GPSTR / TET/ HSTR - KHOT SIR
Ir al canal en Telegram
6 342
Suscriptores
+224 horas
+437 días
+17630 días
Archivo de publicaciones
Pl all of you check probability all 1-9 videos are now available in new karnatak academy app...
Pl watch
Watch "SCIENCE QUIZ QUESTION DISCUSSION" on YouTube
https://youtu.be/QL15raEfEY4
Watch "PROBABILITY IMP APPLIED QUESTION DISCUSSION" on YouTube
https://youtu.be/jVfWb4nYq30
Watch "ಸಂಭವನೀಯತೆ ಪ್ರಮುಖ ಪ್ರಶ್ನೆಗಳು" on YouTube
https://youtu.be/PPA7GupwfBo
ಸಂಭವನೀಯತೆ: https://www.youtube.com/playlist?list=PL5RlqI_JFXMoikoQ6wpbAanIEjIk2pKjr
ಸಂಭವನೀಯತೆ full chapter 👆👆👆
Watch "l GPSTR l CET l 6-8 l ಹೊಸ ಬದಲಾವಣೆಗಳು ಯಾವುವು ? ಯಾರೆಲ್ಲ ಪರೀಕ್ಷೆ ಬರೆಯಬಹುದು ?" on YouTube
https://youtu.be/JaFKLE1LE-M
Big Breaking News..
*ಇಂಜಿನಿಯರಿಂಗ್ ಪದವೀಧರರಿಗೂ ಶಿಕ್ಷಕ ಹುದ್ದೆ: ಸುರೇಶ್ ಕುಮಾರ್*
*ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ (6ರಿಂದ 8ನೇ ತರಗತಿ) ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಸಂಪುಟ ಅನುಮೋದನೆ; ಶೈಕ್ಷಣಿಕ ಅಭಿವೃದ್ಧಿಗೆ, ವೈವಿಧ್ಯತೆಗೆ ಪೂರಕ*.
ಬೆಂಗಳೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆ (6ರಿಂದ 8ನೇ ತರಗತಿ) ಹುದ್ದೆಗಳಿಗೆ ಸಂಬಂಧಿಸಿದಂತೆ ವೃಂದ ಮತ್ತು ನೇಮಕಾತಿ ನಿಯಮಗಳ ತಿದ್ದುಪಡಿಗೆ ಸಚಿವ ಸಂಪುಟ ಅನುಮೋದನೆ ನೀಡುವುದರೊಂದಿಗೆ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಹೊಸ ಶಕೆ ಪ್ರಾರಂಭವಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
2017ರ ವೃಂದ ಮತ್ತು ನೇಮಕಾತಿ ನಿಯಮಗಳನ್ವಯ ಅಸ್ತಿತ್ವಕ್ಕೆ ಬಂದ ಪ್ರಾಥಮಿಕ ಶಾಲಾ ಶಿಕ್ಷಕ (6ರಿಂದ 8ನೇ ತರಗತಿ) ಹುದ್ದೆಗಳ ಭರ್ತಿಗಾಗಿ 2018 ಮತ್ತು 2019ರ ನೇಮಕಾತಿ ಅಧಿಸೂಚನೆಗೆ ಅಗತ್ಯ ಸಂಖ್ಯೆಯ ಅಭ್ಯರ್ಥಿಗಳ ಕೊರತೆಯಿಂದ ಹೆಚ್ಚಿನ ಸ್ಥಾನಗಳು ಖಾಲಿ ಬಿದ್ದಿದ್ದವು. ಶೈಕ್ಷಣಿಕ ಸುಧಾರಣೆಗೆ, ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಯ ಅಗತ್ಯವನ್ನು ಮನಗಂಡು ವೃಂದ ನಿಯಮಗಳಿಗೆ ಕೆಲ ತಿದ್ದುಪಡಿಯನ್ನು ಶಿಕ್ಷಣ ಇಲಾಖೆ ಪ್ರಸ್ತಾಪಿಸಿದ್ದು, ಈ ತಿದ್ದುಪಡಿಗೆ ಸಂಪುಟ ಇಂದು ಅನುಮೋದನೆ ನೀಡಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವೃಂದ ನಿಯಮಗಳಿಗೆ ಕೆಲವು ತಿದ್ದುಪಡಿ ಅಗತ್ಯವಾಗಿತ್ತು. ವಿಜ್ಞಾನ ಶಿಕ್ಷಕ ಹುದ್ದೆಗಳಲ್ಲಿ ಇಂಜಜಿನಿಯರಿಂಗ್ ಪದವೀಧರರೂ ಸೇರಿದಂತೆ ವಿವಿಧ ಪದವೀಧರರಿಗೆ ಅವಕಾಶ ಕಲ್ಪಿಸಬೇಕೆಂಬ ಪರಿಣಿತರ ಸಮಿತಿ ಅಭಿಪ್ರಾಯದಂತೆ ಈ ತಿದ್ದುಪಡಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
6ರಿಂದ 8ನೇ ತರಗತಿ ಪ್ರಾಥಮಿಕ ಶಾಲಾ ವಿಜ್ಞಾನ ಮತ್ತು ಗಣಿತ ಶಿಕ್ಷಕ ಹುದ್ದೆಗಳಿಗೆ ಪ್ರಸ್ತುತ ಚಾಲ್ತಿಯಲ್ಲಿರುವ ನಿಯಮಗಳಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಗಣಿತ ವಿಷಯಗಳಿಗೆ ಮಾತ್ರವೇ ಆವಕಾಶವಿತ್ತು. ಭೌತಶಾಸ್ತ್ರ ಮತ್ತು ಗಣಿತಶಾಸ್ತ್ರಗಳನ್ನು ಪದವಿಯಲ್ಲಿ ಕಡ್ಡಾಯವಾಗಿ ವ್ಯಾಸಂಗ ಮಾಡಿದ್ದು, ಮೂರನೇ ವಿಷಯವನ್ನು ರಸಾಯನಶಾಸ್ತ್ರ ವಿಷಯದ ಜೊತೆಗೆ ಗಣಕ ಯಂತ್ರ ವಿಜ್ಞಾನ (ಕಂಪ್ಯೂಟರ್ ಸೈನ್ಸ್) /ಎಲೆಕ್ಟ್ರಾನಿಕ್ಸ್/ ಭೂಗೋಳಶಾಸ್ತ್ರ/ ಸ್ಟ್ಯಾಟಿಟಿಕ್ಸ್/ ಗೃಹವಿಜ್ಞಾನ ವಿಷಯಗಳಿಗೂ ಸಹ ಅವಕಾಶ ಕಲ್ಪಿಸಿದಲ್ಲಿ ಶಿಕ್ಷಕ ಸಂಪನ್ಮೂಲದಲ್ಲಿ ವೈವಿಧ್ಯತೆಗೆ ದಾರಿಯಾಗಲಿದ್ದು, ಶಾಲಾ ಶಿಕ್ಷಣಕ್ಕೆ ಪೂರಕವಾಗಿ ಒದಗಿ ಬರಲಿದೆ. ತಾವು ನೇಮಿಸಿದ್ದ ಪರಿಣಿತರ ತಂಡದ ಅಭಿಪ್ರಾಯದ ಹಿನ್ನೆಲೆಯಲ್ಲಿ ಈ ವಿಷಯಗಳನ್ನು ಸಹ ಅರ್ಹ ವಿಷಯಗಳಾಗಿ ಪರಿಗಣಿಸಲಾಗುತ್ತದೆ. ಈ ಅಭ್ಯರ್ಥಿಗಳು ಬಿಇಡಿ ಮತ್ತು ಟಿಇಟಿ ಅರ್ಹತೆ ಹೊಂದಬೇಕಿರುತ್ತದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಈ ತಿದ್ದುಪಡಿಯಿಂದಾಗಿ ನಾಲ್ಕು ವರ್ಷಗಳ ಅವಧಿಯ ಇಂಜಿನಿಯರಿಂಗ್ / ಬಿ.ಟೆಕ್ ಪದವಿ (ಆರ್ಕಿಟೆಕ್ಚರ್ ಪದವಿ ಹೊರತುಪಡಿಸಿ) ಪಡೆದ ಅಭ್ಯರ್ಥಿಗಳನ್ನು ಸಹ ಈ ಹುದ್ದೆಗಳಿಗೆ ಪರಿಗಣಿಸಬಹುದಾಗಿದೆ. ಪ್ರಸ್ತುತ ನಿಯಮಗಳಲ್ಲಿ ಸಿಬಿಝಡ್ ವಿಷಯಗಳ ಅಭ್ಯರ್ಥಿ ಅವಕಾಶವಿರಲಿಲ್ಲ. ಈ ವಿಷಯಗಳ ಅಭ್ಯರ್ಥಿಗಳ ಬೇಡಿಕೆ ಗಮನಿಸಿ ವಿಜ್ಞಾನ ಮತ್ತು ಗಣಿತ ವಿಷಯದ ಎರಡನೇ ಹುದ್ದೆ ಇರುವ ಶಾಲೆಗಳಲ್ಲಿ ಜೀವ-ವಿಜ್ಞಾನ ಶಾಸ್ತ್ರ (ಬಯೋಲಜಿಕಲ್ ಸೈನ್ಸ್) ವಿಷಯವನ್ನು ಪರಿಗಣಿಸಲಾಗುತ್ತದೆ. ಪದವಿ ಹಂತದಲ್ಲಿ ಕಡ್ಡಾಯವಾಗಿ ಮೂರು ವರ್ಷಗಳಲ್ಲಿಯೂ ರಸಾಯನಶಾಸ್ತ್ರ ಅಭ್ಯಾಸ ಮಾಡಿರುವ ಮತ್ತು ಉಳಿದಂತೆ ಸಸ್ಯಶಾಸ್ತ್ರ/ ಪ್ರಾಣಿ ಶಾಸ್ತ್ರ/ ರೇಷ್ಮೆ ಶಾಸ್ತ್ರ / ಪರಿಸರ ಶಾಸ್ತ್ರ/ ಜೈವಿಕ ವಿಜ್ಞಾನ ವಿಷಯಗಳ್ಲಿ ಯಾವುದಾದರೂ ಎರಡು ವಿಷಯಗಳನ್ನು ಕಡ್ಡಾಯವಾಗಿ ಎಲ್ಲ 3 ವರ್ಷಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳನ್ನೂ ಇನ್ನು ಮುಂದೆ ಈ ಶಿಕ್ಷಕ ಹುದ್ದೆಗಳಿಗೆ ಪರಿಗಣಿಸಲಾಗುತ್ತದೆ ಎಂದು ಸಚಿವರು ವಿವರಿಸಿದ್ದಾರೆ.
ಹಾಗೆಯೇ ಭಾಷಾ ಹುದ್ದೆಗಳಿಗೆ ಇತರೆ ಭಾಷೆಗಳ ಜೊತೆಗೆ ಸಂಸ್ಕೃತವನ್ನು ಸೇರ್ಪಡೆಗೊಳಿಸಲು ಮತ್ತು ಸಮಾಜ ಪಾಠಗಳ ಹುದ್ದೆಗೆ ಸಮಾಜಶಾಸ್ತ್ರ ವಿಷಯವನ್ನು ಸಹ ಸೇರ್ಪಡೆ ಮಾಡಲಾಗಿದೆ ಎಂದು ಅವರು ವಿವರಿಸಿದ್ದಾರೆ.
ಈ ಎಲ್ಲ ಅಂಶಗಳ ಜೊತೆಗೆ ನೇಮಕಾತಿ ವಿಧಾನದಲ್ಲಿ ಆಧಾರದ ಸರಾಸರಿ ಅಂಕಗಳಲ್ಲಿ ಕೆಲವು ಮಾರ್ಪಾಡು ಮಾಡಲಾಗಿದೆ. ಅದರಂತೆ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಗಳಿಸಿದ ಅಂಕಗಳು- ಶೇ.50, ಟಿಇಟಿಯಲ್ಲಿ ಗಳಿಸಿರುವ ಅಂಕಗಳು- ಶೇ.20, ಪದವಿಯಲ್ಲಿ ಗಳಿಸಿದ ಅಂಕಗಳು- ಶೇ.20 ಮತ್ತು ಡಿಇಡಿ/ಬಿಇಡಿಯಲ್ಲಿ ಗಳಿಸಿದ ಅಂಕಗಳು-ಶೇ.10ರ ಮಾನದಂಡವನ್ನು ಪ್ರಸ್ತಾಪಿಸಲಾಗಿದೆ ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.
ಸರ್ಕಾರದ ಈ ಕ್ರಮದಿಂದ ಈ ಶಿಕ್ಷಕ ಹುದ್ದೆಗಳಿಗೆ ಹೆಚ್ಚಿನ ಅಭ್ಯರ್ಥಿಗಳ ಲಭ್ಯತೆಯಾಗಲಿದ್ದು, ಶೈಕ್ಷಣಿಕ ವೈವಿಧ್ಯತೆ, ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
¡Ya disponible! Investigación de Telegram 2025 — los principales insights del año 
