cookie

Мы используем файлы cookie для улучшения сервиса. Нажав кнопку «Принять все», вы соглашаетесь с использованием cookies.

avatar

ಪ್ರಚಲಿತ ಘಟನೆಗಳು

ಪ್ರಚಲಿತ ಘಟನೆಗಳು https://t.me/joinchat/AAAAAEsebBnw1Qgb-vCHUw

Больше
Страна не указанаЯзык не указанКатегория не указана
Рекламные посты
5 119
Подписчики
Нет данных24 часа
Нет данных7 дней
Нет данных30 дней

Загрузка данных...

Прирост подписчиков

Загрузка данных...

GK SEP 3-4
Показать все...
✿ ಮ್ಯಾನ್ ಬುಕರ್ ಪ್ರಶಸ್ತಿ ಪಡದ ಪಡೆದ ಭಾರತೀಯರು° ●● ಪಡೆದವರು..... ಪುಸ್ತಕ ☘ ಸಲ್ಮಾನ್ ರಶ್ದಿ..... ಮಿಡ್ ನೈಟ್ ಚಿರ್ಲ್ಡನ್ಸ್ ☘ ಅರುಂಧತಿ ರಾಯ್..... ದಿ ಗಾಡ್ ಆಫ್ ಸ್ಮಾಲ್ ಥಿಂಗ್ ☘ ಕಿರಣ್ ದೇಸಾಯಿ.... ಇನ್ ಹೆರಿಟನ್ಸ್ ಆಫ್ ಲಾಸ್ ☘ ಅರವಿಂದ ಅಡಿಗ..... ದಿ ವೈಟ್ ಟೈಗರ್ ☘ ವಿ.ಎಸ್ ನೈಪಾಲ್.... ಇನ್ ದಿ ಪ್ರಿ ಸ್ಟೇಟ್
Показать все...
'ಮ್ಯಾನ್ ಬೂಕರ್' ಪ್ರಶಸ್ತಿ ಯ ಸಂಭಾವ್ಯರ ಪಟ್ಟಿಯಲ್ಲಿ ಸಲ್ಮಾನ್ ರಶ್ದಿ 2019ರ ಸಾಲಿನ 'ಮ್ಯಾನ್ ಬೂಕರ್ ಪ್ರಶಸ್ತಿ'ಯ ಸಂಭಾವ್ಯರ ಕಿರು ಪಟ್ಟಿಗೆ ಸಲ್ಮಾನ್ ರಶ್ದಿಯವರ ಹೊಸ ಪುಸ್ತಕ 'ಕ್ವಿಚೋಟ್' ಆಯ್ಕೆಯಾಗಿದೆ. ಅವರ 'ಮಿಡ್‌ನೈಟ್ಸ್ ಚಿಲ್ಡ್ರನ್' ಕೃತಿಗೆ 1981ರ ಪ್ರಶಸ್ತಿ ಲಭಿಸಿತ್ತು. ಸಂಭಾವ್ಯರ ಕಿರುಪಟ್ಟಿಯಲ್ಲಿ ಇತರ ಐದು ಮಂದಿ ಸಾಹಿತಿಗಳಿದ್ದಾರೆ. ಅವರೆಂದರೆ: ಕೆನಡದ ಮಾರ್ಗರೆಟ್ ಆಯಟ್ವುಡ್ (ಪುಸ್ತಕದ ಹೆಸರು: ದ ಟೆಸ್ಟಾಮೆಂಟ್ಸ್), ಬ್ರಿಟನ್/ಅಮೆರಿಕದ ಲೂಸಿ ಎಲಿಮನ್ (ಡಕ್ಸ್, ನ್ಯೂಬರಿಪೋರ್ಟ್), ಬ್ರಿಟನ್‌ನ ಬರ್ನಾರ್ಡಿನ್ ಎವರಿಸ್ಟೊ (ಗರ್ಲ್, ವುಮನ್, ಅದರ್), ನೈಜೀರಿಯದ ಚಿಗೋಝೀ ಒಬಿಯೋಮ (ಆಯನ್ ಆರ್ಕೆಸ್ಟ್ರಾ ಆಫ್ ಮೈನಾರಿಟೀಸ್) ಮತ್ತು ಟರ್ಕಿ/ಬ್ರಿಟನ್‌ನ ಎಲಿಫ್ ಶಫಕ್ (10 ಮಿನಿಟ್ಸ್ 38 ಸೆಕಂಡ್ಸ್ ಇನ್ ದಿಸ್ ಸ್ಟ್ರೇಂಜ್ ವರ್ಲ್ಡ್). 2019ರ ಪ್ರಶಸ್ತಿ ವಿಜೇತರನ್ನು ಅಕ್ಟೋಬರ್ 14ರಂದು ಲಂಡನ್‌ನ ಗಿಲ್ಡ್‌ಹಾಲ್‌ನಲ್ಲಿ ನಡೆಯಲಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಘೋಷಿಸಲಾಗುವುದು ಹಾಗೂ ಅದನ್ನು ಬಿಬಿಸಿ ನೇರಪ್ರಸಾರ ಮಾಡಲಿದೆ.ಕಿರುಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಎಲ್ಲ ಲೇಖಕರು ತಲಾ 2,500 ಪೌಂಡ್ (ಸುಮಾರು 2.17 ಲಕ್ಷ ರೂಪಾಯಿ) ಮೊತ್ತವನ್ನು ಸ್ವೀಕರಿಸುತ್ತಾರೆ. ಪ್ರಶಸ್ತಿ ವಿಜೇತರು ಇದಕ್ಕೆ ಹೆಚ್ಚುವರಿಯಾಗಿ 50,000 ಪೌಂಡ್ (ಸುಮಾರು 43.5 ಲಕ್ಷ ರೂಪಾಯಿ) ಪ್ರಶಸ್ತಿ ಮೊತ್ತವನ್ನು ಪಡೆಯುತ್ತಾರೆ.
Показать все...
  • Файл недоступен
  • Файл недоступен
  • Файл недоступен
  • Файл недоступен
🌹ಚಂದ್ರಯಾನ-2; ಇಸ್ರೋ ಐತಿಹಾಸಿಕ ಸಾಧನೆ, ಆರ್ಬಿಟರ್ ನಿಂದ ಯಶಸ್ವಿಯಾಗಿ ಬೇರ್ಪಟ್ಟ ವಿಕ್ರಮ್ ಲ್ಯಾಂಡರ್! ನವದೆಹಲಿ: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಚಂದ್ರಯಾನ-2 ಮತ್ತೊಂದು ಐತಿಹಾಸಿಕ ಸಾಧನೆ ಮಾಡಿದ್ದು, ಚಂದ್ರಯಾನ 2 ಆರ್ಬಿಟರ್ ನಿಂದ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಬೇರ್ಪಟ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಈ ಕುರಿತಂತೆ ಇಸ್ರೋ ತನ್ನ ಟ್ವಿಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಇಂದು ಮಧ್ಯಾಹ್ನ 1.15ರಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರಯಾನ2 ಆರ್ಬಿಟರ್ ನಿಂದ ಬೇರ್ಪಟ್ಟಿದೆ. ಆ ಮೂಲಕ ಚಂದ್ರನ ಮೇಲ್ಮೈ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯಲು ಕ್ಷಣಗಣನೆ ಆರಂಭವಾಗಿದೆ. ಈ ಕುರಿತಂತೆ ಮಾಹಿತಿ ನೀಡಿರುವ ವಿಜ್ಞಾನಿಗಳು, ವಿಕ್ರಮ್ ಲ್ಯಾಂಡರ್ ಸೆಪ್ಟೆಂಬರ್ 2 ರಂದು ಚಂದ್ರಯಾನ -2 ರಿಂದ ಬೇರ್ಪಟ್ಟರು, ಸೆಪ್ಟೆಂಬರ್ 7 ರಂದು ಮಧ್ಯಾಹ್ನ 1:55 ಕ್ಕೆ ಚಂದ್ರನ ಮೇಲೆ ಇಳಿಯಲಿದೆ ಎಂದು ಹೇಳಿದ್ದಾರೆ. ಅಂತೆಯೇ ತಾತ್ಕಾಲಿಕ ಯೋಜನೆಯ ಪ್ರಕಾರ, ಸೆಪ್ಟೆಂಬರ್ 3ರಂದು ಮಂಗಳವಾರ ಮೂರು ಸೆಕೆಂಡುಗಳ ಕಾಲ ಸಣ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿದ್ದು, ಲ್ಯಾಂಡರ್‌ ನ ವ್ಯವಸ್ಥೆ ಸಹಜವಾಗಿ ನಡೆಯುತ್ತಿದೆಯೇ ಎಂಬುದನ್ನು 24 ಗಂಟೆಗಳ ಕಾಲ ಪರಿಶೀಲಿಸಲಾಗುತ್ತಿದೆ. ಸೆಪ್ಟೆಂಬರ್ 7 ರಂದು ಮಧ್ಯಾಹ್ನ 1:55 ಕ್ಕೆ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದೆ. ಸೆಪ್ಟೆಂಬರ್ 7, 2019 ರಂದು ಚಂದ್ರನ ಮೇಲ್ಮೈಗೆ ಇಳಿಯುವ ಮೊದಲು, ಭೂಮಿಯಿಂದ ಎರಡು ಆಜ್ಞೆಗಳನ್ನು ನೀಡಲಾಗುವುದು, ಇದರಿಂದ ಲ್ಯಾಂಡರ್‌ ನ ವೇಗ ಮತ್ತು ದಿಕ್ಕನ್ನು ಸುಧಾರಿಸಬಹುದು ಮತ್ತು ಅದು ಮೇಲ್ಮೈಯಲ್ಲಿ ಲಘುವಾಗಿ ಇಳಿಯುತ್ತದೆ ಎಂದು ಇಸ್ರೋ ಅಧ್ಯಕ್ಷ ಡಾ.ಕೆ.ಶಿವನ್ ಹೇಳಿದ್ದಾರೆ. ಈ ಕಾರ್ಯಾಚರಣೆಯ ಯಶಸ್ಸು ಭಾರತವನ್ನು "ಅಮೆರಿಕ, ಚೀನಾ ಮತ್ತು ರಷ್ಯಾದ ನಂತರ ಚಂದ್ರನ ಮೇಲ್ಮೈಯಲ್ಲಿ ಇಳಿಯುವ ನಾಲ್ಕನೇ ರಾಷ್ಟ್ರವಾಗಿ ಮತ್ತು ಚಂದ್ರನ ಮೇಲ್ಮೈಯ ದಕ್ಷಿಣ ಧ್ರುವದಲ್ಲಿ ಇಳಿಯುವ ಮೊದಲ ರಾಷ್ಟ್ರವಾಗಲಿದೆ.
Показать все...
Note:- 🔴 ಸಂವಿಧಾನ ರಚನಾ ಸಭೆ 👉 ಮೊದಲ ಸಭೆ - ಡಿ. ೯ - ೧೯೪೬ • ತಾತ್ಕಾಲಿಕ ಅಧ್ಯಕ್ಷತೆ - ಸಚ್ಚಿದಾನಂದ ಸಿನ್ಹಾ (ಕೇವಲ ಎರಡು ದಿನ ಮಾತ್ರ) 👉 ಎರಡನೆ ಸಭೆ - ಡಿ. ೧೧ - ೧೯೪೬ • ಶಾಶ್ವತ ಅಧ್ಯಕ್ಷತೆ - ಬಾಬು ರಾಜೇಂದ್ರ ಪ್ರಸಾದ್ • ಉಪಾಧ್ಯಕ್ಷ - ಎಚ್. ಸಿ. ಮುಖರ್ಜಿ • ಸಲಹೆಗಾರರು - ಬಿ. ಎನ್. ರಾಯ್ Note:- 📌 ಧ್ಯೇಯಗಳ ನಿರ್ಣಯ 👉 ಮಂಡಿಸಿದವರು - ಜ. ನೆಹರೂ 👉 ಮಂಡನೆ - ಡಿ. ೧೩ - ೧೯೪೬ 👉 ಅಳವಡಿಕೆ - ಜ. ೨೨ - ೧೯೪೭ 👉 ಇದು ಸಂವಿಧಾನಿಕ ಸಂರಚನೆಯ ತತ್ವವನ್ನು ಸಾರುತ್ತದೆ & ಭಾರತದ ಸಂವಿಧಾನದ ಸ್ವರೂಪವನ್ನು ಸ್ಪಷ್ಟಪಡಿಸುತ್ತದೆ.
Показать все...
Note:- 🔹 ಸಂವಿಧಾನದ ನೀಲಿ ‌ನಕಾಶೆ 👉 ೧೯೩೫ ರ ಭಾರತ ಸರ್ಕಾರದ ಕಾಯ್ದೆ 👉 ಬಹುತೇಕ ಅಂಶಗಳನ್ನು ಇದರಿಂದ ಅಳವಡಿಸಿಕೊಳ್ಳಲಾಗಿದೆ 👉 ಆದ್ದರಿಂದ ಇದನ್ನು ನೀಲಿ ನಕಾಶೆ ಎಂದು ಕರೆಯುತ್ತಾರೆ
Показать все...