en
Feedback
UPSC / KPSC / KEA Exams 🏘📚

UPSC / KPSC / KEA Exams 🏘📚

Open in Telegram

ಎಲ್ಲಾ ರೀತಿಯ ಸ್ಪರ್ಧಾತ್ಮಕ ಹಾಗೂ ಶೈಕ್ಷಣಿಕ ಪರೀಕ್ಷೆಗಳಿಗಾಗಿ. 😊

Show more
2 392
Subscribers
No data24 hours
-27 days
-1530 days
Posts Archive
https://x.com/vinaygb/status/1829555900111343642?t=ABQzPrcUxUCdXnVnETtzMg&s=19https://x.com/vinaygb/status/1829555900111343642?t=ABQzPrcUxUCdXnVnETtzMg&s=19 ಇನ್ಸೈಟ್ಸ್ IAS ಸಂಸ್ಥೆಯ ವಿನಯ್ ಕುಮಾರ್ ಸರ್ ಇವರು KPSC ನಡೆಸಿದ KAS ಪರೀಕ್ಷೆಯ ಕನ್ನಡ ಅನುವಾದದ ತಪ್ಪುಗಳನ್ನು ಖಂಡಿಸಿದ್ದಾರೆ. 2/9/2024 ಸೋಮವಾರದಂದು Freedom parkನಲ್ಲಿ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಿದ್ದು, ಪ್ರತ್ಯಕ್ಷವಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮರುಪರೀಕ್ಷೆಗೆ ಒತ್ತಾಯ ಮಾಡಲಿದ್ದಾರೆ. ತಾವೆಲ್ಲರೂ ಭಾಗವಹಿಸಬೇಕು. 👆 ಎಕ್ಸ್ ಅಭಿಯಾನಕ್ಕೆ ಈ ಕೆಳಕಂಡ #Hashtag ಬಳಸಿ ರಿಪೋಸ್ಟ್ ಮಾಡಿ ! #KPSC_Mosa #KASReExam #2nd_Gokak

ಆತ್ಮೀಯ ಸ್ಪರ್ಧಾ ಆಕಾಂಕ್ಷಿಗಳೇ, ನಮಗೆ ತಿಳಿದಿರುವಂತೆ ಕರ್ನಾಟಕ ಲೋಕಸೇವಾ ಆಯೋಗವು ಗೆಜೆಟೆಡ್ ಪ್ರೋಬೇಷನರಿ ಪೂರ್ವಭಾವಿ ಪರೀಕ್ಷೆಯನ್ನು 27 ನೇ ಆಗಸ್ಟ್ 2024 ರಂದು ನಡೆಸಿದ್ದು , ಅನೇಕ ಆಕಾಂಕ್ಷಿಗಳು ಪರೀಕ್ಷೆಗೆ ಸಂಬಂಧಿಸಿದಂತೆ ಕೆಲವು ಕಳವಳಗಳನ್ನು ವ್ಯಕ್ತಪಡಿಸಲು ನಮ್ಮನ್ನು ಸಂಪರ್ಕಿಸಿರುತ್ತಾರೆ. ಉದಾಹರಣೆಗೆ.. 1. ಆಂಗ್ಲ ಭಾಷೆಯಿಂದ ಕನ್ನಡಕ್ಕೆ ಅನುವಾದಿಸಲಾದ ಹಲವಾರು ಪ್ರಶ್ನೆಗಳು ಗಂಭೀರವಾದ ಅನುವಾದ ದೋಷಗಳನ್ನು ಒಳಗೊಂಡಿದ್ದು, ಪ್ರಶ್ನೆಗಳನ್ನು ಅರ್ಥೈಸಿಕೊಂಡು ಉತ್ತರಿಸಲು ಪ್ರತಿಕೂಲ ಪರಿಣಾಮ ಬೀರಿದೆ. ಇದು ಉತ್ತರಿಸುವಿಕೆಯ ಕ್ಷಮತೆಯನ್ನು ಕುಂಠಿತಗೊಳಿಸಿದೆ. 2. ಅಧಿಕೃತ ಅಧಿಸೂಚನೆಯಲ್ಲಿ ವಿವರಿಸಿದಂತೆ, ವಿಷಯವಾರು ಪ್ರಶ್ನೆಗಳನ್ನು ಅನುಸರಿಸಲಾಗಿಲ್ಲವೆಂದು ಸ್ಪರ್ಧಾಕಾಂಕ್ಷಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಇದು ಮತ್ತಷ್ಟು ಗೊಂದಲಕ್ಕೀಡು ಮಾಡಿದೆ. ಆಕಾಂಕ್ಷಿಗಳ ತಾಳ್ಮೆ, ಕಠಿಣ ಪರಿಶ್ರಮವನ್ನು ಪರಿಗಣಿಸಲು ಹಾಗೂ ಗೌರವಿಸಲು ಡಾ. ರಾಜ್ ಕುಮಾರ್ ಐಎಎಸ್/ ಕೆ .ಎ.ಎಸ್ ಅಕಾಡೆಮಿಯ ಅರ್ಹವಾಗಿದೆ. ಮತ್ತು ಪರೀಕ್ಷೆ ಎದುರಿಸಿದ ಅಭ್ಯರ್ಥಿಗಳ ಬಗ್ಗೆ ನಿಜವಾದ ಕಾಳಜಿಯನ್ನು ಹೊಂದಿದ್ದು ಅಭ್ಯರ್ಥಿಗಳನ್ನು ಬೆಂಬಲಿಸಲು ಬದ್ಧವಾಗಿರುತ್ತದೆ. ಮೇಲ್ಕಂಡ ವಿಷಯದ ಬಗ್ಗೆ ನೀವು ಯಾವುದೇ ಮಾಹಿತಿಗಳನ್ನು ಹೊಂದಿದ್ದರೆ, ದಯಮಾಡಿ ಯಾವುದೇ ಹಿಂಜರಿಕೆ ಇಲ್ಲದೆ ಈ ಕೆಳಕಂಡ ಗೂಗಲ್ ಫಾರಂನ್ನು ಭರ್ತಿ ಮಾಡಿ. https://forms.gle/KwNGE9uFqwhPzxhC7 ಶುಭ ಹಾರೈಕೆ ಡಾ. ರಾಜ್ ಕುಮಾರ್ ಐಎಎಸ್/ಕೆಎಎಸ್ ಅಕಾಡೆಮಿ.

#KAS_Prelims
#KAS_Prelims

Repost from Officers Adda
ಗೆಳೆಯರೇ ಇತ್ತೀಚಿಗೆ ನಡೆದ ಕೆಎಎಸ್ ಪೂರ್ವಭಾವಿ ಪರೀಕ್ಷೆಯಲ್ಲಿ ಕೆಪಿಎಸ್ಸಿ ಸಾಕಷ್ಟು ಗೊಂದಲ ಗಳನ್ನು ಸೃಷ್ಟಿ ಮಾಡಿದೆ. ಪ್ರಶ್ನೆ ಪತ್ರಿಕೆಯಲ್ಲಿ ಭಾಷಾಂತರ ಲೋಪದೋಷಗಳಾಗಿವೆ. ಕೆಲವು ಪ್ರಶ್ನೆಗಳು ಗೊಂದಲಮಯವಾಗಿವೆ. ಕೆಲವು ಉತ್ತರಗಳು ಕಾಣೆಯಾಗಿವೆ. ಅಸಂಬದ್ಧ ಪ್ರಶ್ನೆಗಳು ಬಂದಿವೆ. ಕನ್ನಡ ಮಾಧ್ಯಮದಲ್ಲಿ ಓದಿದ ವಿದ್ಯಾರ್ಥಿಗಳಿಗೆ ಇದು ಅತಿ ದೊಡ್ಡ ಅನ್ಯಾಯ ಎಂಬುದು ನಮ್ಮ ಅಭಿಪ್ರಾಯ. ಆಡಳಿತ ಭಾಷೆ ಕನ್ನಡ ಇರುವ ರಾಜ್ಯದಲ್ಲಿ ಕನ್ನಡದಲ್ಲಿ ಪ್ರಶ್ನೆ ಪತ್ರಿಕೆಗಳನ್ನು ತಯಾರಿಸಲು ಸಂವಿಧಾನಾತ್ಮಕ ಸಂಸ್ಥೆಗೆ (ಕೆಪಿಎಸ್ಸಿ) ಸಾಧ್ಯವಾಗಲಿಲ್ಲವಾದರೆ ಹೇಗೆ..? ಉತ್ತರಗಳಲ್ಲಿ ಸಂದೇಹಗಳಿದ್ದರೆ ಆಕ್ಷೇಪಣೆ ಸಲ್ಲಿಸಬಹುದು, ಆದರೆ ಇಲ್ಲಿ ಪ್ರಶ್ನೆಗಳೇ ತಪ್ಪಿ ಹೋಗಿವೆ. ಆಕ್ಷೇಪಣೆ ಸಲ್ಲಿಸುವುದರಲ್ಲಿ ಯಾವುದೇ ಅರ್ಥ ಇಲ್ಲ ಎಂಬುದು ನಮ್ಮ ಅಭಿಪ್ರಾಯ.. ವಿದ್ಯಾರ್ಥಿಗಳ ಪರವಾಗಿ ಆಫೀಸರ್ಸ್ ಅಡ್ಡ ಆಗ್ರಹಿಸುವ ವಿಷಯಗಳು 1. ಸದ್ಯಕ್ಕೆ ವಿದ್ಯಾರ್ಥಿಗಳಿಗಾಗಿರುವ ಅನ್ಯಾಯವನ್ನು ಶೀಘ್ರದಲ್ಲಿಯೇ ಪರಿಹರಿಸಬೇಕು. 2. ಸಮಗ್ರವಾದ ಪಠ್ಯಕ್ರಮವನ್ನು ನೀಡಬೇಕು ಮತ್ತು ನಿರ್ದಿಷ್ಟ ವಿಷಯಗಳಿಗೆ ಪಠ್ಯಪುಸ್ತಕವನ್ನು ನೀಡಬೇಕು. (ಮನಸ್ಸಿಗೆ ಬಂದ ವಿಷಯಗಳಿಂದ ಪ್ರಶ್ನೆಗಳನ್ನು ತೆಗೆದರೆ ವಿದ್ಯಾರ್ಥಿಗಳು ಹೇಗೆ ಬರೆಯಬೇಕು?) 3. ಪ್ರತಿ ವಿಷಯಗಳಿಂದ ನಿರ್ದಿಷ್ಟ ಸಂಖ್ಯ ಪ್ರಶ್ನೆಗಳು ಬರಲೇಬೇಕು.(ಮಾನಸಿಕ ಸಾಮರ್ಥ್ಯ ವಿಷಯದಿಂದ ಈ ಬಾರಿ ಕಡಿಮೆ ಪ್ರಶ್ನೆಗಳು ಬಂದಿವೆ ಮತ್ತು ಆಧುನಿಕ ಭಾರತದ ಇತಿಹಾಸದ ಪ್ರಶ್ನೆಗಳೇ ಇಲ್ಲ) 4. ಇರುವ ಪಠ್ಯದಿಂದಲೇ ಸಾಕಷ್ಟು ಕಠಿಣ ಪ್ರಶ್ನೆಗಳನ್ನು ತೆಗೆಯಿರಿ, ಆದರೆ ಪಠ್ಯಕ್ರಮದ ಆಚೆಗೆ ಹೋಗುವುದು ಬೇಡ. 5. ಮೊದಲು ಕನ್ನಡ ಭಾಷೆಯಲ್ಲಿಯೇ ಪ್ರಶ್ನೆ ಪತ್ರಿಕೆಯನ್ನು ಸಿದ್ಧಪಡಿಸಿ ನಂತರ ಇಂಗ್ಲಿಷ್ಗೆ ಭಾಷಾಂತರ ಮಾಡಬೇಕು. ಒಂದು ಒಳ್ಳೆಯ ಪ್ರಶ್ನೆ ಪತ್ರಿಕೆ ಹಲವಾರು ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳನ್ನು ಸೃಷ್ಟಿಸುತ್ತೆ. ಮತ್ತು ರಾಜ್ಯದ ಆಡಳಿತ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದರಿಂದ ಸಮಸ್ತ ಕನ್ನಡಿಗರಿಗೆ ಉತ್ತಮ ಆಡಳಿತ ದೊರಕುತ್ತದೆ ಎಂಬುದು ನಮ್ಮ ಅಭಿಪ್ರಾಯ. Regards Officers Adda 👍💐

https://education.sakshi.com/en/appsc/education-news/appsc-group-1-prelims-2024-results-150-selection-ratio-153785 ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳೇ, ಇತ್ತೀಚೆಗೆ ಆಂಧ್ರಪ್ರದೇಶ ಲೋಕಸೇವಾ ಆಯೋಗದ ಗ್ರೂಪ್-೧ರ ಪರೀಕ್ಷೆಯಲ್ಲೂ ಇದೇ ರೀತಿಯ ಭಾಷಾಂತರ ಸಮಸ್ಯೆ ಉಂಟಾಗಿತ್ತು, ಅಲ್ಲಿನ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಂಘಟನೆಗಳ ಒತ್ತಡಕ್ಕೆ ಮಣಿದ APPSC, ಮುಖ್ಯ ಪರೀಕ್ಷೆಗೆ 1:50 ಅನುಪಾತದಲ್ಲಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿತ್ತು. ಪ್ರಸ್ತುತ ಸನ್ನಿವೇಶದಲ್ಲಿ ನಮ್ಮ ರಾಜ್ಯದಲ್ಲಿಯೂ ಇದೇ ಒತ್ತಡ ಮುಂದಿಟ್ಟರೆ, ಯಶಸ್ಸು ಸಿಗಬಹುದು. ಏಕೆಂದರೆ ಮರುಪರೀಕ್ಷೆ ಬೇಡಿಕೆಯ ಯಶಸ್ಸಾಗುವುದು ಸದ್ಯದ ಪರಿಸ್ಥಿತಿಯಲ್ಲಿ ಕಠಿಣ. ಹಾಗಾಗಿ ವಿದ್ಯಾರ್ಥಿಗಳು ಹಾಗೂ ಎಲ್ಲಾ ಸಂಘಟನೆಗಳೂ ಒಗ್ಗೂಡಿ ಹೋರಾಡಿದರೆ, ಹೆಚ್ಚು ಮಂದಿ ಮುಖ್ಯ ಪರೀಕ್ಷೆ ಬರೆಯಲು ಸಾಧ್ಯವಾಗಬಹುದು. #ಯೋಚಿಸಿ_ಚರ್ಚಿಸಿ_ನಿರ್ಧರಿಸಿ #KAS_PRELIMS

ಕೆಪಿಎಸ್‌ಸಿ ಅಕ್ರಮದ ವಿರುದ್ಧ ಹೋರಾಟಕ್ಕೆ ಅಭ್ಯರ್ಥಿಗಳ ಸಿದ್ದತೆ ರಾಜ್ಯದ ಶಾಲೆಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಪ್ರಮುಖ ಅಗ್ರಹದೊಂದಿಗೆ
ಕೆಪಿಎಸ್‌ಸಿ ಅಕ್ರಮದ ವಿರುದ್ಧ ಹೋರಾಟಕ್ಕೆ ಅಭ್ಯರ್ಥಿಗಳ ಸಿದ್ದತೆ ರಾಜ್ಯದ ಶಾಲೆಗಳಲ್ಲಿ ಕನ್ನಡಕ್ಕೆ ಮೊದಲ ಆದ್ಯತೆ ನೀಡಬೇಕೆಂಬ ಪ್ರಮುಖ ಅಗ್ರಹದೊಂದಿಗೆ 1982 ರಲ್ಲಿ ವರನಟ ಡಾಕ್ಟರ್ ರಾಜಕುಮಾರ್ ಸೇರಿ, ಪ್ರಮುಖರು ನಡೆಸಿದ ಗೋಕಾಕ್ ಚಳುವಳಿ ಮಾದರಿಯಲ್ಲಿ ಇದೀಗ ಕೆಪಿಎಸ್ಸಿ ಕರ್ಮಕಾಂಡವನ್ನು ಖಂಡಿಸಿ ಹಾಗೂ ಕೆಎಎಸ್ ಪ್ರಿಲಿಮ್ಸ್ ಮರು ಪರೀಕ್ಷೆಗೆ ಆಗ್ರಹಿಸಿ ಎರಡನೇ ಗೋಕಾಕ್ ಚಳುವಳಿ ಹೆಸರಿನಲ್ಲಿ ಹೋರಾಟ ಸಿದ್ಧತೆ ವಿವಿಧ ಕನ್ನಡ ಪರ ಸಂಘಟನೆಗಳು ಕನ್ನಡ ಆಸ್ಮಿತೆ ಹೊಂದಿರುವ ಸಾಹಿತಿಗಳು ಪ್ರಮುಖವಾಗಿ ನಾಗತಿಹಳ್ಳಿ ಚಂದ್ರಶೇಖರ್ ಸಾಹಿತಿ ಕವಿರಾಜ್ ಸಾಹಿತಿ ದೇವನೂರು ಮಹಾದೇವ ಸಂಗೀತ ನಿರ್ದೇಶಕ ಹಂಸಲೇಖ ಅವರನ್ನು ಒಳಗೊಂಡಂತೆ ಸಾಹಿತ್ಯ ಸಿನಿಮಾ ಮತ್ತು ರಾಜಕೀಯ ಕ್ಷೇತ್ರದ ಗಣ್ಯರು ಹೋರಾಟಕ್ಕೆ ಕೈಜೋಡಿಸಲಿದ್ದಾರೆ ಧನ್ಯವಾದಗಳು 🙏

KPSC KAS Prelims Exam related query.
KPSC KAS Prelims Exam related query.

Repost from AKSSA OFFICIAL
ಇಂದು ಮತ್ತು ನಾಳೆ ಸತತವಾಗಿ ಎಕ್ಸ್ ಖಾತೆಯಲ್ಲಿ ರಿಪೋಸ್ಟ್ ಮಾಡುವುದರ ಮೂಲಕ ಮತ್ತು ಹ್ಯಾಸ್ ಟ್ಯಾಗ್ ಗಳನ್ನು ಹಾಕುವುದರ ಮೂಲಕ ನಿರಂತರವಾಗಿ ಹೋರಾಟದ ಕಾವನ್ನು ಹೆಚ್ಚಿಸಬೇಕು ಇಲ್ಲದಿದ್ದರೆ ಮುಂದಿನ ಹೋರಾಟಕ್ಕೆ ಹಿನ್ನಡೆಯಾಗುತ್ತದೆ ದಯವಿಟ್ಟು ಭಾಗವಹಿಸಿ ನಾವು ಭರವಸೆ ನೀಡುತ್ತಿದ್ದೇವೆ ಖಂಡಿತವಾಗಿಯೂ ಮರು ಪರೀಕ್ಷೆ ಆಗುತ್ತೆ !

Repost from AKSSA OFFICIAL
ಎಕ್ಸ್ ಅಭಿಯಾನಕ್ಕೆ ಈ ಕೆಳಕಂಡ #Hashtag ಬಳಸಿ ರಿಪೋಸ್ಟ್ ಮಾಡಿ ! #KPSC_Mosa #KASReExam

578 Key Answers (1).pdf4.22 KB

579 Key Answers.pdf4.21 KB

ಗೆಳೆಯರೇ, ನಿಮ್ಮೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಟೆಲಿಗ್ರಾಂನ ಸಂಸ್ಥಾಪಕ ಬಂಧನಕ್ಕೊಳಗಾಗಿದ್ದು ಟೆಲಿಗ್ರಾಂ ಆ್ಯಪ್ ಬ್ಯಾನ್ ಆಗುವ ಸಾಧ್ಯತೆ ಇದೆ,
ಗೆಳೆಯರೇ, ನಿಮ್ಮೆಲ್ಲರಿಗೂ ತಿಳಿದಿರುವಂತೆ ಇತ್ತೀಚೆಗೆ ಟೆಲಿಗ್ರಾಂನ ಸಂಸ್ಥಾಪಕ ಬಂಧನಕ್ಕೊಳಗಾಗಿದ್ದು ಟೆಲಿಗ್ರಾಂ ಆ್ಯಪ್ ಬ್ಯಾನ್ ಆಗುವ ಸಾಧ್ಯತೆ ಇದೆ, ಆದ್ದರಿಂದ ಎಲ್ಲರೂ ಈ ಕೆಳಕಂಡ ನಮ್ಮ ವಾಟ್ಸಾಪ್‌ ಗುಂಪನ್ನು ಸೇರಿರಿ‌. https://chat.whatsapp.com/HQfTd3Vmn6cDTSWZemPhxQ

Repost from AKSSA OFFICIAL
ನಾಳೆ ನಡೆಯಲಿರುವ ಕೆಎಎಸ್ ಪೂರ್ವಭಾವಿ ಪರೀಕ್ಷೆಯನ್ನು ನಾನು ?
Anonymous voting

Repost from N/a
All the best for your Exams ☺️ #KAS_Prelims
All the best for your Exams ☺️ #KAS_Prelims