾಗ ಬುದ್ಧನಂತೆ ನಗುತಲಿರಿ. ಎಂದೆಂದಿಗೂ ಆಕ್ರೋಶಕ್ಕೆ ಒಳಗಾಗಬೇಡಿ, ದುಃಖ, ಹತಾಶೆ, ಬೇಸರಕ್ಕೆ ಬಲಿಯಾಗಬೇಡಿ. ನಿಮ್ಮ ಕೋಪ, ದುಃಖ, ಬೇಸರ ನಂಜು ಕಾರುವವರಲ್ಲಿ ಮತ್ತಷ್ಟು ಹುರುಪು ತುಂಬುತ್ತದೆ. ನಿಮ್ಮನ್ನು ಘಾಸಿಗೊಳಿಸಬೇಕೆಂದು ಬರುವವರ ನಿರೀಕ್ಷೆಯಂತೆ ನೀವು ವರ್ತಿಸದಿರಿ. ಘಾಸಿಗೊಳ್ಳಬೇಡಿ. ಬುದ್ಧನಂತೆ ನಗುತಿರಿ. ಅವರಿಗಿಂತ ಬಹಳ ಎತ್ತರಕ್ಕೆ ಬೆಳೆಯಿರಿ. ನಿಮ್ಮ ನೈತಿಕತೆ ವಿವೇಕ ಕಳೆದುಕೊಳ್ಳಬೇಡಿ. ಅವರು ಕೋಪಕ್ಕೆ ಸರಿಯಾದ ಕಾರಣಗಳಿದ್ದರೆ ತಿದ್ದಿಕೊಳ್ಳಿ. ಯಾವುದೇ ಕಾರಣಗಳಿಲ್ಲದೆ ನಂಜು ಕಾರುತ್ತಿದ್ದಾರೆ ಅವರನ್ನು ತಿದ್ದುವ ಪ್ರಯತ್ನವನ್ನೂ ಮಾಡಬೇಡಿ. ನೆನಪಿಡಿ ನಂಜು ಕಾರುವ ವ್ಯಕ್ತಿ ತನ್ನ ಕಣ್ಣು, ಕಿವಿಗಳನ್ನು ಮುಚ್ಚಿಕೊಂಡು ನಿಂದಿಸಲು ಬಾಯನ್ನು ಮಾತ್ರ ತೆರೆಯುತ್ತಾನೆ. ಅವನಿಗೆ ನೋಡಲಾಗದು, ಕೇಳಿ ಅರ್ಥ ಮಾಡಿಕೊಳ್ಳಲಾಗದು. ಅವರ ತಪ್ಪನ್ನು ಅವರಿಗೆ ತೋರುಪಡಿಸದೆ ಮೌನಕ್ಕೆ ಶರಣಾಗಿ. ನಂಜು ಕಾರುವ ವ್ಯಕ್ತಿಗೆ ನಿಮ್ಮ ಯಶಸ್ಸೇ ಉತ್ತರವಾಗಬೇಕು ಪದಗಳಲ್ಲ. ನಂಜು ಕಾರುವವರನ್ನೂ ನೋಯಿಸಬೇಡಿ. ಬುದ್ಧನಂತೆ ಕರುಣಾಮಯಿಯಾಗಿ. ಕರುಣೆ ಎಂತಹ ಅದ್ಭುತ ಗುಣವಲ್ಲವೇ? Suresh Bansode chettinad cement gulbarga

ಈ ಜಗತ್ತಿನಲ್ಲಿ ಯಾರನ್ನೂ ಅವಲಂಬಿಸಿ ಬದುಕಬೇಡಿ, ನಿಮಗೆ ನೀವೇ ಆಧಾರವಾಗಿರಿ. ನಿಮ್ಮನ್ನೇ ಅವಲಂಬಿಸಿರುವ ನಿಮ್ಮದೇ ನೆರಳು ಕೂಡ ಕತ್ತಲಲ್ಲಿ ಮಾಯವಾಗುತ್ತದೆ….. *ಹೀಗೊಂದು ಕಿವಿ ಮಾತು* ಒಳ್ಳೆಯವರಿಗಿದು ಕಾಲವಲ್ಲ ಅನ್ನುವವರ ನಡುವೆ ಒಳ್ಳೆಯವರು ಸಿಕ್ಕಾಗೆಲ್ಲ ಖುಷಿಗೂ ಕಣ್ಣೀರಾಗುತ್ತೇನೆ ನಾನು... ಅಪರಿಚಿತ ಊರಿನಲ್ಲಿ ಸಿಕ್ಕ ಆಪತ್ಭಾಂಧವರ ಕಂಡು ನಿಡುಸುಯ್ಯುತ್ತೇನೆ.... ಕಾಲ ಕೆಟ್ಟಿಲ್ಲ ಕೆಟ್ಟದ್ದು ಮನುಷ್ಯನಷ್ಟೇ ಅನ್ನುವ ಅರಿವಾದಾಗ... ಬಿಸಿಲ ಝಳದ ನಡುವೆ ನಡೆದು ಹೋಗುವಾಗ ಯಾರೋ ಬಂದು ಕೊಡೆ ಹಿಡಿಯುತ್ತಾರೆ, ರಸ್ತೆ ದಾಟಲು ಪರದಾಡುವ ಮುದುಕ ಮುದುಕಿಯರ ಕೈ ಹಿಡಿದು ದಾಟಿಸುತ್ತಾರೆ. ಕೊಚ್ಚೆಗೆ ಬಿದ್ದ ಬೆಕ್ಕಿನ ಮರಿಯನ್ನು ಆಳಕ್ಕೆ ಇಳಿದು ಮೇಲೆತ್ತುತ್ತಾರೆ. ನಗುವವರ ನಡುವೆಯೇ ಮೌನವಾಗಿ ಅಲ್ಲಿಂದ ಕಳೆದು ಹೋಗುತ್ತಾರೆ. ಎನ್ ಜಿ ಓ ಬಿಡು ಮಾರಾಯ ದುಡ್ಡು ಬರುತ್ತೆ ಅನ್ನುವವರ ನಡುವೆಯೇ ಸಮಾಜದ ಕೊನೆಯ ವ್ಯಕ್ತಿಗೂ ಅವರು ಯಾರೋ ಶಕ್ತಿ ತುಂಬುತ್ತಾರೆ... ಬರಿ ಮೋಸದ ಜಾಲವೇ ತುಂಬಿದೆ ಲೋಕದಲ್ಲಿ ಅನ್ನುವವರ ನಡುವೆ ನಿರ್ವಾಹಕನೊಬ್ಬ ಪ್ರಯಾಣಿಕರ ಇಳಿಸುವಾಗ ಚಿಲ್ಲರೆ ಯಾರಲ್ಲಿ ಕೇಳಿ ಪಡೆಯಿರಿ ಅಂತ ಕೂಗು ಹಾಕುತ್ತಾರೆ. ರೈಲು ಪ್ಲಾಟ್ ಫಾರ್ಮಗಳಲ್ಲಿ ದಿಕ್ಕಿಲ್ಲದೆ ಕುಳಿತವನಿಗೆ ಯಾರೋ ಬಂದು ಊಟ ನೀರು ಕೊಡುತ್ತಾರೆ. ರಾತ್ರಿ ತಡವಾಗಿ ಬಾರದ ಬಸ್ಸಿಗೆ ಕಾಯುತ್ತ ಕುಳಿತ ಒಂಟಿ ಮಹಿಳೆಗೆ ಅಕ್ಕ ಭಯ ಪಡಬೇಡಿ ನಾವಿದ್ದೀವಿ ಅಂತ ಇನ್ಯಾರೋ ಧೈರ್ಯ ತುಂಬುತ್ತಾರೆ

*ಜಗತ್ತಿನ ಶ್ರೀಮಂತ ಬಿಲ್ ಗೇಟ್ಸ್ - ಭಾರತದ ನಾಗರಿಕರ ಬಗ್ಗೆ ಅನಿಸಿಕೆಗಳು* ; ------------------------ ಭಾರತದಲ್ಲಿ ಒಬ್ಬ ರೈತ ದೇವರು ಮತ್ತು ಅವನ ದುರಾದೃಷ್ಟವನ್ನು ಶಪಿಸುತ್ತಾ , ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ದೇಶದ ಬಡವರು ಅವನ ಬಡತನದ ಹಿಂದಿನ ನಿಜವಾದ ಅಪರಾಧಿಗಳನ್ನು ಗುರುತಿಸುವಲ್ಲಿ ವಿಫಲರಾಗಿದ್ದಾರೆ.ಅವನ ನಿರುದ್ಯೋಗಕ್ಕೆ ಕಾರಣರಾದ ಜನರ ಬಗ್ಗೆ ಯುವಕರಿಗೆ ತಿಳಿದಿಲ್ಲ. ದೇವರಿಗೆ ಕೂದಲನ್ನು ಅರ್ಪಿಸುವ ಮೂಲಕ ನೀವು ಪುಣ್ಶವನ್ನು ಪಡೆಯುತ್ತೀರ ? ತೆಂಗಿನಕಾಯಿ ಅರ್ಪಿಸಿದರೆ ಸಮೃದ್ಧಿ ನಿಮಗೆ ಸಿಗುತ್ತದಯೆ ? ರಿಯಾಲಿಟಿಯಲ್ಲಿ ನೀವು ನೀಡುವ ಕೂದಲು ಮತ್ತು ತೆಂಗಿನಕಾಯಿಗಳು ದೊಡ್ಡ ವ್ಯವಹಾರವನ್ನು ಮಾಡುತ್ತವೆ. ಚಿನ್ನ / ಬೆಳ್ಳಿಯನ್ನು ಅರ್ಪಿಸುವ ಮೂಲಕ ಒಬ್ಬರು ಏನು ಸಾಧಿಸುತ್ತಾರೆ .. ? ಅಂತಹ ದಾನ ಯಾವ ಉಪಯೋಗಕ್ಕೂ ಬಾರದು .... * ರೈತರಿಗೆ ಬೀಜಗಳನ್ನು ದಾನ ಮಾಡಲು ಪ್ರಯತ್ನಿಸಿ; * ಬಡ ಹುಡುಗಿಯರ ಮದುವೆಯಲ್ಲಿ ಸಹಾಯ ಮಾಡಲು ಪ್ರಯತ್ನಿಸಿ; * ಅನಾಥ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿ; * ಹಸಿದ ವ್ಯಕ್ತಿಗೆ ಆಹಾರವನ್ನು ನೀಡಲು ಪ್ರಯತ್ನಿಸಿ; * ಅಂಗವಿಕಲ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸಿ; * ಹಳ್ಳಿಯ ಶಾಲಾ ಗ್ರಂಥಾಲಯಕ್ಕೆ ದಾನ ಮಾಡಲು ಪ್ರಯತ್ನಿಸಿ; * ವೃದ್ಧಾಶ್ರಮಕ್ಕೆ ದಾನ ಮಾಡಲು ಪ್ರಯತ್ನಿಸಿ; ಹಳ್ಳಿಗಳಲ್ಲಿನ ಶಾಲೆಗಳಿಗೆ ಸೌಕರ್ಯಗಳಿಲ್ಲ ಆದರೆ ದೇವಾಲಯಗಳಲ್ಲಿ ಮಾರ್ಬಲ್ ನೆಲಹಾಸು ಇದೆ. ಒಂದು ಶಾಲೆಗೆ 200 / - ರೂ ದೇಣಿಗೆ ನೀಡಲು ಪೋಷಕರು ನೂರು ಪ್ರಶ್ನೆಗಳನ್ನು ಮಾಡುತ್ತಾರೆ. ಆದರೆ ಯಾವುದೇ ಪ್ರಶ್ನೆಯಿಲ್ಲದೆ ಸಾವಿರಾರು ರೂಪಾಯಿಗಳನ್ನು ದೇವಾಲಯಕ್ಕೆ ದೇಣಿಗೆ ನೀಡುತ್ತಾರೆ. ಭಾರತ ರಾಷ್ಟ್ರವು ನಿಜವಾದ ಅರ್ಥದಲ್ಲಿ ಮಹಾಶಕ್ತಿ ಯಾಗುತ್ತದೆಯೇ ? ನೀವೇ ಕೃಷಿಕ ರಾಷ್ಟ್ರ ಎಂದು ಕರೆಯುತ್ತೀರಿ ಮತ್ತು ನಿಮ್ಮ ರೈತರು ಪ್ರತಿಯೊಂದು ಹಳ್ಳಿಯಲ್ಲೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ...... (ಸಂಗ್ರಹ: ಎಸ್. ಮೂರ್ತಿ)

🌀Attention Pdo candidates 🌀 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ ಡಿ ಓ ಗ್ರೇಡ್ ಒನ್ ಮತ್ತು ಗ್ರೇಡ್ ,೨ ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ
🌀Attention Pdo candidates 🌀 ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ ಡಿ ಓ ಗ್ರೇಡ್ ಒನ್ ಮತ್ತು ಗ್ರೇಡ್ ,೨ ಹುದ್ದೆಗಳಿಗೆ ಸಂಬಂಧಿಸಿದಂತೆ ನಿರ್ದಿಷ್ಟ ಪತ್ರಿಕೆ (ಪಂಚಾಯತ್ ರಾಜ್ ಕಾಯ್ದೆ 1993) ಉಳಿಸಿಕೊಳ್ಳುವ ಕುರಿತು ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘಟನೆ ನಿರಂತರವಾಗಿ ಶ್ರಮಿಸುತ್ತಿದೆ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಲಯಕ್ಕೆ  ನೀಡಿದ ಮನವಿಗೆ ಸ್ವೀಕೃತಿಯನ್ನು ಪಡೆದಿದ್ದೇವೆ E OFFICE Number 1335522  ಸಂಖ್ಯೆ ನಮೂದಿಸಿ ಮಾಹಿತಿ ಪಡೆಯಬಹುದು (2021 ರ ನಿಯಮದಂತೆ ) ಪಠ್ಯಕ್ರಮದ ವಿಷಯ ಕರ್ನಾಟಕ ಸರ್ಕಾರದ ಸಚಿವ ಸಂಪುಟದಲ್ಲಿ ಚರ್ಚೆಗೆ ಬಂದು ಅಂತಿಮವಾಗಬೇಕಾಗಿದೆ ಸಚಿವ ಸಂಪುಟ ಅನುಮತಿ ನೀಡಿದರೆ ಪಠ್ಯಕ್ರಮ ಬದಲಾವಣೆಗೆ ಒಳಪಟ್ಟಿರುತ್ತದೆ ಅಲ್ಲಿಯವರೆಗೂ ತಾಳ್ಮೆಯಿಂದ ಇರಬೇಕಾಗಿ ವಿನಂತಿಸಿಕೊಳ್ಳುತ್ತೇವೆ ಧನ್ಯವಾದಗಳು 🙏